" ಕಾಡಾನೆ ದಾಳಿಯಿಂದ ರೈತ ಭೀಕರವಾಗಿ ಸಾವು"

" ಕಾಡಾನೆಯ ಭೀಕರ ದಾಳಿಯಿಂದಾಗಿ ರೈತ ಹೀನಾಯವಾಗಿ ಸಾವು" 
ಚಿಕ್ಕಮಗಳೂರು : ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಸೀತೂರು ಗ್ರಾಮ ಪಂಚಾಯಿತಿಯ ಹಿಂಬದಿಯಲ್ಲಿ ಕುದುರೆಗುಂಡಿ ಸಮೀಪ ಕಾಡಾನೆ ದಾಳಿಗೆ ಒಬ್ಬ ರೈತ ಹೀನಾಯವಾಗಿ ಬಲಿಯಾಗಿದ್ದು ಅತ್ಯಂತ ಅಮಾನುಷ ಹಾಗೂ ಭೀಕರವಾಗಿ ಸಾವನ್ನಪ್ಪಿದ್ದಾನೆ.
               
                 ಇತ್ತೀಚಿನ ಕಳೆದೊಂದೆರಡು ವಾರಗಳಲ್ಲಿ ಕಾಡಾನೆಯ ಗುಂಪು ಗುಂಪಾಗಿ ಚಿಕ್ಕಮಗಳೂರು ವಿಭಾಗದಲ್ಲಿ ಕಳಸ, ಶೃಂಗೇರಿ (ಕೆರೆಕಟ್ಟೆ ) ಮಲೆನಾಡಿನ ಹಲವು ಭಾಗಗಳಲ್ಲಿ ಸಂಚಾರ ಮಾಡುತ್ತಿದ್ದು ಕಾಡಾನೆಗಳು ಊರಿಗೆ ಬಂದು ಜನಸಾಮಾನ್ಯರು ತಿರುಗಾಡುವ ಮಧ್ಯ ರಸ್ತೆಯಲ್ಲಿ ಹಾಗೂ ರೈತರು ಬೆಳೆದಿರುವಂತಹ ಅಡಿಕೆ ತೋಟ,ಕಾಫಿ, ಭತ್ತದ ಗದ್ದೆಗಳಲ್ಲಿ ರೈತರ ಬೆಳೆಗಳನ್ನು ಹಾಳು ಮಾಡಿ ಮನುಷ್ಯರು ಕಂಡು ಬಂದಲ್ಲಿ ಅವರನ್ನು ಏಕಾಏಕಿ ದಾಳಿ ಮಾಡುವುದಲ್ಲದೆ ಕೊಂದು ಬಿಡುತ್ತಿವೆ, ಹಾಗೆಯೇ ಹಳ್ಳಿಯಿಂದ ತಿರುಗಾಡುವ ಶಾಲಾ ಮಕ್ಕಳು, ಕೆಲ ಸಕ್ಕೆಂದು ತಿರುಗಾಡುವ ಜನರಿಗೆ ಭಯವನ್ನು ಉಂಟು ಮಾಡುವುದಲ್ಲದೆ ಪಶ್ಚಿಮ ಘಟ್ಟದ ಜನರು ಭಯದಿಂದ ಓಡಾಡುವ ಪರಿಸ್ಥಿತಿ ಕೂಡ ನಿರ್ಮಾಣವಾಗಿದೆ. ಅಲ್ಲದೆ ಕೆಲವು ತಿಂಗಳಿಂದ ಮಾಧ್ಯಮಗಳಲ್ಲಿಯೂ ಕಾಡಾನೆ ಹಾವಳಿಯ ವಿಡಿಯೋಗಳು ಬರುತ್ತಲೇ ಇದ್ದು. ನೆನ್ನೆಯ ದಿನ ಎನ್ ಆರ್ ಪುರ ತಾಲೂಕಿನ ಕೆರೆಗದ್ದೆ ನಿವಾಸಿ ಉಮೇಶ್(55) ಅವರನ್ನು ಕಾಡಾನೆಯೋನ್ದು ಸುಮಾರು 1:30 ರ ವೇಳೆ ಸರಿಯಾಗಿ ಬಹಳ ಹೀನಾಯವಾಗಿ ಅನ್ಯಾಯವಾಗಿ ಏಕಾಏಕಿ ದಾಳಿ ನಡೆಸಿ ಕೊಂದು ಹಾಕಿದೆ.
         ಈ ಭಾಗದಲ್ಲಿ ಇರುವ ರೈತರಿಗೆ ಕಾಡು ಪ್ರಾಣಿಗಳು ಹೆಚ್ಚಾಗಿ ಉಪಟಳ ನೀಡುತ್ತಿದ್ದು ಸೀತೂರಿನ ಕೃಷ್ಣೆಗೌಡರ ತೋಟದಲ್ಲಿ ಸುಮಾರು 50ಕ್ಕೂ ಹೆಚ್ಚು ಅಡಿಕೆ ಮರಗಳನ್ನು ನಾಶ ಮಾಡಿದ್ದು. ಇದು ಸ್ಥಳೀಯ ಜನಪ್ರತಿನಿಧಿಗಳು ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದಿದ್ದು ಯಾವುದೇ ರೀತಿಯ ಕ್ರಮಗಳನ್ನು ಇನ್ನು ತೆಗೆದು ಕೊಂಡಿಲ್ಲ ಎಂದು ತೀವ್ರವಾಗಿ ಆರೂಪಿಸಿದ್ದಾರೆ ಇದು ವಿಪರ್ಯಾಸದ ಸಂಗತಿ ಈ ಘಟನೆಯು ಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
    
                   ಇದಕ್ಕೆಲ್ಲ ಅರಣ್ಯ ಅಧಿಕಾರಿಗಳು ತೆಗೆದುಕೊಂಡಿರುವ ನಿರ್ಲಕ್ಷದ ಕಾರಣವೇ ಆಗಿರಬಹುದು ಇದಕ್ಕೆ ಪರಿಹಾರವನ್ನು ಸರ್ಕಾರ ಹಾಗೂ ಅರಣ್ಯ ಅಧಿಕಾರಿಗಳು ಜನಪ್ರತಿನಿಧಿಗಳು ತೀವ್ರವಾಗಿ ನಿಗಾವಹಿಸಿ ಇದಕ್ಕೆ ಸರಿಯಾದ ಸೂಕ್ತ ಹಾಗೂ ತುರ್ತು ಕ್ರಮ ಜರುಗಿಸಬೇಕು ಇಲ್ಲದಿದ್ದರೆ ಪ್ರಾಣಿಗಳ ರಕ್ಷಣೆಯ ಹೆಸರಿನಲ್ಲಿ ರೈತರು ಹಾಗೂ ಜನಸಾಮಾನ್ಯರು ಬದುಕಲು ಅಸಾಧ್ಯವಾಗಿ ಪ್ರಾಣಕ್ಕೆ ಬೆಲೆ ಇಲ್ಲದಂತಾಗಿದೆ ದಿನಗಳಲ್ಲಿ ಪ್ರಾಣಿಗಳ ಜೀವಕ್ಕೆ ಇರುವ ಬೆಲೆ ಮನುಷ್ಯರಿಗೆ ಇಲ್ಲದಂತಾಗಿದೆ.

          " ಕ್ಷಣ ಕ್ಷಣದ ಸುದ್ದಿಗಳಿಗಾಗಿ ನೋಡ್ತಾಯಿರಿ ಕರ್ನಾಟಕ ಸಿಟಿಝನ್ ನ್ಯೂಸ್ ಪ್ರತಿ ಕ್ಷಣ ಕ್ಷಣವು ನಿಮ್ಮ ಜೊತೆ "
                 

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "

" ಶೃಂಗೇರಿಯಲ್ಲಿ ಭೀಕರ ಅಪಘಾತ "