Posts

Showing posts from October, 2025

ಶೃಂಗೇರಿಯಲ್ಲಿ ಆನೆ ದಾಳಿ; ಇಬ್ಬರ ಬಲಿ ; ಗ್ರಾಮಸ್ಥರಿಂದ ಅಧಿಕಾರಿಗಳ ವಿರುದ್ಧ ತೀವ್ರ ಪ್ರತಿಭಟನೆ..!

Image
ಶೃಂಗೇರಿಯಲ್ಲಿ ಆನೆ ದಾಳಿ; ಇಬ್ಬರ ಬಲಿ ; ಗ್ರಾಮಸ್ಥರಿಂದ ಅಧಿಕಾರಿಗಳ ವಿರುದ್ಧ ತೀವ್ರ ಪ್ರತಿಭಟನೆ..!  ಶೃಂಗೇರಿ: ತಾಲ್ಲೂಕಿನ ಕೆರೆಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆನೆ ದಾಳಿಗೆ ಇಬ್ಬರು ಗ್ರಾಮಸ್ಥರು ಜೀವ ತೆತ್ತಿದ್ದಾರೆ. ಕೊಟ್ಟಿಗೆಗೆ ಸೊಪ್ಪು ತರಲು ಹೋಗಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಏಕಾಏಕಿ ಕಾಡಾನೆಯೊಂದು ದಾಳಿ ನಡೆಸಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಾಲೂಕಿನ ಕೆರೆಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಡುಬಾ ಎಲ್ಲಾರ ಸಮೀಪ ಈ ಘಟನೆ ನಡೆದಿದೆ. ಮೃತರನ್ನು ಉಮೇಶ್ ಮತ್ತು ಹರೀಶ್ ಎಂದು ಗುರುತಿಸಲಾಗಿದೆ. ಹಸುವಿನ ಕೊಟ್ಟಿಗೆಗೆ ಸೊಪ್ಪು ತರುವುದಕ್ಕಾಗಿ ಸಮೀಪದ ಅರಣ್ಯ ಪ್ರದೇಶಕ್ಕೆ ಉಮೇಶ್ ಮತ್ತು ಹರೀಶ್ ತೆರಳಿದ್ದರು. ಆನೆ ಇರುವಿಕೆಯ ಅರಿವೇ ಇರದ ಇಬ್ಬರ ಮೇಲೆ ಎದುರಾದ ಕಾಡಾನೆ, ತೀವ್ರವಾಗಿ ದಾಳಿ ನಡೆಸಿದ ಪರಿಣಾಮ ಇಬ್ಬರೂ ಸಾವನ್ನಪ್ಪಿದ್ದಾರೆ. ಘಟನೆಯಿಂದಾಗಿ ಸ್ಥಳೀಯರಲ್ಲಿ ತೀವ್ರ ಆಕ್ರೋಶ ಭುಗಿಲೆದ್ದಿದ್ದು, ಸ್ಥಳೀಯರು ಮತ್ತು ರೈತ ಸಮಿತಿಗಳು ಪ್ರತಿಭಟನೆಗೆ ಕರೆ ನೀಡಿವೆ. ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರರಿಗೆ ಮತ್ತು ಅರಣ್ಯ ಅಧಿಕಾರಿಗಳಿಗೆ ಗ್ರಾಮಸ್ಥರು ಘರಾವ್ ಹಾಕಿದ್ದಾರೆ. ಈ ದುರಂತಕ್ಕೆ ಅಧಿಕಾರಿಗಳೇ ಕಾರಣ ಎಂದು ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದರು. ಈ ದುರಂತದಿಂದಾಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂ...

ವಿಷ ಸೇವಿಸಿ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟ ಹೆಂಡತಿ.. ಮಗುನ ಬಿಟ್ಟು, ಗಂಡ, ಅತ್ತೆ, ಮಾವ, ನಾದಿನಿ ಎಲ್ಲರೂ ಪರಾರಿ.."

Image
ವಿಷ ಸೇವಿಸಿ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟ ಹೆಂಡತಿ.. ಮಗುನ ಬಿಟ್ಟು, ಗಂಡ, ಅತ್ತೆ, ಮಾವ, ನಾದಿನಿ ಎಲ್ಲರೂ ಪರಾರಿ.." ತೀರ್ಥಹಳ್ಳಿ : ಗಂಡನ ಮನೆಯಲ್ಲಿ ಕಿರುಕುಳ ಹಿನ್ನೆಲೆಯಲ್ಲಿ ಕಳೆನಾಶಕ ಸೇವಿಸಿದ್ದ ಗೃಹಿಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಜೀವ ಬಿಟ್ಟಿರುವ ಘಟನೆ ಎನ್​ಆರ್​ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಹಿಳೆ ಸಾವನ್ನಪ್ಪುತ್ತಿದ್ದಂತೆ ಗಂಡನ ಮನೆಯವರೆಲ್ಲ ಪರಾರಿ ಆಗಿದ್ದಾರೆ. ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಮೀಪದ ಶಂಕರಳ್ಳಿ ಈಶ್ವರಪ್ಪ ಎಂಬುವರ ಪುತ್ರಿ ಪೂಜಾ (30) ಮೃತ ದುರ್ದೈವಿ. ಮೂರು ವರ್ಷಗಳ ಹಿಂದೆ ತಾಲೂಕಿನ ಮಾವಿನಕೆರೆ ಶೆಟ್ಟಿಕೊಪ್ಪದ ಶರತ್ ಎಂಬುವನೊಂದಿಗೆ ಪೂಜಾಳನ್ನ ಮದುವೆ ಮಾಡಿಕೊಡಲಾಗಿತ್ತು. ಈ ದಂಪತಿಗೆ ಎರಡೂವರೆ ವರ್ಷದ ಗಂಡು ಮಗು ಕೂಡ ಇತ್ತು.  ಆದರೆ ಗಂಡನ ತಂದೆ, ತಾಯಿ ಹಾಗೂ ಸಹೋದರಿ ಸೇರಿ ಸೊಸೆಗೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪವಿದೆ. ಇದರಿಂದ ಬೇಸತ್ತ ಪೂಜಾ, ತಾಯಿ ಮನೆಗೆ ಬಂದು ತನ್ನ ಸಂಕಷ್ಟಗಳನ್ನೆಲ್ಲ ಹೇಳಿಕೊಂಡಿದ್ದಳು. ಆದರೂ ತವರು ಮನೆಯವರು ಸಮಾಧಾನ ಮಾಡಿ ವಾಪಸ್ ಕಳುಹಿಸಿದ್ದರು. ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು.  ಇದನ್ನು ನೋಡಿದ್ದ ಮನೆಯವರು ತಕ್ಷಣ ಆಕೆಯನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫ...

ಜಾಮೀನು ನಿರಾಕರಿಸಿದ್ದಕ್ಕೆ ನ್ಯಾಯಾಧೀಶರ ಮನೆ ಮೇಲೆ ದಾಳಿ, ಕೊಲೆ ಬೆದರಿಕೆ; ಮೂವರ ಬಂಧನ..!

Image
ಜಾಮೀನು ನಿರಾಕರಿಸಿದ್ದಕ್ಕೆ ನ್ಯಾಯಾಧೀಶರ ಮನೆ ಮೇಲೆ ದಾಳಿ, ಕೊಲೆ ಬೆದರಿಕೆ; ಮೂವರ ಬಂಧನ..! ಮಧ್ಯಪ್ರದೇಶ (MP) :ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರಿಂದ ಕೋಪಗೊಂಡ ಆರೋಪಿಯೊಬ್ಬ ನ್ಯಾಯಾಧೀಶರ ಅಧಿಕೃತ ಮನೆಯ ಮೇಲೆ ದಾಳಿ ಮಾಡಿ ಘಟನೆ ಮಧ್ಯಪ್ರದೇಶದ ಅನೂಪ್ಪುರ ಜಿಲ್ಲೆಯಲ್ಲಿ ನಡೆದಿದೆ. ಪ್ರಥಮ ದರ್ಜೆ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ಅಮನ್ದೀಪ್ ಛಾಬ್ರಾ ಅವರ ಮನೆ ಮೇಲೆ ಶನಿವಾರ ತಡರಾತ್ರಿ ದಾಳಿ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಗಳಾದ ಪ್ರಿಯಾಂಶು ಅಲಿಯಾಸ್ ಜಾಗ್ವರ್ ಸಿಂಗ್ (25), ದೇವೇಂದ್ರ ಕೇವತ್ ಅಲಿಯಾಸ್ ಸೋನು (23) ಮತ್ತು ಮಣಿಕೇಶ್ ಸಿಂಗ್ ಅಲಿಯಾಸ್ ಪುಟ್ಟನ್ (19) ಅವರನ್ನು ಬಂಧಿಸಿದ್ದಾರೆ. ದಾಳಿ ವೇಳೆ ಬಳಸಲಾದ ಬೈಕ್‌ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. “ಮೂರ್ನಾಲ್ಕು ತಿಂಗಳ ಹಿಂದೆ ಪ್ರಮುಖ ಆರೋಪಿ ಪ್ರಿಯಾಂಶು ವಿರುದ್ಧ ಪ್ರಕರಣವೊಂದು ದಾಖಲಾಗಿತ್ತು. ಇದರಲ್ಲಿ ಜಾಮೀನು ಕೋರಿ ಪ್ರಿಯಾಂಶು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶ ಛಾಬ್ರಾ ತಿರಸ್ಕರಿಸಿದ್ದರು. ಬಳಿಕ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಆತನಿಗೆ ಜಾಮೀನು ಮಂಜೂರು ಮಾಡಿದ್ದರು. ಜಾಮೀನಿನ ಮೇಲೆ ಹೊರಬಂದ ಪ್ರಿಯಾಂಶು, ತನ್ನ ಸಹವರ್ತಿಗಳ ಜೊತೆ ಸೇರಿ ಛಾಬ್ರಾ ಅವರ ಮನೆ ಮೇಲೆ ದಾಳಿ ಮಾಡಿದ್ದಾನೆ. ಅಲ್ಲದೆ, ಅವರನ್ನು ಹತ್ಯೆ ಮಾಡುವ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲ...

"ಗೂಡ್ಸ್ ವಾಹನ ಮರಕ್ಕೆ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು..!"

Image
"ಗೂಡ್ಸ್ ವಾಹನ ಮರಕ್ಕೆ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು..!" ಶಿವಮೊಗ್ಗ : ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ವಾಹನವೊಂದು ಮರಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. ಜಿಲ್ಲೆಯ ಹೊನ್ನಾಳಿ ರಸ್ತೆಯ ತಾವರೆ ಚಟ್ನಳ್ಳಿ ಹಾಗೂ ಗೊಂದಿ ಚಟ್ನಳ್ಳಿ ಗ್ರಾಮದ ನಡುವಿನ ಕೆರೆ ಬಳಿ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ. ಸಾದೀಕ್(40), ಫಿರೋಜ್(30) ಮತ್ತು ಅಸಾದುಲ್ಲಾ(25) ಎಂಬವರು ಮೃತಪಟ್ಟಿದ್ದಾರೆ. ಗೂಡ್ಸ್ ವಾಹನ ಚಾಲಕ ನಿದ್ದೆ ಮಂಪರಿನಲ್ಲಿ ರಸ್ತೆ ಬದಿಯ ಮರಕ್ಕೆ ರಭಸವಾಗಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಡಿಕ್ಕಿಯ ರಭಸಕ್ಕೆ ಗೂಡ್ಸ್ ವಾಹನದಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ವಾಹನದಲ್ಲಿದ್ದ ಸಾದೀಕ್ ಹಾಗೂ ಫಿರೋಜ್ ಉತ್ತರ ಪ್ರದೇಶದವರಾಗಿದ್ದರೆ, ಅಸಾದುಲ್ಲಾ ಚನ್ನಗಿರಿಯ ನಿವಾಸಿ. ಚಾಲಕ ಇರ್ಫಾನ್(40) ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದಾರೆ. ಗೂಡ್ಸ್ ವಾಹನದಲ್ಲಿದ್ದವರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಫರ್ನಿಚರ್ ಕೆಲಸ ಮುಗಿಸಿ ವಾಪಸ್ ಆಗುತ್ತಿದ್ದರು. ಈ ವೇಳೆ, ಮರಕ್ಕೆ ಡಿಕ್ಕಿಯಾಗಿ ಅಪಘಾತವಾಗಿದೆ‌. ಮೃತರು ಕಳೆದ ಹಲವು ದಿನಗಳಿಂದ ತಾವರೆ ಚಟ್ನಳ್ಳಿ ಗ್ರಾಮದಲ್ಲಿಯೇ ವಾಸವಾಗಿದ...

"ಕೊಪ್ಪ ಬಸರಿಕಟ್ಟೆ ಶಾಲೆಯ ಅತಿಥಿ ಶಿಕ್ಷಕಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ಓರ್ವ ಆರೋಪಿ ಬಂಧನಕ್ಕೆ "

Image
"ಕೊಪ್ಪ ಬಸರಿಕಟ್ಟೆ  ಶಾಲೆಯ  ಅತಿಥಿ ಶಿಕ್ಷಕಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ಓರ್ವ ಆರೋಪಿ ಬಂಧನಕ್ಕೆ " ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲ್ಲೂಕಿನ ಜಯಪುರದ ಬಸರಿಕಟ್ಟೆ  ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕಿಯ ಮೇಲೆ ಹಲ್ಲೆ ನಡೆದಿದೆ. ಶಾಲೆ ಮುಗಿಸಿ ಮನೆಗೆ ಹೋಗುತ್ತಿದ್ದ 25 ವರ್ಷದ ಶಿಕ್ಷಕಿಯನ್ನು ದುಷ್ಕರ್ಮಿಗಳು ವಿವಸ್ತ್ರಗೊಳಿಸಿ, ಸೀರೆಯಿಂದ ಮರಕ್ಕೆ ಕಟ್ಟಿ, ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.  ಅವರ ಕೂಗು ಕೇಳಿದ ಸ್ಥಳೀಯರು ಕೂಡಲೇ ಧಾವಿಸಿ ರಕ್ಷಣೆ ಮಾಡಿ, ಕೊಪ್ಪ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಆರೋಪಿಗಳ ಬಂಧನಕ್ಕೆ ಮೂರು ತಂಡಗಳನ್ನು ರಚಿಸಿದ್ದು. ಈಗಾಗಲೇ  ಚಂದುವಳ್ಳಿ ಗ್ರಾಮ ಭವಿತ್ ಎಂಬ ಓರ್ವ ಆರೋಪಿಯನ್ನು  ಬಂಧಿಸುವಲ್ಲಿ  ಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

" ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ..!"

Image
" ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ..!"        ಕೊಪ್ಪ : ನ್ಯಾಮತಿ ತಾಲೂಕಿನ ಮಾದಾಪುರ ಗ್ರಾಮದ ಬಳಿ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಶುಕ್ರವಾರ ಪತ್ತೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬಂಡಿಗಡಿ ಗ್ರಾಮದ ರಮೇಶ (42) ಮೃತರು. ಶಿಲ್ಪಕಲೆ ವೃತ್ತಿ ಮಾಡುತ್ತಿದ್ದು, ಅತಿಯಾದ ಮದ್ಯವ್ಯಸನಿಯಾಗಿದ್ದರು. ಮೊದಲಿನಿಂದಲೂ ವೃತ್ತಿ ಹಿನ್ನೆಲೆಯಲ್ಲಿ ಊರೂರು ಸುತ್ತುತ್ತ ತಿಂಗಳುಗಟ್ಟಲೆ ಮನೆಯಿಂದ ದೂರ ಉಳಿಯುತ್ತಿದ್ದರು. ಮದ್ಯದ ಅಮಲಿನಲ್ಲಿ ನೇಣುಬಿಗಿದುಕೊಂಡಿರಬಹುದು ಎಂದು ಮೃತರ ಪತ್ನಿ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಶನಿವಾರ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

"ಕೆಲಸಕ್ಕೆ ಹೊರಟಿದ್ದ ಯುವಕರ ದುರಂತ ಅಂತ್ಯ: ಹಿಟ್ ಅಂಡ್ ರನ್ ಅಪಘಾತಕ್ಕೆ ಇಬ್ಬರು ಬಲಿ"

Image
"ಕೆಲಸಕ್ಕೆ ಹೊರಟಿದ್ದ ಯುವಕರ ದುರಂತ ಅಂತ್ಯ: ಹಿಟ್ ಅಂಡ್ ರನ್ ಅಪಘಾತಕ್ಕೆ ಇಬ್ಬರು ಬಲಿ" ದೊಡ್ಡಬಳ್ಳಾಪುರ: ಪಾದಚಾರಿಯೊಬ್ಬರನ್ನು ರಕ್ಷಿಸಲು ಹೋಗಿ ಬೈಕ್ ಸ್ಕಿಡ್ ಆಗಿ ಬಿದ್ದಾಗ, ಹಿಂದಿನಿಂದ ಬಂದ ಅಜ್ಞಾತ ವಾಹನ ಹರಿದು ದೊಡ್ಡಬಳ್ಳಾಪುರದಲ್ಲಿ ಇಬ್ಬರು ಯುವಕರು ದಾರುಣವಾಗಿ ಮೃತಪಟ್ಟಿರುವ ಹೃದಯವಿದ್ರಾವಕ ಹಿಟ್ ಅಂಡ್ ರನ್ ಘಟನೆ ನಡೆದಿದೆ. ಬೆಳಗ್ಗೆ ಕೆಲಸಕ್ಕೆಂದು ಹೊರಟಿದ್ದ ಯುವಕರು ಈ ದುರ್ಘಟನೆಗೆ ಬಲಿಯಾಗಿದ್ದಾರೆ. ಘಟನೆ ವಿವರ ದೊಡ್ಡಬಳ್ಳಾಪುರ ತಾಲೂಕಿನ ರಾಮಯ್ಯನಪಾಳ್ಯದ ಬಳಿ ಇಂದು ಬೆಳಗ್ಗೆ ಸುಮಾರು 6 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಮೂಲದ ನಂದನ್ (22) ಮತ್ತು ರವಿಕುಮಾ‌ರ್ (24) ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಚ್‌.ಎನ್‌. ವೆಂಕಟೇಶ್ ಪ್ರಸನ್ನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತ ನಡೆದಿದ್ದು ಹೇಗೆ? ಮೃತಪಟ್ಟ ಯುವಕರು ಎಲ್ ಅಂಡ್ ಟಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಮಧು ಎಂಬುವರ ಬೈಕ್‌ನಲ್ಲಿ ಮೂವರು ಯುವಕರು ತೂಬಗೆರೆ ಕಡೆಯಿಂದ ದೊಡ್ಡಬಳ್ಳಾಪುರದ ಕಡೆಗೆ ಕೆಲಸಕ್ಕೆ ಹೊರಟಿದ್ದರು. ರಾಮಯ್ಯನಪಾಳ್ಯ ತಲುಪುತ್ತಿದ್ದಂತೆ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಬೈಕಿಗೆ ಅಡ್ಡಬಂದಿದ್ದಾರೆ. ಆ ಪಾದಚಾರಿಯನ್ನು ರಕ್ಷಿಸಲು ಪ್ರಯತ್ನಿಸಿದಾಗ...

"ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ಶಿಕ್ಷಕಿ ಮೇಲೆ ಅಟ್ಯಾಕ್ ಮಾಡಿದ ಷಂಡರು"

Image
"ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ಶಿಕ್ಷಕಿ ಮೇಲೆ ಅಟ್ಯಾಕ್ ಮಾಡಿದ ಷಂಡರು" ಕೊಪ್ಪ : ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಬಸರೀಕಟ್ಟೆ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕಿಯೊಬ್ಬರ ಮೇಲೆ ದೌರ್ಜನ್ಯ ನಡೆಸಿರುವ ಆರೋಪವೊಂದು ಕೇಳಿ ಬಂದಿದೆ. ಸುಮಾರು 24 ವರ್ಷ ವಯಸ್ಸಿನ ಅತಿಥಿ ಶಿಕ್ಷಕಿ ಸಂಜೆ ಶಾಲೆ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. ಮಾಸ್ಕ್ ಧರಿಸಿದ್ದ ಅಪರಿಚಿತ ವ್ಯಕ್ತಿಯೊಬ್ಬ ಶಿಕ್ಷಕಿ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ದುಷ್ಕರ್ಮಿಗಳು ಯುವತಿಯ ತಲೆಗೆ ರಾಡ್‌ನಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು, ನಂತರ ಆಕೆಯನ್ನು ಅಡಿಕೆ ಮರಕ್ಕೆ ಕಟ್ಟಿ ಹಾಕಲು ಪ್ರಯತ್ನಿಸಿದ್ದಾರೆ ಎಂಬ ಗಂಭೀರ ಆರೋಪವು ಕೇಳಿಬಂದಿದೆ. ಆದರೆ, ಯುವತಿ ಜೋರಾಗಿ ಕೂಗಾಡುತ್ತಿದ್ದ ಧ್ವನಿಯನ್ನು ಕೇಳಿದ ಸ್ಥಳೀಯರು ತಕ್ಷಣ ರಕ್ಷಣೆಗೆ ಧಾವಿಸಿದ ಕಾರಣ, ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ದೌರ್ಜನ್ಯದಿಂದಾಗಿ ನಿತ್ರಾಣವಾಗಿ ಗಾಯಗೊಂಡಿದ್ದ ಶಿಕ್ಷಕಿಯನ್ನು ಕೂಡಲೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅತ್ಯಾಚಾರ ಯತ್ನದ ಹಿಂದೆ ಪರಿಚಿತರೇ ಇರುವ ಸಾಧ್ಯತೆಯ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು,...

ಕೊಪ್ಪ: ರಸ್ತೆ ಗುಂಡಿಗಳ ವಿರುದ್ಧ ಬೃಹತ್‌ ಪ್ರತಿಭಟನೆಗೆ ಮುಂದಾದ ಜೆಡಿಎಸ್‌ಸ್

Image
ಕೊಪ್ಪ: ರಸ್ತೆ ಗುಂಡಿಗಳ ವಿರುದ್ಧ ಬೃಹತ್‌ ಪ್ರತಿಭಟನೆಗೆ ಮುಂದಾದ ಜೆಡಿಎಸ್‌ಸ್ ಕೊಪ್ಪ: ಶೃಂಗೇರಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ರಸ್ತೆಗಳು ಗುಂಡಿ ಬಿದ್ದಿದ್ದರೂ ಮುಚ್ಚುವ ಕೆಲಸ ಮಾಡುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಅಕ್ಟೋಬರ್ 29ರಂದು ಪ್ರತಿಭಟನೆ ನಡೆಸಲು ಜೆಡಿಎಸ್‌ ಮುಂದಾಗಿದೆ. ಕೊಪ್ಪದ ಮೇಲಿನ ಪೇಟೆಯಲ್ಲಿರುವ ಕುವೆಂಪು ವೃತ್ತದಿಂದ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ಹಾಗೂ ಬಸ್‌ ನಿಲ್ದಾಣದಲ್ಲಿ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಫಾರಂ ನಂ. 94ಸಿ, 94ಸಿಸಿ ಅಡಿಯಲ್ಲಿ ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿದವರಿಗೆ ಹಕ್ಕುಪತ್ರ ನೀಡುತ್ತಿಲ್ಲ. ಕೊಪ್ಪ ತಾಲೂಕಿನಲ್ಲಿ ಅಕ್ರಮ-ಸಕ್ರಮ ಸಭೆ ನಡೆಸುತ್ತಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಜೆಡಿಎಸ್‌ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಂದಾಯ ಭೂಮಿ ಒತ್ತುವರಿ ವಿಚಾರವಾಗಿ ಸರ್ಕಾರ ಎಸ್‌ಐಟಿ ರಚನೆ ಮಾಡಲು ಮುಂದಾಗಿದೆ. ಇದರಿಂದ ರೈತರಿಗೆ ಆತಂಕ ಎದುರಾಗಿದ್ದು. ಕಂದಾಯ ಭೂಮಿಯಲ್ಲಿ ರೈತರಿಗೆ ಜಮೀನುಗಳನ್ನು ಮಂಜೂರು ಮಾಡುವ ಬದಲು ಸರ್ಕಾರ ಕಿತ್ತುಕೊಳ್ಳುತ್ತಿದೆ ಎಂದು ಆರೋಪಿಸಲಾಗಿದೆ. ಅಲ್ಲದೇ ಕ್ಷೇತ್ರದಲ್ಲಿ ಶಾಲಾ ಮಕ್ಕಳಿಗೆ ಸರಿಯಾದ ಸಾರಿಗೆ ವ್ಯವಸ್ಥೆಯಿಲ್ಲ ಈ ಬಗ್ಗೆ ಜೆಡಿಎಸ್ ರಾಜ್ಯ ಉಪಾಧ್ಯಕ್...

ಕನ್ನಡ ದರ್ಬಾರ್ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆಯ ಅಂಗವಾಗಿ "ಮಲೆನಾಡು ಗೆಳೆಯರ ಬಳಗ" ಬಾಳೆಹೊನ್ನೂರು ಇವರ ವತಿಯಿಂದ ಎರಡನೇ ವರ್ಷದ ಆಚರಣೆ ಇದಾಗಿರುತ್ತದೆ.

Image
ಕನ್ನಡ ದರ್ಬಾರ್ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆಯ ಅಂಗವಾಗಿ "ಮಲೆನಾಡು ಗೆಳೆಯರ ಬಳಗ" ಬಾಳೆಹೊನ್ನೂರು ಇವರ ವತಿಯಿಂದ ಎರಡನೇ ವರ್ಷದ ಆಚರಣೆ ಇದಾಗಿರುತ್ತದೆ.           " 69ನೇ ವರ್ಷದ ಕನ್ನಡ ರಾಜ್ಯೋತ್ಸವದ" ಅಂಗವಾಗಿ ವಾಹನ ಜಾತವನ್ನು ಹಮ್ಮಿಕೊಂಡಿದ್ದು ಈ ಜಾತದಲ್ಲಿ ಭಾಗವಿಸಿ ವಿಜೇತರಾದ ವಾಹನ ಮಾಲಕರು, ಚಾಲಕರು ಅಥವಾ ವಾಹನಕ್ಕೆ ಸಂಬಂಧಪಟ್ಟವರು ವಿಜೇತರಾಗಿದ್ದಲ್ಲಿ ಬಳಗವು ಉತ್ತಮ ಆಕರ್ಷಣೀಯ ಬಹುಮಾನವನ್ನು ನೀಡಿ ಗೌರವಿಸಲಾಗುವುದು. ಆಸಕ್ತರು, ಭಾಗವಹಿಸುವರು, ಅಥವಾ ಹೆಚ್ಚಿನ ಮಾಹಿತಿಗಾಗಿ  ಈ ಕೆಳಗೆ ಕೊಟ್ಟಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಬೇಕಾಗಿ ವಿನಂತಿ.

ಬಸ್​​ನ ಲಗೇಜ್​ ಕ್ಯಾಬಿನ್​​ನಲ್ಲಿ 400 ಫೋನ್​ಗಳು ಪತ್ತೆ: ಎಲ್ಲವೂ ಸ್ಫೋಟಗೊಂಡು ವ್ಯಾಪಿಸಿದ ಬೆಂಕಿ - ತನಿಖಾ ತಂಡ..!

Image
ಬಸ್​​ನ ಲಗೇಜ್​ ಕ್ಯಾಬಿನ್​​ನಲ್ಲಿ 400 ಫೋನ್​ಗಳು ಪತ್ತೆ: ಎಲ್ಲವೂ ಸ್ಫೋಟಗೊಂಡು ವ್ಯಾಪಿಸಿದ ಬೆಂಕಿ - ತನಿಖಾ ತಂಡ..! ಅಮರಾವತಿ (ಆಂಧ್ರಪ್ರದೇಶ): ಹೈದರಾಬಾದ್​​ನಿಂದ ಬೆಂಗಳೂರಿಗೆ ಹೊರಡುತ್ತಿದ್ದ ಖಾಸಗಿ ಬಸ್‌ ಕರ್ನೂಲ್‌ನಲ್ಲಿ ಬೆಂಕಿ ದುರಂತಕ್ಕೀಡಾದ ಬಗ್ಗೆ ತನಿಖೆ ಆರಂಭವಾಗಿದೆ. ಬಸ್​​ಗೆ ಬೈಕ್​ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿದ್ದರೂ, ಜ್ವಾಲೆ ಹರಡಲು ಮೊಬೈಲ್ ಫೋನ್​ಳು ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.          ಹೌದು. ಬಸ್​​ನ ಲಗೇಜ್ ಕ್ಯಾಬಿನ್‌ನಲ್ಲಿ 400 ಮೊಬೈಲ್ ಫೋನ್‌ಗಳು ಕಂಡುಬಂದಿವೆ. ಅವುಗಳು ಸ್ಫೋಟಗೊಂಡ ಪರಿಣಾಮ ವಾಹನದಲ್ಲಿ ಭಾರಿ ಬೆಂಕಿ ಹೊತ್ತಿಕೊಂಡಿದೆ. ಲಗೇಜ್ ಕ್ಯಾಬಿನ್‌ನಲ್ಲಿ ನೂರಾರು ಮೊಬೈಲ್ ಫೋನ್‌ಗಳು ಸ್ಫೋಟಗೊಂಡಿರುವುದನ್ನು ವಿಧಿವಿಜ್ಞಾನ ತಂಡಗಳು ಗುರುತಿಸಿವೆ. ಇದು ಅಪಘಾತದ ತೀವ್ರತೆ ಹೆಚ್ಚಿಸಿ ಭಾರಿ ಪ್ರಾಣಹಾನಿಗೆ ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ.     ತನಿಖಾಧಿಕಾರಿಗಳ ಪ್ರಕಾರ, ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ತಕ್ಷಣ, ಪೆಟ್ರೋಲ್ ಸೋರಿಕೆಯಾಗಿದೆ. ಜೊತೆಗೆ ಬೈಕ್​ ಬಸ್ಸಿನ ಅಡಿ ಸಿಲುಕಿಕೊಂಡಿತು. ಬಸ್ ಅದನ್ನು ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಯಿತು. ಘರ್ಷಣೆಯಿಂದ ಬೆಂಕಿ ಹೊತ್ತಿಕೊಡಿದೆ.       400 ಮೊಬೈಲ್​ಗಳು ನಾಶ: ಬಸ್ಸಿನ ಲಗೇಜ್ ಕ್ಯಾಬಿನ್‌...

ನಾಗನಪಲ್ಲಿ ಗ್ರಾಮದಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆಕೈ-ಕಾಲು ಕಟ್ಟಿ ದೊಣ್ಣೆಯಿಂದ ಹಲ್ಲೆ ನಡೆಸುವ ವಿಡಿಯೋ ವೈರಲ್..!

Image
ನಾಗನಪಲ್ಲಿ ಗ್ರಾಮದಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆಕೈ-ಕಾಲು ಕಟ್ಟಿ ದೊಣ್ಣೆಯಿಂದ ಹಲ್ಲೆ ನಡೆಸುವ ವಿಡಿಯೋ ವೈರಲ್..! ಔರಾದ್ :ಅಕ್ಟೊಬರ್.26: ಅಕ್ರಮ ಸಂಬಂಧ ಶಂಕೆ, ಮಹಾರಾಷ್ಟ್ರ ಮೂಲದ ಯುವಕನನ್ನು ಕೈ ಕಾಲು ಕಟ್ಟಿ ಮೇಲೆ ಮಾರಣಾಂತಿಕ ಹಲ್ಲೆ ಹಲ್ಲೆ ಮಾಡಿದ ಘಟನೆ ತಾಲೂಕಿನ ನಾಗನಪಲ್ಲಿ ಗ್ರಾಮದಲ್ಲಿ ನಡೆದಿದೆ. ನೆರೆಯ ಮಹಾರಾಷ್ಟ್ರ ಮೂಲದ ಗೌಣಗಾಂವ ಗ್ರಾಮದ ಯುವಕ ವಿಷ್ಣು ಬಾಬುರಾವ ಪಾಂಚಾಳ(27) ಹಲ್ಲೆಗೊಳಗಾಗಿ ಮೃತ ಯುವಕ. ಕಳೆದ ಎರಡು ವರ್ಷಗಳಿಂದ ನಾಗನಪಲ್ಲಿ ಗ್ರಾಮದ ಮಹಿಳೆ ಜೋತೆ ಪ್ರೀತಿಸಿ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಹೈದರಾಬಾದ್ ನಗರದಲ್ಲಿ ಕೆಲಸಕ್ಕೆ ಇದ್ದ ಯುವಕ ತನ್ನ ಮನೆಯ ಪಕ್ಕದಲ್ಲಿರುವ ನಾಗನಪಲ್ಲಿ ಗ್ರಾಮದ ಮಹಿಳೆಯ ಜೋತೆ ಸಂಬಂಧ ಹೊಂದಿದ್ದ, ಅ.21ನೇ ತಾರೀಖು ಗ್ರಾಮಕ್ಕೆ ಬಂದಿದ್ದ ಯುವಕನನ್ನು ಜೆಜೆಎಮ್ ನಲ್ಲಿಗೆ ಕಟ್ಟಿದ ಮಹಿಳೆಯ ತಂದೆ ಅಶೋಕ ಹಾಗೂ ಸಹೋದರ ಗಜಾನನ ಎಂಬುವರು ದೊಣ್ಣೆಯಿಂದ ಹಿಗ್ಗಾಮುಗ್ಗ ಇಳಿಸಿದ್ದಾರೆ. ಗ್ರಾಮಸ್ಥರ ಸಮ್ಮುಖದಲ್ಲಿಯೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಷ್ಟೇ ಕಾಡಿಬೇಡಿದರು ಮನಬಂದಂತೆ ಬಡಿದು ಕ್ರೌರ್ಯ ಮೆರೆದಿದ್ದಾರೆ ಗ್ರಾಮಸ್ಥರ ಮೂಕ ಪ್ರೇಕ್ಷಕರಂತೆ ನೋಡಿದ್ದಾರೆ. ಗಾಯಗೊಂಡ ಯುವಕನನ್ನು ಬೀದರ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅತಿಯಾದ ಪೆಟ್ಟು ಬಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಅ.22ರಂದು ಮೃತಪಟ್ಟಿದ್ದಾನೆ. ಯುವಕನಿಗೆ ಹಲ್ಲೆ ...

" ನಿಲ್ಲಿಸಿದ್ದ ಆಟೋದಲ್ಲಿ ಮಹಿಳೆ ಹೆಣ ಪತ್ತೆ, ನಾಲ್ಕು ಮಕ್ಕಳ ತಾಯಿಯನ್ನು ಕೊಂದ ದುಷ್ಕರ್ಮಿ..!"

Image
" ನಿಲ್ಲಿಸಿದ್ದ ಆಟೋದಲ್ಲಿ ಮಹಿಳೆ ಹೆಣ ಪತ್ತೆ, ನಾಲ್ಕು ಮಕ್ಕಳ ತಾಯಿಯನ್ನು ಕೊಂದ ದುಷ್ಕರ್ಮಿ..!"         ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ತಿಲಕ್‌ನಗರದಲ್ಲಿ ಆಟೋ ರಿಕ್ಷಾದೊಳಗೆ ಮಹಿಳೆಯ ಶವವೊಂದು ಪತ್ತೆಯಾಗಿರುವ ಘಟನೆ ನಗರದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಪ್ರೇಮ ಸಂಬಂಧದ ಹಿನ್ನೆಲೆ ಕೊಲೆ ಮಾಡಲಾಗಿದ್ದು, ನಂತರ ಶವವನ್ನು ಆಟೋದಲ್ಲಿ ಬಿಟ್ಟು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಮೃತಳನ್ನು ಸಲ್ಮಾ (35) ಎಂದು ಗುರುತಿಸಲಾಗಿದ್ದು, ಆಕೆ ನಾಲ್ಕು ಮಕ್ಕಳ ತಾಯಿ. ತಿಲಕ್ ನಗರ ಮುಖ್ಯರಸ್ತೆಯಲ್ಲಿ ನಿಂತಿದ್ದ ಆಟೋದಲ್ಲಿ ಶವ ಪತ್ತೆಯಾದ ವಿಚಾರ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. • ತಿಲಕ್ ನಗರವಾಸಿ ಸಲ್ಮಾ • • ಮೃತ ದೇಹ  ವಿಕ್ಟೋರಿಯಾ  ಆಸ್ಪತ್ರೆಗೆ ರವಾನೆ  ಶನಿವಾರ ಸಂಜೆ ಸುಮಾರು ನಾಲ್ಕು ಗಂಟೆ ವೇಳೆಗೆ ಈ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯರು ಆಟೋ ರಿಕ್ಷಾ ದೀರ್ಘಕಾಲ ನಿಂತಿರುವುದನ್ನು ಗಮನಿಸಿ ಅನುಮಾನಗೊಂಡು ಒಳಗೆ ನೋಡಿದಾಗ ಮಹಿಳೆಯ ಶವ ಕಂಡು ಬಂದಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು. ಮಾಹಿತಿ ಪಡೆದ ತಿಲಕ್ ನಗರ ಪೊಲೀಸರು ಮತ್ತು ಸೋಕೋ (Scene of Crime Officers) ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾ...

ತೆಲಂಗಾಣದಲ್ಲಿ ವಿಚಿತ್ರ ಶೈಲಿಯಲ್ಲಿ ಪತ್ನಿಯ ಇನ್ನೊಂದು ಕೊಲೆ ಪ್ರಕರಣ..!

Image
ತೆಲಂಗಾಣದಲ್ಲಿ ವಿಚಿತ್ರ ಶೈಲಿಯಲ್ಲಿ ಪತ್ನಿಯ ಇನ್ನೊಂದು  ಕೊಲೆ ಪ್ರಕರಣ..!   ತೆಲಂಗಾಣ :ಪತ್ನಿಯ ನಾಲಿಗೆ ಕತ್ತರಿಸಿ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಪೆದ್ದಕೊಡಪ್ಪಲ್ ಮಂಡಲದ ವಿಠಲವಾಡಿ ತಾಂಡಾದಲ್ಲಿ ನಡೆದಿದೆ. ತಾಂಡಾದಲ್ಲಿ  ದೇವಸ್ಥಾನದ ಕಾರ್ಯ ಇದ್ದ ಕಾರಣ ಐದು ದಿನ ಮುಂಚೆ ಯೇ ಗ್ರಾಮಕ್ಕೆ ಬಂದು ತಂಗಿದ್ದರು. ಗುರುವಾರ ರಾತ್ರಿ ನಡೆದ ಈ ಘಟನೆಯಲ್ಲಿ ಕಿಶನ್ ಎಂಬಾತ ತನ್ನ ಪತ್ನಿ ಸವಿತಾಳ ಮೇಲೆ ಕೆಲವು ದಿನಗಳಿಂದ  ಅನುಮಾನ ಗೊಂಡಿದ್ದ ಆಕೆಯೊಂದಿಗೆ ಜಗಳವಾಡಿದ್ದಾನೆ. ನಂತರ ಕತ್ತರಿಯಿಂದ ಆಕೆಯ ನಾಲಿಗೆಯನ್ನು ಕತ್ತರಿಸಿ, ತಲೆಗೆ ಕಲ್ಲಿನಿಂದ ಹೊಡೆದಿದ್ದಾನೆ. ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ, ಆಕೆ ದಾರಿ ಮಧ್ಯೆ ಸಾವನ್ನಪ್ಪಿದ್ದಾಳೆ. ಈ ಕುರಿತು ವರದಿಗಳು ಲಭ್ಯವಾಗಿವೆ.

ಪಿರಿಯಾಪಟ್ಟಣದಲ್ಲಿ ಸ್ನಾನಕ್ಕೆ ಹೋದ ಸಹೋದರಿಯರು ಗ್ಯಾಸ್‌ ಗೀಸರ್‌ ಸೋರಿ ದುರ್ಮರಣ..!

Image
ಪಿರಿಯಾಪಟ್ಟಣದಲ್ಲಿ ಸ್ನಾನಕ್ಕೆ ಹೋದ ಸಹೋದರಿಯರು ಗ್ಯಾಸ್‌ ಗೀಸರ್‌ ಸೋರಿ ದುರ್ಮರಣ..! ಮೈಸೂರ್ :ಸ್ನಾನದ ಕೋಣೆಯಲ್ಲಿನ ಗ್ಯಾಸ್ ಗೀಸರ್ ಸೋರಿಕೆಯಿಂದಾಗಿ, ಅಕ್ಕ-ತಂಗಿಯರಿಬ್ಬರು ಜೀವ ಕಳೆದುಕೊಂಡಿದ್ದಾರೆ. ಈ ಹೃದಯ ವಿದ್ರಾವಕ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ನಡೆದಿದೆ.            ಗ್ಯಾಸ್ ಗೀಸರ್‌ನಿಂದ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಾಗಿ ಅಕ್ಕ-ತಂಗಿಯರಿಬ್ಬರು ಸಾವನ್ನಪ್ಪಿದ ದುರ್ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ನಡೆದಿದೆ. ಬೆಟ್ಟದಪುರ ಗ್ರಾಮದ ಸಹೋದರಿಯರಾದ ಗುಲ್ಫರ್ಮ್ ತಾಜ್ (20) ಹಾಗೂ ಸಿಮ್ರಾನ್ ತಾಜ್ (23) ದುರಂತ ಅಂತ್ಯ ಕಂಡ ಯುವತಿಯರು. ಆಗಿದ್ದಾದ್ರು ಏನು..? . ಸಹೋದರಿಯರಾದ ಗುಲ್ಫರ್ಮ್ ತಾಜ್ ಹಾಗೂ ಸಿಮ್ರಾನ್ ತಾಜ್ ಒಟ್ಟಿಗೆ ಸ್ನಾನ ಮಾಡಲೆಂದು ಹೋಗಿದ್ದಾರೆ. ಈ ವೇಳೆ ಬಾತ್​ರೂಂನಲ್ಲಿದ್ದ ಗ್ಯಾಸ್ ಗೀಸರ್​ನಿಂದ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಾಗಿದೆ. ಇದರ ಪರಿಣಾಮದಿಂದಾಗಿ ಇಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಸ್ನಾನದ ಕೋಣೆಗೆ ಹೋದವರು ಬಹಳ ಸಮಯವಾದರೂ ಹೊರಬಾರದ ಹಿನ್ನಲೆ ತಂದೆ ಅಲ್ತಾಫ್‌ ಬಾಗಿಲು ಬಡಿದಿದ್ದಾರೆ.  ಬಾಗಿಲು ತೆಗೆಯದಿದ್ದಾಗ ಅನುಮಾನಗೊಂಡು ಬಾಗಿಲು ಹೊಡೆದು ನೋಡಿದಾಗ ಮಕ್ಕಳಿಬ್ಬರು ಅರೆಪ್ರಜ್ಞಾವಸ್ಥೆಯಲ್ಲಿರವುದು ಬೆಳಕಿಗೆ ಬಂದಿದೆ. ಕೂಡಲೇ ಸಹೋದರಿಯರ...

ಚಾಮರಾಜನಗರದಲ್ಲಿ ಭೀಕರ ಅಪಘಾತ : ಕಾರ್ ಗೆ ಟಿಪ್ಪರ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ದುರ್ಮರಣ!

Image
ಚಾಮರಾಜನಗರದಲ್ಲಿ ಭೀಕರ ಅಪಘಾತ : ಕಾರ್ ಗೆ ಟಿಪ್ಪರ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ದುರ್ಮರಣ! ಚಾಮರಾಜನಗರ : ರಾಜ್ಯದಲ್ಲಿ ಮತ್ತೊಂದು ಭೀಕರವಾದ ಅಪಘಾತ ಸಂಭವಿಸಿದ್ದು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಟಿಪ್ಪರ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಾದಪಟ್ಟಣದಲ್ಲಿ ಈ ಒಂದು ಅಪಘಾತ ಸಂಭವಿಸಿದ್ದು, ಚಾಲಕ ಸೇರಿ ಮೂವರ ಸ್ಥಿತಿ ಗಂಭೀರವಾಗಿದ್ದು ಮೈಸೂರು ಆಸ್ಪತ್ರೆಗೆ ಅವರನ್ನು ಶಿಫ್ಟ್ ಮಾಡಲಾಗಿದೆ. ಮೃತರನ್ನು ಕೇರಳದ ಕಲ್ಪಟ್ಟ ಮೂಲದ ರಶೀದ್ (40) ಮತ್ತು ನಜೀರಾ (38) ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಬೇಗೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಬೇಗುರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ| ನವವಿವಾಹಿತೆ ಆತ್ಮಹತ್ಯೆ : ಪತಿ ಪೊಲೀಸ್ ವಶಕ್ಕೆ

Image
ಶಿವಮೊಗ್ಗ| ನವವಿವಾಹಿತೆ ಆತ್ಮಹತ್ಯೆ : ಪತಿ ಪೊಲೀಸ್ ವಶಕ್ಕೆ ಶಿವಮೊಗ್ಗ : ಮದುವೆಯಾದ ಕೇವಲ 6 ತಿಂಗಳಲ್ಲೇ ನವವಿವಾಹಿತೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ತಾಲೂಕಿನ ಕುರಂಬಳ್ಳಿ ಸಮೀಪದ ಗೂಜಾನುಮಕ್ಕಿಯಲ್ಲಿ ನಡೆದಿದೆ. ಸಾಗರ ತಾಲೂಕು ಕಟ್ಟಿನಕಾರು ಗ್ರಾಮದ ಯಡಮನೆ ನಿವಾಸಿ ಮಾಲಾಶ್ರೀ (23) ಮೃತ ಮಹಿಳೆ. ಪತಿ ಮತ್ತು ಅತ್ತೆಯ ಕಿರುಕುಳದಿಂದ ಮಾಲಾಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಯಡಮನೆ ಗ್ರಾಮದ ಮಾಲಾಶ್ರೀ ಅವರು ಕುರಂಬಳ್ಳಿಯ ಗೂಜಾನುಮಕ್ಕಿಯ ಅಶೋಕ್ ಎಂಬಾತನೊಂದಿಗೆ ಎಪ್ರಿಲ್ ನಲ್ಲಿ ವಿವಾಹವಾಗಿದ್ದರು. ಮದುವೆಯಾದ ಕೆಲವೇ ದಿನಗಳಿಂದ ಪತಿ ಅಶೋಕ್ ಪತ್ನಿ ಮಾಲಶ್ರೀಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ಪೋಷಕರು ಆರೋಪಿಸಿದ್ದಾರೆ. ಮಾಲಾಶ್ರೀಯವರು ತಮ್ಮ ತವರು ಮನೆಯವರೊಂದಿಗೆ ಮಾತನಾಡಲು ಬಿಡದೆ ಅಶೋಕ್ ಕಿರುಕುಳ ನೀಡುತ್ತಿದ್ದ. ತವರು ಮನೆಗೆ ಹೋದರೂ, ಜೊತೆಯಲ್ಲಿಯೇ ಬಂದು ತಕ್ಷಣ ವಾಪಸ್ ಕರೆದುಕೊಂಡು ಹೋಗುತ್ತಿದ್ದ. ಗಂಡ ಮತ್ತು ಅತ್ತೆ ನೀಡುತ್ತಿದ್ದ ಕಿರುಕುಳದ ಕುರಿತು ಮಾಲಾಶ್ರೀ ಅವರು ತಮ್ಮ ಸಂಬಂಧಿಕರಿಗೆ ತಿಳಿಸಿದ್ದರು ಎನ್ನಲಾಗಿದೆ. ಕಿರುಕುಳಕ್ಕೆ ಬೇಸತ್ತು ಮಾಲಾಶ್ರೀ ಅ. 19 ರಂದು ವಿಷ ಸೇವಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪತಿ ಅಶೋಕ್ ಅಂದೇ ಮಾಲಾಶ್ರೀಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ, ಪತ್ನಿ ವಿಷ ಸೇವಿಸಿರುವ ವಿಷಯವನ್ನು ...

ಜನನಿಬಿಡ ರಸ್ತೆಯಲ್ಲಿ ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆಗೈದ 60 ವರ್ಷದ ವ್ಯಕ್ತಿ:ವಿಜಯಪುರ

Image
ಜನನಿಬಿಡ ರಸ್ತೆಯಲ್ಲಿ ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆಗೈದ 60 ವರ್ಷದ ವ್ಯಕ್ತಿ:ವಿಜಯಪುರ ವಿಜಯಪುರ : ನಗರದ ಸಿಂದಗಿ ಪಟ್ಟಣದ ಜನನಿಬಿಡ ರಸ್ತೆಯ ಮಧ್ಯದಲ್ಲಿ ಕ್ಯಾಪ್ ಧರಿಸಿ, ಒಂದು ಕೈಯಲ್ಲಿ ಮಚ್ಚಿನಿಂದ ಮತ್ತು ಇನ್ನೊಂದು ಕೈಯಲ್ಲಿ ಪ್ಲಾಸ್ಟಿಕ್ ಬ್ಯಾಗ್ ಹಿಡಿದುಕೊಂಡು ತನ್ನ ಪತ್ನಿಯ ಮೇಲೆ ಮಚ್ಚಿನಿಂದ ಭೀಕರವಾಗಿ ಹಲ್ಲೆ ನಡೆಸುತ್ತಿರುವ ಆತಂಕಕಾರಿ ವೀಡಿಯೊ ವೈರಲ್ ಆಗಿದೆ. ವಿಜಯಪುರದ ಸಿಂದಗಿ ಪಟ್ಟಣದ ಆನಂದ್ ಟಾಕೀಸ್ ಬಳಿ ಈ ಘಟನೆ ವರದಿಯಾಗಿದೆ. ಕ್ಯಾಮೆರಾದಲ್ಲಿ ಸೆರೆಯಾಗಿರುವ ಹಲ್ಲೆ ಈಗ ವ್ಯಾಪಕ ಚರ್ಚೆಯಲ್ಲಿದೆ. ಆರೋಪಿ ಯಮನಪ್ಪ ಮಾದರ್ (60) ತನ್ನ ಪತ್ನಿ ಅನುಸೂಯಾ ಮಾದರ್ (50) ಮೇಲೆ ಜಗಳವಾಡಿ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಡಿಯೋದಲ್ಲಿ, ಸೀರೆಯುಟ್ಟಿದ್ದ ಮಹಿಳೆಯನ್ನು ಬೆನ್ನಟ್ಟಿದ ವ್ಯಕ್ತಿ, ಮಚ್ಚಿನಿಂದ ಪದೇ ಪದೇ ಹಲ್ಲೆ ಮಾಡುವುದನ್ನು ಕಾಣಬಹುದು. ಒಂದು ಹಂತದಲ್ಲಿ, ಮಹಿಳೆ ರಸ್ತೆಯ ಮೇಲೆ ರಕ್ತಸಿಕ್ತವಾಗಿ ಕುಸಿದು ಬೀಳುತ್ತಿರುವುದು ವೀಡಿಯೊದಲ್ಲಿ ಸೆಯಾಗಿದೆ. ಸಾರ್ವಜನಿಕರ ಮಧ್ಯಪ್ರವೇಶದ ಹೊರತಾಗಿಯೂ ವ್ಯಕ್ತಿ ಪತ್ನಿಗೆ ಹಲ್ಲೆ ಮುಂದುವರಿಸಿದ್ದಾನೆ. ಮಹಿಳೆಯನ್ನು ಹೊಡೆದ ನಂತರ ಆ ವ್ಯಕ್ತಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಮತ್ತೊಬ್ಬ ವ್ಯಕ್ತಿ ಮರದ ದಿಮ್ಮಿಯಿಂದ ಆತನಿಗೆ ಹೊಡೆದಾಗ, ದಾಳಿಕೋರ ರಸ್ತೆಯಲ್ಲೇ ಕುಸಿದು ಬೀಳುತ್ತಾನೆ. ಪ...

ಭೀಕರ ರಸ್ತೆ ಅಪಘಾತ: ಓರ್ವ ಸಾವು, 15 ಕ್ಕೂ ಹೆಚ್ಚು ಮಂದಿಗೆ ಗಾಯ..!

Image
ಭೀಕರ ರಸ್ತೆ ಅಪಘಾತ: ಓರ್ವ ಸಾವು, 15 ಕ್ಕೂ ಹೆಚ್ಚು ಮಂದಿಗೆ ಗಾಯ..! ಮಂಡ್ಯ : ಜಿಲ್ಲೆಯ ಮದ್ದೂರು ತಾಲೂಕಿನ ಮಾಚಹಳ್ಳಿ ಸಮೀಪ ಶನಿವಾರ ಸರ್ಕಾರಿ ಬಸ್ ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಚನ್ನಪಟ್ಟಣ ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಶ್ರೀ ಚಾಮುಂಡೇಶ್ವರಿ ದೇವಾಲಯದಿಂದ ನೂರಕ್ಕೂ ಹೆಚ್ಚು ಭಕ್ತರನ್ನು ಹೊತ್ತು ಮದ್ದೂರು ನಗರದ ಕಡೆಗೆ ಬರುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್, ಮಾಚಹಳ್ಳಿ ಸಮೀಪಕ್ಕೆ ತಲುಪುವ ವೇಳೆಗೆ ಈ ದುರಂತ ಸಂಭವಿಸಿದೆ. ಮದ್ದೂರಿನಿಂದ ತುಮಕೂರು ಕಡೆಗೆ ತೆರಳುತ್ತಿದ್ದ ಕಾರೊಂದಕ್ಕೆ ಬಸ್‌ನ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮತ್ತೊಬ್ಬ ಮಹಿಳೆ ಗಂಭೀರವಾಗಿ ಗಾಯಗೊಂಡು, ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಅಪಘಾತದಲ್ಲಿ ಸಾರಿಗೆ ಬಸ್‌ನಲ್ಲಿದ್ದ 15ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಮದ್ದೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಈ ಘಟನೆಯಿಂದ ರಸ್ತೆಯಲ್ಲಿ ಸಂಚಾರಕ್ಕೆ ತಾತ್ಕಾಲಿಕವಾಗಿ ಅಡ್ಡಿಯಾಗಿದ್ದು, ಕೆಸ್ತೂರು...

ದಾಬಸ್ ಪೇಟೆ: ಸಾಲ ತೀರಿಸಲಾಗದೇ ಮನನೊಂದು ಯುವಕ ಆತ್ಮಹತ್ಯೆ..!

Image
ದಾಬಸ್ ಪೇಟೆ: ಸಾಲ ತೀರಿಸಲಾಗದೇ ಮನನೊಂದು ಯುವಕ ಆತ್ಮಹತ್ಯೆ..! ದಾಬಸ್ ಪೇಟೆ : ಸಾಲ ತೀರಿಸಲಾಗದೇ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ದಾಬಸ್‌ಪೇಟೆಯಲ್ಲಿ ನಡೆದಿದೆ. ಪಟ್ಟಣದ ಜಯರಾಮು ಬಡಾವಣೆ ನಿವಾಸಿ ಚೇತನ್ (28) ಮೃತಪಟ್ಟ ಯುವಕ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಚೇತನ್‌ ನಾಲ್ಕೈದು ತಿಂಗಳಿಂದ ನಿರುದ್ಯೋಗಿಯಾಗಿದ್ದ. ಕೆಲವರಿಂದ‌ ಒಂದೂವರೆ ಲಕ್ಷ ಸಾಲ ಪಡೆದಿದ್ದ. ಅದನ್ನು ತೀರಿಸಲಾಗದೆ ಮನನೊಂದು ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ‍ಪ್ರಕರಣ ದಾಖಲಿಸಿಕೊಂಡಿರುವ ದಾಬಸ್‌ಪೇಟೆ ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಇನ್ಸ್ ಪೆಕ್ಟರ್ ನಿಂದ 5 ತಿಂಗಳಲ್ಲಿ 4 ಭಾರಿ ರೇಪ್‌ : ಕೈ ಮೇಲೆ ನೋಟ್‌ ಬರೆದು ವೈದ್ಯೆ ಆತ್ಮಹತ್ಯೆ..!

Image
ಪೊಲೀಸ್ ಇನ್ಸ್ ಪೆಕ್ಟರ್ ನಿಂದ 5 ತಿಂಗಳಲ್ಲಿ 4 ಭಾರಿ ರೇಪ್‌ : ಕೈ ಮೇಲೆ ನೋಟ್‌ ಬರೆದು ವೈದ್ಯೆ ಆತ್ಮಹತ್ಯೆ..! ಮಹಾರಾಷ್ಟ್ರ:ಈ ರಾಜ್ಯದ   ಸತಾರಾ ಜಿಲ್ಲೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಗೋಪಾಲ್ ಬಡ್ನೆ , ವೈದ್ಯೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. 5 ತಿಂಗಳಲ್ಲಿ ನಾಲ್ಕು ಭಾರಿ ರೇಪ್ ಮಾಡಿದ್ದಾರೆ. ಇದರಿಂದ ನೊಂದ ಸಂತ್ರಸ್ಥ ವೈದ್ಯೆ, ಡಿವೈಎಸ್ಪಿಗೆ ದೂರು ನೀಡಿದ್ದರು. ಈಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ಐದು ತಿಂಗಳಲ್ಲಿ ನಾಲ್ಕು ಬಾರಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (SI) ನಿಂದ ಅತ್ಯಾಚಾರಕ್ಕೊಳಗಾಗಿದ್ದ ಮಹಿಳಾ ವೈದ್ಯೆಯೊಬ್ಬರು ಗುರುವಾರ ರಾತ್ರಿ ಮಹಾರಾಷ್ಟ್ರದ ಸತಾರಾದ ಜಿಲ್ಲಾ ಆಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ತನ್ನ ಎಡ ಅಂಗೈಯಲ್ಲಿ ಬರೆದಿರುವ ಟಿಪ್ಪಣಿಯಲ್ಲಿ, ಸಂತ್ರಸ್ತೆ ಎಸ್‌ಐ ಗೋಪಾಲ್ ಬಡ್ನೆ ಅವರ ಮೇಲೆ ದೈಹಿಕ ಮತ್ತು ಮಾನಸಿಕ ಕಿರುಕುಳದ ಆರೋಪ ಹೊರಿಸಿದ್ದಾಳೆ . ಅವರ ನಿರಂತರ ಕಿರುಕುಳವು ತನ್ನನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದೆ ಎಂದು ಹೇಳಿದ್ದಾಳೆ. ಬಡ್ನೆಯನ್ನು ಈಗ ಅಮಾನತುಗೊಳಿಸಲಾಗಿದೆ. ಟಿಪ್ಪಣಿಯಲ್ಲಿ, ಪೊಲೀಸ್ ಅಧಿಕಾರಿ ಪ್ರಶಾಂತ್ ಬಂಕರ್ ಅವರ ಮೇಲೆ ಮಾನಸಿಕ ಕಿರುಕುಳದ ಆರೋಪವನ್ನೂ ಅವರು ಹೊರಿಸಿದ್ದಾರೆ. ನಾನು ಸಾಯಲು ಪೊಲೀಸ್ ಇನ್ಸ್‌ಪೆಕ್ಟರ್ ಗೋಪಾಲ್ ಬಡ್ನೆ ಕಾರಣ. ಅವರು ನಾಲ್ಕು ಬಾರಿ ನನ್ನ ಮೇಲೆ ಅತ್ಯಾಚಾರ ಮಾಡಿದರು. ಅವರು ...