Posts

Showing posts from January, 2025

ಬ್ರೇಕಿಂಗ್ ನ್ಯೂಸ್ :ನಕ್ಸಲ್ ಕೋಟೆ ಹೊಂಡ ರವೀಂದ್ರ ಇಂದು ಶರಣಾಗತಿ ಸಾಧ್ಯತೆ..!

Image
ಬ್ರೇಕಿಂಗ್ ನ್ಯೂಸ್  :ನಕ್ಸಲ್ ಕೋಟೆ ಹೊಂಡ ರವೀಂದ್ರ ಇಂದು ಶರಣಾಗತಿ ಸಾಧ್ಯತೆ..!   ಶೃಂಗೇರಿ : ಇತ್ತೀಚೆಗೆ  ಮಂಡಗಾರು ಲತಾ ಸೇರಿದಂತೆ  ಆರು ಜನ ನಕ್ಸಲರು ಶರಣಾಗಿದ್ದರು.  ಇದರ ಬೆನ್ನಲ್ಲೇ ಕೋಟೆ ಹೊಂಡ ರವೀಂದ್ರ ಶೃಂಗೇರಿ ಹಾಗೂ ಕೊಪ್ಪ ವಿಭಾಗದ ಕೆಲವು ಮನೆಗಳಿಗೆ ಭೇಟಿ ನೀಡಿರುವ ಶಂಕೆ ವ್ಯಕ್ತವಾಗಿದೆ.  ಈ ಹಿನ್ನೆಲೆಯಲ್ಲಿ ಆರು ಜನ ನಕ್ಸಲರು  ಶರಣಾಗತಿಯ ಬೆನ್ನಲ್ಲೇ ಕೋಟೆ ಹೊಂಡ ರವೀಂದ್ರವೂ ಸಹ ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ  ಶರಣಾಗಲು ಸಿದ್ದರಾಗಿದ್ದಾರೆ ಎಂದು ಹೇಳಲಾಗಿತ್ತು . ಆದರೆ ಈಗಾಗಲೇ ಶರಣಾಗತಿ  ಸಮಿತಿಯ ಸಂಪರ್ಕಕ್ಕೆ  ಬಂದಿದ್ದು ಇನ್ನು  ನಾಲ್ಕು ದಿನದೊಳಗಾಗಿ  ಮುಖ್ಯವಾಹಿನಿಗೆ ಬಂದು ಸೇರುವ  ಪೂರ್ಣಸಾಧ್ಯತೆಗಳಿವೆ ಎಂದು ಸುದ್ದಿಯಾದ ಬೆನ್ನಲ್ಲೇ  ಇಂದು  ಚಿಕ್ಕಮಗಳೂರಿನಲ್ಲಿ  ಶರಣಾಗುವ ಎಲ್ಲಾ ಸಾಧ್ಯತೆಗಳ ಲಕ್ಷಣಗಳು  ಕಂಡು ಬಂದಿದೆ .           ಕ್ಷಣ ಕ್ಷಣದ ಸುದ್ದಿಗಳಿಗಾಗಿ ನೋಡ್ತಾಯಿರಿ  ಕರ್ನಾಟಕ ಸಿಟಿಝನ್ ನ್ಯೂಸ್ ಸದಾ ನಿಮ್ಮ ಜೊತೆ

ವಾಮಾಚಾರ ಬೆದರಿಕೆ ಒಡ್ಡಿದ್ದ ಲಕ್ಷ್ಮಣ್ ಪಿಡಿಒ ಅಮಾನತು

Image
ವಾಮಾಚಾರ ಬೆದರಿಕೆ ಒಡ್ಡಿದ್ದ ಲಕ್ಷ್ಮಣ್ ಪಿಡಿಒ ಅಮಾನತು   ಚಿಕ್ಕಮಗಳೂರು:( ಕರ್ನಾಟಕ ಸಿಟಿಝನ್ ನ್ಯೂಸ್ ವರದಿ ) ತೇಗೂರು ಗ್ರಾಮ ಪಂಚಾಯಿತಿ ಯಲ್ಲಿ ಅಕ್ರಮ ಅವ್ಯವಹಾರ ಪ್ರಶ್ನಿಸಿದ್ದಕ್ಕೆ ವಾಮಾಚಾರದ ಬೆದರಿಕೆ ಒಡ್ಡಿದ್ದ ಪಿಡಿಒ ಲಕ್ಷ್ಮಣ್ ಅವರನ್ನು ಅಮಾನತ್ತು ಗೊಳಿಸಲಾಗಿದೆ.   ತೇಗೂರು ಗ್ರಾಮ ಪಂಚಾಯಿತಿಯಲ್ಲಿ ಅಕ್ರಮ ಖಾತೆ, ಹಣ ದುರುಪಯೋಗ, ಕರ್ತವ್ಯ ಲೋಕದ ಆರೋಪದ ಮೇಲೆ ಅಮಾನತ್ತು ಮಾಡಲಾಗಿದೆ. ಗ್ರಾಮೀಣ ಪ್ರದೇಶದ ಠಾಣಾ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಕೀರ್ತನ ಅವರು ನಿನ್ನೆ ಅಮಾನತುಗೊಳಿಸಿ ಆದೇಶವನ್ನು ಹೊರಡಿಸಿದ್ದಾರೆ.         ಕ್ಷಣ ಕ್ಷಣದ ಸುದ್ದಿಗಳಿಗಾಗಿ ನೋಡ್ತಾಯಿರಿ ಕರ್ನಾಟಕ ಸಿಟಿಝನ್ ನ್ಯೂಸ್ ಸದಾ ನಿಮ್ಮ ಜೊತೆ

ದೇಶದಲ್ಲಿ ಸಂಚಲನ ಮೂಡಿಸಿದ ಜಿಬಿಎಸ್​ ಕಾಯಿಲೆ, ಹೈದರಾಬಾದ್‌ನಲ್ಲಿ ಮೊದಲ ಕೇಸ್‌ ಪತ್ತೆ!

Image
ದೇಶದಲ್ಲಿ ಸಂಚಲನ ಮೂಡಿಸಿದ ಜಿಬಿಎಸ್​ ಕಾಯಿಲೆ, ಹೈದರಾಬಾದ್‌ನಲ್ಲಿ ಮೊದಲ ಕೇಸ್‌ ಪತ್ತೆ!  ಹೈದರಾಬಾದ್ : ಲೆನ್‌ ಬ್ಯಾರೆ ಸಿಂಡ್ರೋಮ್ ದೇಶದಲ್ಲಿ ಸಂಚಲನ ಮೂಡಿಸುತ್ತಿದೆ. ದೇಶಾದ್ಯಂತ ಜಿಬಿಎಸ್ ಪ್ರಕರಣಗಳು ಹೆಚ್ಚುತ್ತಿದ್ದು ಆತಂಕ ಹುಟ್ಟಿಸಿದೆ. ಇದೀಗ ತೆಲಂಗಾಣದಲ್ಲಿ ಮೊದಲ ಜಿಬಿಎಸ್‌ನ ಪ್ರಕರಣ ದಾಖಲಾಗಿದೆ. ಹೈದರಾಬಾದ್‌ನಲ್ಲಿ ಗ್ಯುಲೆನ್‌ ಬ್ಯಾರೆ ಸಿಂಡ್ರೋಮ್ ಕೇಸ್ ಪತ್ತೆ ಹಚ್ಚಲಾಗಿದೆ. ಸಿದ್ದಿಪೇಟೆಯ ಮಹಿಳೆಯೊಬ್ಬರು ಜಿಬಿಎಸ್ ಲಕ್ಷಣಗಳನ್ನು ಹೊಂದಿದ್ದಾರೆ. ಹೈದರಾಬಾದ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 4 ದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಜಿಬಿಎಸ್‌ನಿಂದ ಮಗು ಸೇರಿ ಮೂವರು ಜೀವ ಕಳೆದುಕೊಂಡಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಸುಮಾರು 130 ಜಿಬಿಎಸ್ ಶಂಕಿತ ಪ್ರಕರಣಗಳು ದಾಖಲಾಗಿವೆ. ಮೊದಲ ಜಿಬಿಎಸ್ ಪ್ರಕರಣ ದಾಖಲಾದ ಬೆನ್ನಲ್ಲೇ ತೆಲಂಗಾಣ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕಿನಿಂದ ಇದು ಬರುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಜನರಿಗೆ ಜಿಬಿಎಸ್ ಸೋಂಕು ತಗಲುತ್ತದೆ. ಈ ವೈರಸ್‌ ನರಗಳ ಮೇಲೆ ಪರಿಣಾಮ ಬೀರುತ್ತದೆ. ಲಕ್ಷಣಗಳೇನು? ಕೈ ಕಾಲು, ಮೊಣಕೈ ಹಾಗೂ ಮೊಣಕಾಲಿನಲ್ಲಿ ಚುಚ್ಚಿದಂತ ಅನುಭವ ಇಡೀ ದೇಹದಲ್ಲಿ ವೀಕ್‌ನೆಸ್‌ ನಡೆಯಲು ಅಥವಾ ಮೆಟ್ಟಿಲು ಹತ್ತಲು ಆಗದೇ ಇರುವುದು ಮಾತನಾಡಲು, ತಿನ್ನಲು, ನುಂಗಲು ಎಲ್ಲದಕ್ಕೂ ಸಮಸ್ಯೆ ಆಗುವುದು ...

ತಲ್ವಾರ್’ನಿಂದ ದಾಳಿ ಪ್ರಕರಣ: ಇಬ್ಬರ ಬಂಧನ

Image
ತಲ್ವಾರ್’ನಿಂದ ದಾಳಿ ಪ್ರಕರಣ: ಇಬ್ಬರು ಆರೋಪಿಗಳ ಬಂಧನ   ಶೃಂಗೇರಿ: ಕಳೆದ ಮೂರು ದಿನಗಳ ಹಿಂದೆ ಶೃಂಗೇರಿಯ ಶಿಡ್ಲೆಯಲ್ಲಿ  ಮಂಗಳವಾರ ಸುಮುಖ ಎಂಬ ಯುವಕನ ಮೇಲೆ ದುಷ್ಕರ್ಮಿಗಳು ಕಾರಿನಲ್ಲಿ ಬಂದು ಏಕಾಏಕಿ  ತಲ್ವಾರ್ ನಿಂದ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನೆಮ್ಮಾರ್ʼನ ಶಬರೀಶ್ (23) ಹಾಗೂ ಎನ್.‌ ಆರ್‌ ಪುರದ ಕಟ್ಟಿನಮನೆ ವಾಸಿ ವಿವೇಕ (24) ಬಂಧಿತ ಆರೋಪಿಗಳು.           ಕಳೆದ ಮೂರು ದಿನಗಳ ಹಿಂದೆ ಮಂಗಳವಾರ ಯುವಕನ ಮೇಲೆ ತಲ್ವಾರ್’ನಿಂದ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನೆಮ್ಮಾರ್ʼನ ಶಬರೀಶ್ (23) ಹಾಗೂ ಎನ್.‌ ಆರ್‌ ಪುರದ ಕಟ್ಟಿನಮನೆ ವಾಸಿ ವಿವೇಕ (24) ಬಂಧಿತ ಆರೋಪಿಗಳು. ಕಾರಣ ಇನ್ನು ತಿಳಿದು ಬಂದಿಲ್ಲ  ಹೆಚ್ಚಿನ ಮಾಹಿತಿ  ಪೋಲಿಸ್ ಮೂಲಗಳಿಂದ ತಿಳಿಯಬೇಕಾಗಿದೆ. ಆರೋಪಿಗಳನ್ನು ಬಂಧಿಸುವಲ್ಲಿ ಶೃಂಗೇರಿ ಪೊಲೀಸ್ ಸಂಪೂರ್ಣ ಸಫಲರಾಗಿದ್ದಾರೆ.       ಕ್ಷಣ ಕ್ಷಣದ ಸುದ್ದಿಗಳಿಗಾಗಿ ನೋಡ್ತಾಯಿರಿ ಕರ್ನಾಟಕ ಸಿಟಿಝನ್ ನ್ಯೂಸ್ ಸದಾ ನಿಮ್ಮ ಜೊತೆ 

ವೈದ್ಯೆಯ ಅಪಹರಿಸಿ ಸಾಮೂಹಿಕ ಅತ್ಯಾಚಾರ ಪ್ರಕರಣ : ನಾಲ್ವರು ಅಪರಾಧಿಗಳಿಗೆ 20 ವರ್ಷ ಜೈಲು

Image
ವೈದ್ಯೆಯ ಅಪಹರಿಸಿ ಸಾಮೂಹಿಕ ಅತ್ಯಾಚಾರ ಪ್ರಕರಣ : ನಾಲ್ವರು ಅಪರಾಧಿಗಳಿಗೆ 20 ವರ್ಷ ಜೈಲು ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಕಟ್ಪಾಡಿಯಲ್ಲಿ ವೈದ್ಯೆಯೊಬ್ಬರನ್ನು ಆಟೋದಲ್ಲಿ ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮಹಿಳಾ ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಈ ಪ್ರಕರಣವು ರಾಜ್ಯದಲ್ಲಿ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರತಿಪಕ್ಷಗಳು ಸರ್ಕಾರದ ವಿರುದ್ದ ಮುಗಿಬಿದ್ದು ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿತ್ತು. ಆಟೋ ಚಾಲಕ ಪಾರ್ಥಿಬನ್, ದಿನಗೂಲಿ ನೌಕರ ಮಣಿ ಅಲಿಯಾಸ್ ಮಣಿಕಂಠನ್ ಮತ್ತು ಆತನ ಸ್ನೇಹಿತರಾದ ಭರತ್ ಮತ್ತು ಸಂತೋಷ್ ಶಿಕ್ಷೆಗೆ ಗುರಿಯಾದ ಅಪರಾಧಿಗಳು. ಪ್ರಕರಣದ ಐದನೇ ಶಂಕಿತ ಆರೋಪಿ ಬಾಲಾಪರಾಧಿ ನ್ಯಾಯ ಮಂಡಳಿಯ ಮುಂದೆ ವಿಚಾರಣೆಯನ್ನು ಎದುರಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ (ಜ.30) ಅಪರಾಧಿಗಳನ್ನು ಪೊಲೀಸರು ವೆಲ್ಲೂರು ಸೆಷನ್ಸ್ ನ್ಯಾಯಾಧೀಶೆ (ಮಹಿಳಾ ತ್ವರಿತ ನ್ಯಾಯಾಲಯ) ಎಸ್. ಮಾಗೇಶ್ವರಿ ಬಾನು ರೇಖಾ ಅವರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಜೈಲು ಶಿಕ್ಷೆ ಮತ್ತು ತಲಾ 25 ಸಾವಿರ ರೂ. ದಂಡ ವಿಧಿಸಿದ್ದಾರೆ. ಮಾರ್ಚ್ 16, 2022ರಂದು ಮಧ್ಯರಾತ್ರಿ 12.30ಕ್ಕೆ ಸಂತ್ರಸ್ತೆ ವೈದ್ಯೆ ಆಕೆಯ ಪುರುಷ ಸಹೋದ್ಯೋಗಿಯೊಂದಿಗೆ ಕಟ್ಪಾಡಿಯಲ್ಲಿ ಆಟೋಗಾಗಿ ಕಾಯುತ್ತಿದ್ದರು. ಈ ವೇಳೆ ಆಟೋದಲ್ಲಿ ಬಂದ ಐವರ ತಂ...

ರೈಲ್ವೆ ಹಳಿಗೆ ಸಿಲುಕಿ ಯುವಕ ಸಾವು

Image
"ರೈ ಲ್ವೆ ಹಳಿಗೆ ಸಿಲುಕಿ ಯುವಕ ಸಾವು" ಚಿಕ್ಕಮಗಳೂರು :ರೈಲ್ವೆ ಹಳಿಗೆ ಯುವಕನೊರ್ವ ಸಿಲುಕಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ತಾಲೂಕಿನ ಅಂಬಳೆ ಹೋಬಳಿ ಹರಿಹರದಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಓಂಕಾರೇಗೌಡ ಎಂಬುವರ ಪುತ್ರ ಯತೀಶ್ (21) ರೈಲ್ವೆ ಹಳಿಗೆ ಸಿಲುಕಿ ಸಾವನ್ನಪ್ಪಿರುವ ಯುವಕ ಪ್ರೀತಿ ವೈಪಲ್ಯದಿಂದಾಗಿ ಯುವಕ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದ್ದು, ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಅರಸೀಕೆರೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.       ಕ್ಷಣ ಕ್ಷಣದ ಸುದ್ದಿಗಳಿಗಾಗಿ ನೋಡ್ತಾಯಿರಿ ಕರ್ನಾಟಕ ಸಿಟಿಝನ್ ನ್ಯೂಸ್ ಸದಾ ನಿಮ್ಮ ಜೊತೆ

ಅಕ್ರಮ ಗಾಂಜಾ ಮಾರಾಟ ಇಬ್ಬರ ಬಂಧನ: ಚಿಕ್ಕಮಗಳೂರು

Image
ಅಕ್ರಮ ಗಾಂಜಾ ಮಾರಾಟ ಇಬ್ಬರ ಬಂಧನ: ಚಿಕ್ಕಮಗಳೂರು               ಚಿಕ್ಕಮಗಳೂರು : ನಗರದ ಬೈಪಾಸ್ ರಸ್ತೆಯಲ್ಲಿರುವ ದಂಟರಮಕ್ಕಿ ಕ್ರಾಸ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು CEN ಪೊಲೀಸರ ಗವಿರಾಜ್ ತಂಡ ಬಂದಿಸಿದ್ದಾರೆ. ವಸೀಮ್ ಪಾಷಾ,ನಾಜಿಮಾ ಬಂದಿತ ಆರೋಪಿಗಳಾಗಿದ್ದು ಬಂಧಿತರಿಂದ 10 ಕೆ ಜಿ 4ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ CEN ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.     ಕ್ಷಣ ಕ್ಷಣದ ಸುದ್ದಿಗಳಿಗಾಗಿ ನೋಡ್ತಾಯಿರಿ ಕರ್ನಾಟಕ ಸಿಟಿಝನ್ ನ್ಯೂಸ್ ಸದಾ ನಿಮ್ಮ ಜೊತೆ