Posts

Showing posts from April, 2026

ಕೊಪ್ಪ : "ದಿವಂಗತ ಮಂಜುನಾಥ್ ಸ್ಮರಣಾರ್ಥ ರಕ್ತ ದಾನ ಶಿಬಿರ "

Image
ಕೊಪ್ಪ : "ದಿವಂಗತ ಮಂಜುನಾಥ್ ಸ್ಮರಣಾರ್ಥ ರಕ್ತ ದಾನ ಶಿಬಿರ "  ಕೊಪ್ಪ : 04/04/26 ಶನಿವಾರ         ನಾಳೆಯ ದಿನ "ದಿವಂಗತ ಮಂಜುನಾಥ್" ಇವರ ಸ್ಮರಣಾರ್ಥವಾಗಿ, ಬ್ಲಡ್ ಡೋನರ್ಸ್ ಮಂಗಳೂರು, ಮೆಗ್ಗಾನ್ ರಕ್ತ ನಿಧಿ ಕೇಂದ್ರ ಹಾಗೂ ಕೊಪ್ಪ ಬ್ಲಡ್ ಡೋನರ್ಸ್ ಇವರ ವತಿಯಿಂದ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಕೊಪ್ಪ ಪಟ್ಟಣದ ಮಾರ್ಕೆಟ್ ರಸ್ತೆಯಲ್ಲಿನ ಗೂಡ್ಸ್ ನಿಲ್ದಾಣದಲ್ಲಿ ಕೆಲವು ದಿನ ಗಳ ಹಿಂದೆ ರಿಕ್ಷಾ ಅಪಘಾತದಲ್ಲಿ ತಲೆಗೆ ಬಲವಾಗಿ ಪೆಟ್ಟು ಬಿದ್ದು ಚಿಕಿತ್ಸೆ ಫಲಕಾರಿ ಯಾಗದೇ ತನ್ನ ಅಂಗಾಂಗಗಳನ್ನು ದಾನ ಮಾಡಿ ಇವರ ಅಂಗಾಂಗಗಳಿಗೆ ಇನ್ನೊಬ್ಬರಿಗೆ ಕೊಟ್ಟು ಮರುಜೀವ ನೀಡಿ ಸಮಾಜಕ್ಕೆ ಮಾದರಿ ಯಾದಂತಹ ವ್ಯಕ್ತಿಯ ಸ್ಮರಣೆಗಾಗಿ ರಕ್ತದಾನ ಶಿಬಿರವನ್ನು ಆಯೋಜಿಸಿದೆ, ಆದ್ದರಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ ಶಿಬಿರದಲ್ಲಿ ಭಾಗವಹಿಸಬೇಕಾಗಿ ವಿನಂತಿ...🤝 *ಆದಷ್ಟು ಶೇರ್ ಮಾಡುವ ಮೂಲಕ ಮಲೆನಾಡಿನಲ್ಲಿ ತುರ್ತಾಗಿ ರಕ್ತದ ಅವಶ್ಯಕತೆ ಇದ್ದಾಗ ಸಹಾಯ ಮಾಡುವ ಈ ತಂಡಕ್ಕೆ ನಿಮ್ಮ ಸಹಕಾರವಿರಲಿ..*

ಹಾವೇರಿ ಬಸ್ ನಿಲ್ದಾಣದಲ್ಲಿ ನಿಂತಿದ್ದವರ ಮೇಲೆ ನುಗ್ಗಿದ ಬಸ್; 2 ವರ್ಷದ ಮಗು ಸಾವು, ನಾಲ್ವರಿಗೆ ಗಾಯ..!

Image
ಹಾವೇರಿ ಬಸ್ ನಿಲ್ದಾಣದಲ್ಲಿ ನಿಂತಿದ್ದವರ ಮೇಲೆ ನುಗ್ಗಿದ ಬಸ್; 2 ವರ್ಷದ ಮಗು ಸಾವು, ನಾಲ್ವರಿಗೆ ಗಾಯ..! ಹಾವೇರಿ: ನಗರದ ಎನ್‌ಡಬ್ಲ್ಯುಕೆಆರ್‌ಟಿಸಿ ಬಸ್ ನಿಲ್ದಾಣದಲ್ಲಿ (Haveri Bus stand Accident) ಬುಧವಾರ ಮುಂಜಾನೆ ಘೋರ ಅಪಘಾತ ಸಂಭವಿಸಿದೆ. ಚಾಲಕನ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದಾಗಿ ಪ್ಲಾಟ್‌ಫಾರ್ಮ್‌ ಮೇಲೆ ನಿಂತಿದ್ದವರ ಮೇಲೆ ಬಸ್‌ ನುಗ್ಗಿದ ಪರಿಣಾಮ ಎರಡು ವರ್ಷದ ಪುಟ್ಟ ಮಗು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬುಧವಾರ ಮುಂಜಾನೆ ಸುಮಾರು 06.30 ಗಂಟೆಯಲ್ಲಿ ಘಟನೆ ಸಂಭವಿಸಿದೆ. ವಾಯವ್ಯ ಕರ್ನಾಟಕ ಸಾರಿಗೆ ಬಸ್‌ ಚಾಲಕ ಮಂಜುನಾಥ ಎಂಬಾತನ ಅತಿಯಾದ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ದುರಂತ ಸಂಭವಿಸಿದೆ. ಪ್ಲಾಟ್ ಫಾರ್ಮ್‌ ನಂ.2 ಕಡೆಗೆ ಏಕಾಏಕಿ ಸಾರಿಗೆ ಬಸ್‌ ನುಗ್ಗಿದ್ದರಿಂದ ಸವಣೂರಿನ ಹಜರತ್‌ ಅಲಿ (2) ಮಗು ಮೃತಪಟ್ಟಿದೆ. ಘಟನೆಯಲ್ಲಿ ಬಂಕಾಪುರದ ವಾಸುದೇವ (44), ಹರ್ಷ (6), ಕಾವ್ಯಾಂಜಲಿ (39), ಅರಬಜ್‌ಖಾನ್‌ (13) ಗಾಯಗೊಂಡಿದ್ದಾರೆ. ಬಸ್‌ ಹರಿದಿದ್ದರಿಂದ ಹಜರತ್ ಅಲಿ ತೀವ್ರವಾಗಿ ಗಾಯಗೊಂಡಿದ್ದ. ತಕ್ಷಣವೇ ಹಾವೇರಿ ಜಿಲ್ಲಾಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಹಜರತ್ ಅಲಿ ಮೃತಪಟ್ಟಿದ್ದಾನೆ. ಈ ಅಪಘಾತದ ಬಗ್ಗೆ ನಯಿಮ್ ಎಂಬುವವರು ನೀಡಿದ...