Posts

Showing posts from December, 2024

ಕ್ಯಾನ್ಸರ್' ಗೆ ಮುಖ್ಯ ಕಾರಣ ಈ 2 ಪದಾರ್ಥಗಳು : ಈಗಲೇ ತಿನ್ನುವುದು ಬಿಡಿ.!

Image
" ಕ್ಯಾನ್ಸರ್' ಗೆ ಮುಖ್ಯ ಕಾರಣ ಈ 2 ಪದಾರ್ಥಗಳು : ಈಗಲೇ ತಿನ್ನುವುದು ಬಿಡಿ.!" ಕ್ಯಾನ್ಸರ್: ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಹೆಸರು ಕೇಳಿದರೆ ಅನೇಕರು ನಡುಗುತ್ತಾರೆ. ಏಕೆಂದರೆ ಇದು ಜಗತ್ತನ್ನೇ ತಲ್ಲಣಗೊಳಿಸುತ್ತಿರುವ ಮಹಾಮಾರಿ. ಇದರಿಂದ ಸಾಕಷ್ಟು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಕೆಲವು ಸರಳ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ಈ ಭಯಾನಕ ಕಾಯಿಲೆಗೆ ತುತ್ತಾಗುವುದನ್ನು ತಪ್ಪಿಸಬಹುದು ಎಂದು ತಜ್ಞರು ಹೇಳುತ್ತಾರೆ. ಸೆಲೆಬ್ರಿಟಿ ಡಯೆಟಿಷಿಯನ್ ನಿಕೋಲ್ ಆಂಡ್ರ್ಯೂಸ್ ಇತ್ತೀಚೆಗೆ ವೈರಲ್ ಇನ್ಸ್ಟಾಗ್ರಾಮ್ ವೀಡಿಯೊದಲ್ಲಿ ಕ್ಯಾನ್ಸರ್ ಬಗ್ಗೆ ಆಘಾತಕಾರಿ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ನಾವು ಪ್ರತಿದಿನ ಸೇವಿಸುವ ಆಹಾರದಲ್ಲಿ ಎರಡು ಅಪಾಯಕಾರಿ ಪದಾರ್ಥಗಳಿದ್ದು ಅದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ನಿಕೋಲ್ ಆಂಡ್ರ್ಯೂಸ್ ಅವರು ಕ್ಯಾನ್ಸರ್ಗೆ ಮುಖ್ಯ ಅಪಾಯಕಾರಿ ಅಂಶಗಳೆಂದರೆ ಆಲ್ಕೋಹಾಲ್ ಮತ್ತು ಸಂಸ್ಕರಿಸಿದ ಮಾಂಸ. ಆಲ್ಕೋಹಾಲ್ ಸೇವನೆಯು ಯಕೃತ್ತಿನ ಅಪಾಯವನ್ನು ಮಾತ್ರವಲ್ಲದೆ ಸ್ತನ, ಬಾಯಿ, ಗಂಟಲು, ಅನ್ನನಾಳ ಮತ್ತು ಕರುಳಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಆಲ್ಕೋಹಾಲ್ ದೇಹಕ್ಕೆ ಪ್ರವೇಶಿಸಿದಾಗ, ಅದು ಅಸೆಟಾಲ್ಡಿಹೈಡ್ ಆಗಿ ಬದಲಾಗುತ್ತದೆ. ಇದು ಡಿಎನ್‌ಎಗೆ ಹಾನಿ ಮಾಡುತ್ತದೆ ಮತ್ತು ಕ್ಯಾನ...

"ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಕೊಲೆ ಮಾಡಿದ ಅಪ್ಪನಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ನ್ಯಾಯಾಲಯ"

Image
      "ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಕೊಲೆ ಮಾಡಿದ ಅಪ್ಪನಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ನ್ಯಾಯಾಲಯ" ಮಂಗಳೂರು : ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಕೊಲೆ ಮಾಡಿದ ಅಪ್ಪನಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ನ್ಯಾಯಾಲಯ ಮಂಗಳೂರು: ತನ್ನ ಹೆಂಡತಿಯ ಮೇಲಿನ ದ್ವೇಷದಿಂದ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತಂದೆಗೆ ಮಂಗಳೂರಿನ ಮೂರನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ಆದೇಶಿಸಿದೆ. ತಾಳಿಪಾಡಿ, ಪದ್ಮನೂರು, ಶೆಟ್ಟಿಕಾಡು ನಿವಾಸಿ ಹಿತೇಶ್ ಶೆಟ್ಟಿಗಾರ್(43) ಮರಣದಂಡನೆ ಶಿಕ್ಷೆಗೊಳಗಾದ ಅಪರಾಧಿ. ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಹಿತೇಶ್, ಕೆಲಸಕ್ಕೆ ಹೋಗುವುದಕ್ಕೂ ಆಸಕ್ತಿ ತೋರುತ್ತಿರಲಿಲ್ಲ. ಇದರಿಂದ ಸಂಸಾರ ಸಾಗಿಸೋದು ಕಷ್ಟವಾಗಿತ್ತು. ಆದ್ದರಿಂದ ಹೇಗಾದರೂ ಮಾಡಿ ಪತ್ನಿ ಹಾಗೂ ಮೂವರು ಮಕ್ಕಳನ್ನು ಕೊಲೆಗೈದರೆ, ತಾನು ಹೇಗೆ ಬೇಕಾದರೂ ಜೀವಿಸಬಹುದು ಎಂದು ಆಲೋಚಿಸಿದ್ದ. 2022ರ ಜೂನ್ 23ರಂದು ಸಂಜೆ 5.15ರಸುಮಾರಿಗೆ ಶಾಲೆಯಿಂದ ಹಿಂದಿರುಗಿ ಬಂದಿದ್ದ ತನ್ನ ಮೂವರು ಮಕ್ಕಳಾದ ರಶ್ಮಿತಾ(14), ಉದಯ ಕುಮಾರ್ (11), ದಕ್ಷಿತ್(4)ರನ್ನು ಹಿತೇಶ್ ಶೆಟ್ಟಿಗಾರ್ ತನ್ನ ಪಕ್ಕದ ಮನೆಯವರ ಬಾವಿಗೆ ದೂಡಿ ಹಾಕಿದ್ದಾನೆ. ಈ ವೇಳೆ ಮಕ್ಕಳು ಬಾವಿಯಲ್ಲಿನ ಹಗ್ಗ ಹಿಡಿದು ಮೇಲಕ್ಕೆ ಬರಲು ಯತ್ನಿಸಿದಾಗ, ಹಿತೇಶ್ ಕತ್ತಿಯಿಂದ ಹಗ್ಗವನ್ನು ಕಡಿದಿದ್ದಾನೆ...

ಒಂದು ಸಿಗರೇಟ್‌ ಪುರುಷರಲ್ಲಿ 17 ನಿಮಿಷ, ಮಹಿಳೆಯರಲ್ಲಿ 22 ನಿಮಿಷ ಆಯಸ್ಸು ಕಡಿಮೆ ಮಾಡುತ್ತೆ!

Image
ಒಂದು ಸಿಗರೇಟ್‌ ಪುರುಷರಲ್ಲಿ 17 ನಿಮಿಷ, ಮಹಿಳೆಯರಲ್ಲಿ 22 ನಿಮಿಷ ಆಯಸ್ಸು ಕಡಿಮೆ ಮಾಡುತ್ತೆ,,,,,,,!!!!!!!!!" ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಅಂತ ಗೊತ್ತಿದ್ರೂ, ಸಿಗರೇಟ್ ಪ್ಯಾಕ್ ಮೇಲೆ 'ಸ್ಮೋಕಿಂಗ್ ಕಿಲ್ಸ್' ಅಂತ ಬರೆದಿದ್ರೂ ಜನ ಸಿಗರೇಟ್ ಸೇದ್ತಾರೆ. ಸ್ಟೈಲ್ ಗೋಸ್ಕರ ಶುರು ಮಾಡಿ, ವ್ಯಸನಿಗಳಾಗ್ತಾರೆ. ಹೊಸ ಅಧ್ಯಯನದ ಪ್ರಕಾರ, ಧೂಮಪಾನದಿಂದ ಆಯಸ್ಸು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗುತ್ತದೆಯಂತೆ. ಪುರುಷರು ಒಂದು ಸಿಗರೇಟ್ ಸೇದ್ರೆ 17 ನಿಮಿಷ, ಮಹಿಳೆಯರು 22 ನಿಮಿಷ ಆಯಸ್ಸು ಕಡಿಮೆಯಾಗುತ್ತೆ ಅಂತ ಹೊಸ ಅಧ್ಯಯನ ಹೇಳುತ್ತೆ. ಯೂನಿವರ್ಸಿಟಿ ಕಾಲೇಜ್ ಲಂಡನ್ ನ ಹೆಲ್ತ್ ಅಂಡ್ ಸೋಶಿಯಲ್ ಕೇರ್ ವಿಭಾಗ ಈ ಮಾಹಿತಿ ನೀಡಿದೆ.  ಧೂಮಪಾನಿಗಳು ತಮ್ಮ ಜೀವಿತಾವಧಿಯಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಕಳೆದುಕೊಳ್ಳುತ್ತಾರೆ. ಒಂದು ಸಿಗರೇಟ್ 20 ನಿಮಿಷ ಆಯಸ್ಸು ಕಡಿಮೆ ಮಾಡುತ್ತೆ. 20 ಸಿಗರೇಟ್ ಇರುವ ಪ್ಯಾಕೆಟ್ 7 ಗಂಟೆ ಆಯಸ್ಸು ಕಡಿಮೆ ಮಾಡುತ್ತದೆ ಎಂದು ಹೇಳಬಹುದು  ಡಾ. ಸಾರಾ ಜಾಕ್ಸನ್ ಹೇಳುವ ಪ್ರಕಾರ, ಧೂಮಪಾನಿಗಳು ಸುಮಾರು ಒಂದು ದಶಕದಷ್ಟು ಜೀವಿತಾವಧಿ ಕಳೆದುಕೊಳ್ಳುತ್ತಾರೆ. ಬೇಗ ಧೂಮಪಾನ ಬಿಟ್ಟಷ್ಟು ಆರೋಗ್ಯವಾಗಿ, ಹೆಚ್ಚು ಕಾಲ ಬದುಕಬಹುದು. ಹೊಸ ವರ್ಷದ ದಿನ ಧೂಮಪಾನ ಬಿಟ್ಟರೆ ಫೆಬ್ರವರಿ 20 ರ ವೇಳೆಗೆ ಒಂದು ವಾರದಷ್ಟು ಆಯಸ್ಸು ಹೆಚ್ಚಿಸಿ...

"ತೀರ್ಥಹಳ್ಳಿ: ಮಂಗನ ಕಾಯಿಲೆ ಜನರಿಗೆ ಆತಂಕ"

Image
     " ತೀರ್ಥಹಳ್ಳಿ: ಮಂಗನ ಕಾಯಿಲೆ ಜನರಿಗೆ ಆತಂಕ"            ತೀರ್ಥಹಳ್ಳಿ: ತಾಲೂಕಿನ ಬೆಟ್ಟ ಬಸವಾನಿ ವ್ಯಾಪ್ತಿಯಲ್ಲಿ ಜಗ್ಗಿನ ಗದ್ದೆ ಬಳಿ ಉಣುಗುಗಳಲ್ಲಿ ಕೆ ಎಫ್ ಡಿ ವೈರಸ್ ಕಾಣಿಸಿಕೊಂಡಿದೆ.      ಸದ್ಯ ಇದು ಪ್ರಾಥಮಿಕ ವೈರಸ್ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ.           ಕಳೆದ ಬಾರಿ ಜನರಿಗೆ ಸಿಂಹ ಸ್ವಪ್ನದಂತೆ ಕಾಡಿ ಅನೇಕ ಸಾವು ನೋವುಗಳಿಗೆ ಕಾರಣವಾಗಿದ್ದ ಕೆ ಎಫ್ ಡಿ ವೈರಸ್ ತನ್ನ ಇರುವಕೆಯನ್ನು ಋಜುವಾತು ತುಪಡಿಸಿದೆ. ಅಡಿಕೆ ತೋಟದ ಕೆಲಸಕ್ಕಾಗಿ ಅನೇಕ ಜಿಲ್ಲೆಗಳಿಂದ ಕೂಲಿ ಕಾರ್ಮಿಕರು ಸಹ ಆಗಮಿಸಿದ್ದು ಅವರಿಗೆ ಕೆ ಎಫ್ ಡಿ ವೈರಸ್ ಬಗ್ಗೆ ಮಾಹಿತಿ ಇರುವುದಿಲ್ಲ. . . . . . .                ಕ್ಷಣ ಕ್ಷಣದ ಸುದ್ದಿಗಳಿಗಾಗಿ ನೋಡ್ತಾಯಿರಿ ಕರ್ನಾಟಕ ಸಿಟಿಝನ್ ನ್ಯೂಸ್ ಸದಾ ನಿಮ್ಮ ಜೊತೆ

ಹೈದರಾಬಾದ್‌ನಿಂದ ಹೊಸನಗರಕ್ಕೆ ವಾಪಸ್‌ ಬಂದ ಮನೆಯ ಮಾಲೀಕರಿಗೆ ಎದುರಾಗಿತ್ತು ಶಾಕ್

Image
ಹೈದರಾಬಾದ್‌ನಿಂದ ಹೊಸನಗರಕ್ಕೆ ವಾಪಸ್‌ ಬಂದ ಮನೆಯ ಮಾಲೀಕರಿಗೆ ಎದುರಾಗಿತ್ತು ಶಾಕ್       ಹೊಸನಗರ     :   ಶುಭಕಾರ್ಯದಲ್ಲಿ ಪಾಲ್ಗೊಳ್ಳುವ ಸಲುವಾಗಿ ಹೈದರಾಬಾದ್‌ಗೆ ಹೋಗಿ ವಾಪಸ್‌ ಬಂದ ಹೊಸನಗರದ ಗೋರಗೋಡು ಗ್ರಾಮದ ನಿವಾಸಿಯೊಬ್ಬರಿಗೆ ಆಘಾತವೊಂದು ಎದುರಾಗಿತ್ತು. ಏಕೆಂದರೆ ಅವರ ಮನೆಯ ಹೆಂಚು ತೆಗೆದು ಬರೋಬ್ಬರಿ 9 ಲಕ್ಷ ರೂಪಾಯಿ ಮೌಲ್ಯದ ಒಡವೆ ಕಳ್ಳತನ ಮಾಡಲಾಗಿದೆ.            ಸ್ಥಳೀಯ ವರದಿ ಪ್ರಕಾರ, ಮನೆಯಲ್ಲಿ ಯಾರೂ ಇಲ್ಲದ್ದನ್ನು ಹೊಂಚು ಹಾಕಿರುವ ಕಳ್ಳರು ಪ್ರತಿಭಾ ಕೃಷ್ಟೋಜಿರಾವ್ ಎಂಬುವರ ಮನೆಯಲ್ಲಿ ಡಿಸೆಂಬರ್‌ 25 ರಂದು ಕಳ್ಳತನ ಮಾಡಿದ್ದಾರೆ. ಈ ವೇಳೆ ಮನೆಯವರು ಹೈದರಾಬಾದ್‌ಗೆ ತೆರಳಿದ್ದರು. ಮನೆಯ ಹೆಂಚುಗಳನ್ನು ತೆಗೆದು ಒಳನುಗ್ಗಿರುವ ಕಳ್ಳರು ಗೋದ್ರೇಜ್ ಬೀರುವಿನಲ್ಲಿಟ್ಟಿದ್ದ ಬಳೆ, ಸರ, ಓಲೆ ಸೇರಿದಂತೆ ಚಿನ್ನದ ಆಭರಣಗಳನ್ನು ಕಳವು ಮಾಡಿದ್ದಾರೆ. ಹೈದರಬಾದ್‌ನಿಂದ ವಾಪಸ್‌ ಬಂದ ಬಳಿಕ ನಡೆದ ಘಟನೆ ಬೆಳಕಿಗೆ ಬಂದಿದ್ದು ಈ ಸಂಬಂಧ ಹೊಸನಗರ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ. . . . .          ಕ್ಷಣದ ಸುದ್ದಿಗಳಿಗಾಗಿ ನೋಡ್ತಾಯಿರಿ ಕರ್ನಾಟಕ ಸಿಟಿಝನ್ ನ್ಯೂಸ್ ಸದಾ ನಿಮ್ಮ ಜೊತೆ 

ಸಾಗರ : ಕಾರುಡಿಕ್ಕಿ ಅಪರಿಚಿತ ವ್ಯಕ್ತಿ ಸಾವು

Image
ಸಾಗರ : ಕಾರುಡಿಕ್ಕಿ ಅಪರಿಚಿತ ವ್ಯಕ್ತಿ ಸಾವು ಸಾಗರ 29/12/2024:      ನೆನ್ನೆ ರಾತ್ರಿ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಪಾದಾಚಾರಿ ಸಾವನ್ನಪ್ಪಿದ್ದು ಈ ಘಟನೆಯು ನಿನ್ನೆ ಕುಗ್ವೆ ಕ್ರಾಸ್ ಬಳಿ ನಡೆಯುತ್ತಿರುತ್ತದೆ. ಕುಗ್ವೆ ತಿರುವಿನಲ್ಲಿ ಅಪರಿಚಿತ ವ್ಯಕ್ತಿ ರಸ್ತೆ ದಾಟುತ್ತಿರುವಾಗ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ತೀವ್ರ ಗಾಯವಾಗಿದ್ದು ತಕ್ಷಣವೇ ಕಾರು ಚಾಲಕ ಹಾಗೂ ಸ್ಥಳೀಯರು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಮೃತ ವ್ಯಕ್ತಿಯ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ ಆದರೆ ವ್ಯಕ್ತಿಯ ಮೈಮೇಲೆ ಹಚ್ಚೆ ಹಾಕಿಸಿಕೊಂಡಿರುವ ಗುರುತುಗಳು ಇವೆ ಎಂದು ಮಾಹಿತಿ ಲಭ್ಯವಾಗಿದೆ.             ಕ್ಷಣ ಕ್ಷಣದ ಸುದ್ದಿಗಳಿಗಾಗಿ ನೋಡ್ತಾಯಿರಿ  ಕರ್ನಾಟಕ ಸಿಟಿಝನ್ ನ್ಯೂಸ್ ಸದಾ ನಿಮ್ಮ ಜೊತೆ 

ಶೃಂಗೇರಿಯ ಶಿಡ್ಲೆಯಲ್ಲಿ ಭೀಕರ ಅಪಘಾತ : ಓರ್ವ ಮಹಿಳೆ ಸ್ಥಳದಲ್ಲೇ ಸಾವು.

Image
ಶೃಂಗೇರಿಯ ಶಿಡ್ಲೆಯಲ್ಲಿ ಭೀಕರ ಅಪಘಾತ : ಓರ್ವ ಮಹಿಳೆ ಸ್ಥಳದಲ್ಲೇ ಸಾವು.          ಶೃಂಗೇರಿ: 28/12/2024ರ ಶನಿವಾರ ಸಂಜೆ ಸುಮಾರು 5:30 ರ ವೇಳೆ ಪಟ್ಟಣದ ಮೆಣಸೆ ಗ್ರಾಮದ ರಾಜ್ಯ ಹೆದ್ದಾರಿಯ ಸಮೀಪದ ಶಿಡ್ಲೆ ಬಸ್ಟಾಪ್ ಮುಂಭಾಗದಲ್ಲಿ ಈಘಟನೆ ನಡೆದಿದೆ. ಶೃಂಗೇರಿ ಪಟ್ಟಣದ ಮೆಣಸೆ ಕಡೆಯಿಂದ ವೇಗವಾಗಿ ಬರುತ್ತಿದ್ದ ತ್ತಿದ್ದ ಕಾರು ಮುಂಭಾಗದಿಂದ ಬರುತ್ತಿದ್ದ ಟಿ ಟಿ ವಾಹನಕ್ಕೆ ರಭಸವಾಗಿ ಗುದ್ದಿದ ಪರಿಣಾಮವಾಗಿ ಕಾರಿನಲ್ಲಿದ್ದ " ಧರ್ಮಪುರಿ ಮೂಲದ ಮಹಿಳೆ ಭುವನ (65)" ಸ್ಥಳದಲ್ಲೇ ಸಾವನ್ನಪ್ಪಿದ್ದು. ಹಲವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಶೃಂಗೇರಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆಯು ಶೃಂಗೇರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.                           ಕ್ಷಣ ಕ್ಷಣದ ಸುದ್ದಿಗಳಿಗಾಗಿ  ನೋಡ್ತಾಯಿರಿ ಕರ್ನಾಟಕ ಸಿಟಿಝನ್ ನ್ಯೂಸ್ ಸದಾ ನಿಮ್ಮ ಜೊತೆ