" ಶಾಲಾ ಮಕ್ಕಳಿಗೆ ದಸರಾ ರಜೆ ಎಷ್ಟುದಿನ...?"
" ಶಾಲಾ ಮಕ್ಕಳಿಗೆ ದಸರಾ ರಜೆ ಘೋಷಣೆ " ಬೆಂಗಳೂರು ಶಾಲಾ ಮಕ್ಕಳು ತುಂಬಾ ದಿನಗಳಿಂದ ಕಾಯುತ್ತಿದ್ದ ಕಾತುರಕ್ಕೆ ತೆರೆ ಬಿದ್ದಿದೆ. ಕೊನೆಗೂ ಶಿಕ್ಷಣ ಇಲಾಖೆ ದಸರಾ ರಜೆಯ ದಿನಾಂಕವನ್ನು ಘೋಷಣೆ ಮಾಡಿದೆ. ಅಕ್ಟೋಬರ್ 3 ರಿಂದ 20ರವರೆಗೆ ದಸರಾ ರಜೆ ಇರಲಿದೆ. ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಿಗೆ ಈ ರಜೆ ಅನ್ವಯ ಆಗಲಿದೆ. ಅದೂ ಕೂಡ ರಾಜ್ಯ ಪಠ್ಯಕ್ರಮ ಹೊಂದಿರುವ ಶಾಲೆಗಳಿಗೆ ಮಾತ್ರ ರಜೆ ಘೋಷಣೆ ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಈ ಬಾರಿ ಅಕ್ಟೋಬರ್ 3 ರಂದು ದಸರಾ ಆರಂಭವಾಗಲಿದೆ. ಅಕ್ಟೋಬರ್ 12 ರಂದು ವಿಜಯದಶಮಿ ಆಚರಣೆ ಮೂಲಕ ಅಂತ್ಯಗೊಳ್ಳಲಿದೆ. ಶಾಲಾ ಮಕ್ಕಳಿಗೆ ಒಟ್ಟು 17 ದಿನಗಳ ಕಾಲ ರಜೆ ಸಿಗಲಿದೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಆಚರಣೆ ನಡೆಯಲಿದೆ.