" ಕಾಡಾನೆ ದಾಳಿಯಿಂದ ರೈತ ಭೀಕರವಾಗಿ ಸಾವು"
" ಕಾಡಾನೆಯ ಭೀಕರ ದಾಳಿಯಿಂದಾಗಿ ರೈತ ಹೀನಾಯವಾಗಿ ಸಾವು" ಚಿಕ್ಕಮಗಳೂರು : ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಸೀತೂರು ಗ್ರಾಮ ಪಂಚಾಯಿತಿಯ ಹಿಂಬದಿಯಲ್ಲಿ ಕುದುರೆಗುಂಡಿ ಸಮೀಪ ಕಾಡಾನೆ ದಾಳಿಗೆ ಒಬ್ಬ ರೈತ ಹೀನಾಯವಾಗಿ ಬಲಿಯಾಗಿದ್ದು ಅತ್ಯಂತ ಅಮಾನುಷ ಹಾಗೂ ಭೀಕರವಾಗಿ ಸಾವನ್ನಪ್ಪಿದ್ದಾನೆ. ಇತ್ತೀಚಿನ ಕಳೆದೊಂದೆರಡು ವಾರಗಳಲ್ಲಿ ಕಾಡಾನೆಯ ಗುಂಪು ಗುಂಪಾಗಿ ಚಿಕ್ಕಮಗಳೂರು ವಿಭಾಗದಲ್ಲಿ ಕಳಸ, ಶೃಂಗೇರಿ (ಕೆರೆಕಟ್ಟೆ ) ಮಲೆನಾಡಿನ ಹಲವು ಭಾಗಗಳಲ್ಲಿ ಸಂಚಾರ ಮಾಡುತ್ತಿದ್ದು ಕಾಡಾನೆಗಳು ಊರಿಗೆ ಬಂದು ಜನಸಾಮಾನ್ಯರು ತಿರುಗಾಡುವ ಮಧ್ಯ ರಸ್ತೆಯಲ್ಲಿ ಹಾಗೂ ರೈತರು ಬೆಳೆದಿರುವಂತಹ ಅಡಿಕೆ ತೋಟ,ಕಾಫಿ, ಭತ್ತದ ಗದ್ದೆಗಳಲ್ಲಿ ರೈತರ ಬೆಳೆಗಳನ್ನು ಹಾಳು ಮಾಡಿ ಮನುಷ್ಯರು ಕಂಡು ಬಂದಲ್ಲಿ ಅವರನ್ನು ಏಕಾಏಕಿ ದಾಳಿ ಮಾಡುವುದಲ್ಲದೆ ಕೊಂದು ಬಿಡುತ್ತಿವೆ, ಹಾಗೆಯೇ ಹಳ್ಳಿಯಿಂದ ತಿರುಗಾಡುವ ಶಾಲಾ ಮಕ್ಕಳು, ಕೆಲ ಸಕ್ಕೆಂದು ತಿರುಗಾಡುವ ಜನರಿಗೆ ಭಯವನ್ನು ಉಂಟು ಮಾಡುವುದಲ್ಲದೆ ಪಶ್ಚಿಮ ಘಟ್ಟದ ಜನರು ಭಯದಿಂದ ಓಡಾಡುವ ಪರಿಸ್ಥಿತಿ ಕೂಡ ನಿರ್ಮಾಣವಾಗಿದೆ. ಅಲ್ಲದೆ ಕೆಲವು ತಿಂಗಳಿಂದ ಮಾಧ್ಯಮಗಳಲ್ಲಿಯೂ ಕಾಡಾನೆ ಹಾವಳಿಯ ವಿಡಿಯೋಗಳು ಬರುತ್ತಲೇ ಇದ್ದು. ನೆನ್ನೆಯ ದಿನ ಎನ್ ಆರ್ ಪು...