Posts

Showing posts from August, 2024

"ಸುಲಭವಾಗಿ ಗೋಲ್ ಗುಪ್ಪಾ ತಯಾರಿಸ್ಬೇಕಾ ಮಾಡ್ಬೇಕಾ....ನೋಡಿ ಇಲ್ಲೊಬ್ರು ತೋರ್ಸಿದ್ದಾರೆ.

Image
"ಸುಲಭವಾಗಿ ಗೋಲಗುಪ್ಪ ಮಾಡಬೇಕಾ "ಬನ್ನಿ ತೋರಿಸ್ತೇವೆ.....!       ನೋಡಿ ನೀವು ಕೂಡ ಸುಲಭ ವಾಗಿ ಕೆ ಜಿ ಗಟ್ಟಲೆ ಗೋಲ್ ಗುಪ್ಪ ಮಾಡಲು ಕಲೀಬೇಕಾದರೆ ನಮ್ಮ ಕೊಪ್ಪ ದ ಮಾರ್ಕೆಟ್ ರಸ್ತೆ ಯಲ್ಲಿರುವ ಉತ್ತರ ಭಾರತದ ಹಿಂದಿವಾಲಾ ಹುಡುಗರು ತಾವು ಕಾಲಿನಿಂದ ತುಳಿದು ಹಿಟ್ಟನ್ನು ಕಲಿಸುವ ವಿಡಿಯೋ ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿ ಮಾಡುತ್ತಿದ್ದೂ ಚರ್ಚೆಗೆ ಘಾಸವಾಗಿದೆ.ಈವೊಂದು ಗೋಲಗುಪ್ಪ ತಯಾರು ಮಾಡುವ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದ್ದು ಈತ ಕೊಪ್ಪದಿಂದ 20 ದಿನಗಳ ಹಿಂದೆಯೇ ಕಾಲ್ಕಿತ್ತಿದ್ದಾನೆ ಎಂದು ಮನೆಯ ಮಾಲೀಕರು ತಿಳಿಸಿದ್ದಾರೆ.                    ಬಹಳಷ್ಟು ಅಂಗಡಿ ಗಳ ಪೂರಿ ಗಳು ಕೂಡ ಇದೆ ರೀತಿಯಲ್ಲಿ ತಯಾರಾಗುತ್ತವೆ ಇದರ ಬಗ್ಗೆ ಸಂಬಂಧ ಪಟ್ಟ ಅಧಿಕಾರಿ ಗಳು ನಿಗಾ ವಹಿಸಿ ಕ್ರಮ ತೆಗೆದು ಕೊಳ್ಳ ಬೇಕೆಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ..                        Nಈರೀತಿ ಬೀದಿ ಬದಿಯ ಆಹಾರ ಪದಾರ್ಥ ಗಳನ್ನು ತಯಾರಿ ಮಾಡಿ ಚಿಕ್ಕ ಚಿಕ್ಕ ಮಕ್ಕಳು ಶಾಲಾ ಕಾಲೇಜು ಮಕ್ಕಳು ಪ್ರತಿನಿತ್ಯ ತಿಂದು ಆರೋಗ್ಯದ ಮೇಲೆ ತೀವ್ರವಾಗಿ ಕೆಟ್ಟ ಪರಿಣಾಮ ಬೀರುತ್ತಿದೆ ಇದರ ವಿರುದ್ಧ ಕ್ರಮ ಜಾರುಗಬೇಕು ಎಂದೂ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

" ನಾಡಿಗೆ ಕೀರ್ತಿ ತಂದ ಮಲೆನಾಡ ಯುವಕ "

Image
" ರಾಜ್ಯ ಮಟ್ಟದಲ್ಲಿ ಚಿನ್ನದ ಪದಕ ಗಳಿಸಿ ರಾಜ್ಯಕ್ಕೆ ಕೀರ್ತಿ ತಂದ ಯುವಕ "           ಕೊಪ್ಪ : ತಾಲ್ಲೂಕಿನ ಸಣ್ಣಕೆರೆ ವಾಸಿ"ವಾರ್ತಾ ಸಾರಥಿ" ಸಂಪಾದಕರಾದ ಅಬ್ದುರಹ್ಮಮಾನ್ ಹಾಗೂ ಜಮೀಲ ಇವರ ಪುತ್ರ ಫಾಝಿಲ್ ರೆಹಮಾನ್ ಇವರು ಬೆಂಗಳೂರಿನ "ಸೆಂಟ್ ಫ್ರಾನ್ಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದೂ ಚಿನ್ನದ ಪದಕ ಗಳಿಸಿದ್ದಲ್ಲದೆ ಪೋಷಕರ ಹಾಗೂ ನಾಡಿನ ಕೀರ್ತಿ ಯನ್ನು ಹೆಚ್ಚಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.            ಮೈಸೂರಿನಲ್ಲಿ ನಡೆದ ಸೀನಿಯರ್ ವೈಟ್ಲಿಫ್ಟಿಂಗ್ 102 ಕೆ ಜಿ ವಿಭಾಗದಲ್ಲಿ ಫಾಝಿಲ್ ರೆಹಮಾನ್ ಒಟ್ಟು 322 ಕೆ ಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಜೊತೆಗೆ ದಾಖಲೆ ಮಾಡಿದ್ದಾರೆ.              ಹಿಂದಿನ 2022/23ನೇ ಸಾಲಿನ ಎರಡು ವರ್ಷ ದಲ್ಲಿ ಖೇಲೋ ಇಂಡಿಯಾ ದಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕ ಪಡೆದು ಕೊಂಡಿದ್ದು ಮೂರನೇ ವರ್ಷದಲ್ಲಿ ಚಿನ್ನದ ಪದಕ ಪಡೆದು ಸಾಧನೆಯ ಜೊತೆಗೆ ದಾಖಲೆ ನಿರ್ಮಿಸಿದ್ದಾರೆ.        ಮುಂಬರುವ ಅಕ್ಟೋಬರ್ ನಲ್ಲಿ ಹಿಮಾಚಲ ಪ್ರದೇಶದಲ್ಲಿ ನಡೆಯುವ "ನ್ಯಾಷನಲ್ ವೈಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ "ನಲ್ಲಿ ಫಾಝಿಲ್ ರೆಹಮಾನ್ ಕರ್ನಾಟಕ ರಾಜ್ಯ ತಂಡದಿಂದ ಪ್ರತಿನಿಧಿಸಲಿದ್ದಾರೆ.ಹೀಗೆಯೇ ಮುಂದಿನ ಸ್ಪರ್ಧೆ ಗಳಲ್ಲಿ ಭಾಗವಹಿಸುವ ಇವರಿಗೆ ನಮ್...

"ಕಳ್ಳ ಪೊಲೀಸ್ ಆಟದಲ್ಲಿ ಬೆರಗಾದ ಊರ ಜನತೆ "

Image
" ಕೊಪ್ಪ ಶೃಂಗೇರಿಯಲ್ಲಿ ಕಳ್ಳಪೋಲಿಸ್ ಆಟ ಬೆಪ್ಪಾದ ಗ್ರಾಮಸ್ಥರು "            ಒಂದಾದ ಮೇಲೊಂದು ಕಳ್ಳತನ ಆಗಸ್ಟ್ 24 ರ ಸಂಜೆ 7ರಿಂದ 8ಘಂಟೆ ಸುಮಾರಿಗೆ  ಕೊಪ್ಪ ತಾಲ್ಲೂಕು ಹರಿಹರಪುರ ಠಾಣಾ ವ್ಯಾಪ್ತಿಯ ನಿಲುವಾಗಿಲುವಿನಲ್ಲಿ ಸತೀಶ್ ಕಲ್ಮಕ್ಕಿ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ಸಂಧರ್ಭ ದಲ್ಲಿ ಮತ್ತೊಂದು ಕಳ್ಳತನ ವಾಗಿದ್ದು ಪೊಲೀಸ್ ಇಲಾಖೆ ಕಣ್ಣು ಮುಚ್ಚಿ ಕುಳಿತಿದ್ದು ಸಾರ್ವಜನಿಕರಿಗೆ ರಕ್ಷಣಾ ಇಲಾಖೆ ಇದ್ದೂ ಇಲ್ಲದ ಪರಿಸ್ಥಿತಿ ಉಂಟಾಗಿದೆ.ಮನೆಯಲ್ಲಿ ಇಟ್ಟಿದ್ದ ಸುಮಾರು 50ಸಾವಿರ ನಗದು ಹಾಗೂ 1 ಚಿನ್ನದ ಬ್ರಾಸ್ ಲೆಟ್ ಕಳ್ಳತನ ವಾಗಿದೆ.ಕಳೆದ 3ತಿಂಗಳಿನಿಂದ ಸುತ್ತ ಮುತ್ತಲಿನ ಗ್ರಾಮಗಳಾದ ಖಳನಾಯಕಿನಕಟ್ಟೆ,ಹರಿಹರಪುರ,ಮತ್ವಾನಿ,ದೇವರಮನೆ,ಅಂಬಲಿಕೆ,ಹರಿಹರಪುರ,ನಿಲುವಾಗಿಲು,ಕೊಪ್ಪ ತಾಲ್ಲೂಕಿನ ಹಾಗೂ ಶೃಂಗೇರಿ ತಾಲ್ಲೂಕಿನ ಹಲವು ಭಾಗಗಳಲ್ಲಿ ನಿರಂತರ ಕಳ್ಳತನ ಹೆಚ್ಚಾಗಿದ್ದು ಕಳ್ಳಾ ಪೊಲೀಸ್ ಆಟ ವಾಗಿಬಿಟ್ಟಿದೆ ಇನ್ನೂ ಎಚ್ಚತ್ತು ಕೊಳ್ಳದ ಪೊಲೀಸ್ ಇಲಾಖೆ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು,ಇದರಿಂದ ಬೆಚ್ಚು ಬಿದ್ದ ಗ್ರಾಮಸ್ಥರು ದಿಕ್ಕು ತೋಚದೆ ಬೆಪ್ಪಾಗಿದ್ದಾರೆ ಈಗಲಾದರೂ ರಕ್ಷಣಾ ಇಲಾಖೆ ಕಳ್ಳರನ್ನು ಭಂದಿಸುವಲ್ಲಿ ಯಶಸ್ವಿ ಯಾಗುತ್ತರಾ ಎಂದು ಕಾದು ನೋಡಬೇಕಾಗಿದೆ.

" ಕಾಡಿನ ಮದ್ಯೆ ಒಂಟಿ ವೃಧ್ಯೆ ಸಂಕಷ್ಟಕ್ಕೆ ಅಧಿಕಾರಿಗಳ ಭೇಟಿ "

Image
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೆ ಗ್ರಾಮ ವ್ಯಾಪ್ತಿಗೆ ಬರುವ ಕಾರ್ಲೆ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ಗಾಳಿ ಮಳೆಗೆ ಮನೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಬೆಲ್ಲಮ್ಮನವರ ಕಾಲಿಗೆ ಮರದ ಕೊಂಬೆ ಬಿದ್ದು ಗಾಯಗಳು ಲಾಗಿತ್ತು ಮತ್ತು ಮನೆಯ ಮೇಲೆ ಮರ ಬಿದ್ದಿದ್ದರಿಂದ ಮನೆಯ ಮೇಲ್ಚಾವಣಿ ಸಂಪೂರ್ಣ ಜಖಂ ಗೊಂಡಿದೆ ಕೂಡಲೇ ಬೆಲ್ಲಮ್ಮನವರನ್ನು ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಕಳಸ ತಹಸಿಲ್ದಾರ್ ಅಂದಿನ ತಹಶೀಲ್ದಾರ್ ಬಸವರಾಜ್ ಅವರು ಹಾಗೂ ಉಪ ತಹಸಿಲ್ದಾರ್ ಆರ್ ಐ ವಿ ಎ . ಹಾಗೂ ಎಲ್ಲಾ ಅಧಿಕಾರಿಯನ್ನು ಸ್ಥಳಕ್ಕೆ ಭೇಟಿ ನೀಡಿದರು. ಬೆಲ್ಲಮ್ಮನವರ ಮನೆ ನೋಡಿ ಕೂಡಲೇ ನಿಮಗೆ ಪರಿಹಾರ ನೀಡುವುದಾಗಿ ಭರವಸೆಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಬೆಲ್ಲಮ್ಮನವರನ್ನು ಅವರ ಗ್ರಾಮದಿಂದ ಅವರನ್ನು ಕರೆದುಕೊಂಡು ಬರುವ ದಾರಿಯಲ್ಲಿ ಒಂದು ಹಳ್ಳ ಸಿಗುತ್ತೆ ಅದನ್ನು ದಾಟಬೇಕಾದರೂ ತುಂಬಾನೇ ಕಷ್ಟ ಹಾಗಿತ್ತು ಯಾವ ವಾಹನಗಳು ಕೂಡ ಇತ್ತ ಕಡೆ ಬರುವುದಿಲ್ಲ ಆದ್ದರಿಂದ ಇವರನ್ನು ಜೋಲಿಗೆ ಮುಖಾಂತರನೇ ಒಂದು ಕಿಲೋಮೀಟರ್ ದೂರದಿಂದ ಕರೆ ತರಲಾಯಿತು ಆನಂತರ ಪಿಕಪ್ ನಲ್ಲಿ ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತರಲಾಯಿತು ಇದನ್ನು ಎಲ್ಲಾ ಮಾಧ್ಯಮದಲ್ಲೂ ಪ್ರಸಾರ ಆದ ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಎಲ್ಲಾ ಮಾಧ್ಯಮದಲ್ಲಿ ಪ್ರಸಾರ ಆದ ಕೂಡಲ...