" ಕಾಡಿನ ಮದ್ಯೆ ಒಂಟಿ ವೃಧ್ಯೆ ಸಂಕಷ್ಟಕ್ಕೆ ಅಧಿಕಾರಿಗಳ ಭೇಟಿ "
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೆ ಗ್ರಾಮ ವ್ಯಾಪ್ತಿಗೆ ಬರುವ ಕಾರ್ಲೆ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ಗಾಳಿ ಮಳೆಗೆ ಮನೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಬೆಲ್ಲಮ್ಮನವರ ಕಾಲಿಗೆ ಮರದ ಕೊಂಬೆ ಬಿದ್ದು ಗಾಯಗಳು ಲಾಗಿತ್ತು ಮತ್ತು ಮನೆಯ ಮೇಲೆ ಮರ ಬಿದ್ದಿದ್ದರಿಂದ ಮನೆಯ ಮೇಲ್ಚಾವಣಿ ಸಂಪೂರ್ಣ ಜಖಂ ಗೊಂಡಿದೆ ಕೂಡಲೇ ಬೆಲ್ಲಮ್ಮನವರನ್ನು ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಕಳಸ ತಹಸಿಲ್ದಾರ್ ಅಂದಿನ ತಹಶೀಲ್ದಾರ್ ಬಸವರಾಜ್ ಅವರು ಹಾಗೂ ಉಪ ತಹಸಿಲ್ದಾರ್ ಆರ್ ಐ ವಿ ಎ . ಹಾಗೂ ಎಲ್ಲಾ ಅಧಿಕಾರಿಯನ್ನು ಸ್ಥಳಕ್ಕೆ ಭೇಟಿ ನೀಡಿದರು. ಬೆಲ್ಲಮ್ಮನವರ ಮನೆ ನೋಡಿ ಕೂಡಲೇ ನಿಮಗೆ ಪರಿಹಾರ ನೀಡುವುದಾಗಿ ಭರವಸೆಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಬೆಲ್ಲಮ್ಮನವರನ್ನು ಅವರ ಗ್ರಾಮದಿಂದ ಅವರನ್ನು ಕರೆದುಕೊಂಡು ಬರುವ ದಾರಿಯಲ್ಲಿ ಒಂದು ಹಳ್ಳ ಸಿಗುತ್ತೆ ಅದನ್ನು ದಾಟಬೇಕಾದರೂ ತುಂಬಾನೇ ಕಷ್ಟ ಹಾಗಿತ್ತು ಯಾವ ವಾಹನಗಳು ಕೂಡ ಇತ್ತ ಕಡೆ ಬರುವುದಿಲ್ಲ ಆದ್ದರಿಂದ ಇವರನ್ನು ಜೋಲಿಗೆ ಮುಖಾಂತರನೇ ಒಂದು ಕಿಲೋಮೀಟರ್ ದೂರದಿಂದ ಕರೆ ತರಲಾಯಿತು ಆನಂತರ ಪಿಕಪ್ ನಲ್ಲಿ ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತರಲಾಯಿತು ಇದನ್ನು ಎಲ್ಲಾ ಮಾಧ್ಯಮದಲ್ಲೂ ಪ್ರಸಾರ ಆದ ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಎಲ್ಲಾ ಮಾಧ್ಯಮದಲ್ಲಿ ಪ್ರಸಾರ ಆದ ಕೂಡಲೇ ಕೆಲವು ಜನರು ಮಾಧ್ಯಮದಲ್ಲಿ ಬರುವ ಸುದ್ದಿ ಸುಳ್ಳು ಎಂದು ಅಧಿಕಾರಿಗಳು ಜನಪ್ರತಿನಿಧಿಗಳಿಗೆ ತಿಳಿಸಿದರು ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು ನಮ್ಮ ವಾಹಿನಿಗೆ ಕರೆ ಮಾಡಿ ಈ ಸುದ್ದಿ ಸುಮ್ಮನೆ ಕ್ರಿಯೇಟ್ ಮಾಡಿದರೆ ಎಂದು ಆ ಗ್ರಾಮದ ಜನರಿಗೆ ತಿಳಿಸಿದ್ದಾರೆ ಕೂಡಲೇ ಆ ಗ್ರಾಮದ ಜನರು ನಮ್ಮ ವಾಹಿನಿಗೆ ಕರೆ ಮಾಡಿ ಇಲ್ಲಿ ಎಲ್ಲಾ ಜನರು ಸುಮ್ಮನೆ ಅದನ್ನು ಕ್ರಿಯೇಟ್ ಮಾಡಿ ನ್ಯೂಸ್ ಚಾನೆಲ್ ಗೆ ಕೊಟ್ಟಿದ್ದಾರೆ ಎಂದು ಆರೋಪ ಮಾಡಿದ್ದಾರೆ ಎಂದು ಆ ಗ್ರಾಮದ ಜನರು ನಮ್ಮ ಚಾನೆಲ್ ಗೆ ಕರೆ ಮಾಡಿದರು ಇಂದು ಬೆಲ್ಲಮ್ಮನವರು ಹಾಸ್ಪಿಟಲ್ ನಲ್ಲಿ ನರಳಾಡುತ್ತಿರುವ ದೃಶ್ಯ ಇದು ಅವರ ಕಣ್ಣಿಗೆ ಕಾಣುವುದಿಲ್ಲ ಎಂದು ಕಾರ್ಲೆ ಗ್ರಾಮದ ಬೆಲ್ಲಮ್ಮನವರ ಮಗ ಅಳಲನ್ನು ತೋಡಿಕೊಂಡಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಹಾಸ್ಪಿಟಲ್ಗೆ ಓಡಾಡುತ್ತಿರುವ ಬೆಲ್ಲಮ್ಮನವರು ದಿನನಿತ್ಯ ಹಾಸ್ಪಿಟಲ್ ಖರ್ಚಿಗೆ ಹಣ ಇಲ್ಲದೆ ಈ ಬಡ ಕುಟುಂಬ ಈ ಗ್ರಾಮದಲ್ಲಿ ವಾಸ ಮಾಡುತ್ತಿದೆ ಒಂದು ವಾರದಿಂದ ಕಾಲಿಗೆ ಮರದ ಕೊಂಬೆ ಬಿದ್ದು ಕಾಲು ನೋವು ಜಾಸ್ತಿಯಾಗಿತ್ತು ಕೂಡಲೇ ಹಾಸ್ಪಿಟಲ್ ಗೆ ದಾಖಲು ಮಾಡಿದ್ದಾರೆ. ವಿಷಯ ತಿಳಿದ ಕೂಡಲೇ ಕಳಸ ನೂತನ ತಹಸಿಲ್ದರಾದ ಕೆ ಎಸ್ ದಯಾನಂದ್. ಮತ್ತು ಉಪಾ ತಾಸಿಲ್ದಾರ್ ಎಂ ದಯಾವತಿ. ಆರ್ ಐ. ಪ್ರಕಾಶ್ ಪ್ರದೀಪ್ ಕುಮಾರ್. ಹಾಸ್ಪಿಟಲ್ ಗೆ ಬಂದು ಬೆಲ್ಲಮ್ಮನವರ ಆರೋಗ್ಯವನ್ನು ವಿಚಾರಿಸಿದ್ದಾರೆ.
Comments
Post a Comment