Posts

Showing posts from October, 2024

"ಮನೆಯಲ್ಲೇ ಹೂತಿಟ್ಟ ಕದ್ದ ಚಿನ್ನ ಸಮೇತ ಆರೋಪಿಯ ಬಂಧನ"

ತೀರ್ಥಹಳ್ಳಿ :                 ಹಲವಾರು ಅಪರಾಧಗಳಲ್ಲಿ ಭಾಗಿಯಾಗಿರುವ ಹಾಗೇನೆ ಇತ್ತೀಚೆಗೆ ಬೆಂಗಳೂರಿನಲ್ಲಿ ಚಿನ್ನವನ್ನು ಕದ್ದು ತೀರ್ಥಳ್ಳಿಯ ಮನೆ ಒಂದರಲ್ಲಿ ತಂದಿಟ್ಟಿದ ಆರೋಪಿಯನ್ನು ಬೆಂಗಳೂರಿನ ಮಾಗಡಿ ಪೊಲೀಸರು ತೀರ್ಥಹಳ್ಳಿಗೆ ಕರೆ ತಂದಿದ್ದ ಘಟನೆ ನಡೆದಿದೆ.              ಆರೋಪಿ ಹಮೀದ್ ಹಂಝ ಎಂಬಾತ ಬೆಂಗಳೂರಿನ ಮಾಗಡಿಯಲ್ಲಿ ಕಳ್ಳತನ ಮಾಡಿ ತೀರ್ಥಹಳ್ಳಿಯ ಬೆಟ್ಟಮಕ್ಕಿಯಲ್ಲಿ ತಮ್ಮ ಮನೆಯಲ್ಲಿ ತಂದು ಹೂತಿಟ್ಟಿದ್ದ ಎನ್ನಲಾಗಿದ್ದು ಈತನನ್ನು ಕರೆತಂದಿದ್ದ ಮಾಗಡಿ ಪೊಲೀಸರು ಒಂದು ಕೆಜಿಗೆ ಹೆಚ್ಚು ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.              ಮೂಲತಹ ಆಗುಂಬೆಯ ಸಮೀಪದ ಗುಡ್ಡೇಕೇರಿಯ ಹಮೀದ್ ಹಂಝನ ಮೇಲೆ 70 ರಿಂದ 80 ಕ್ಕೂ ಹೆಚ್ಚು ಕೇಸುಗಳು ಈತನ ಮೇಲೆ ಇದ್ದು ಆಗುಂಬೆ ಸಮೀಪದ ಹೊಸಳ್ಳಿ ವೆಂಕಟೇಶ್ ಕೊಲೆ ಕೇಸಿನಲ್ಲಿ ಈತ ಬಾಗಿಯಾಗಿದ್ದು ಈಗ ಬೆಂಗಳೂರು ಮಾಗಡಿ ಪೊಲೀಸರ ವಶದಲ್ಲಿದ್ದಾನೆ.