"ಕಳ್ಳ ಪೊಲೀಸ್ ಆಟದಲ್ಲಿ ಬೆರಗಾದ ಊರ ಜನತೆ "
ಒಂದಾದ ಮೇಲೊಂದು ಕಳ್ಳತನ ಆಗಸ್ಟ್ 24 ರ ಸಂಜೆ 7ರಿಂದ 8ಘಂಟೆ ಸುಮಾರಿಗೆ ಕೊಪ್ಪ ತಾಲ್ಲೂಕು ಹರಿಹರಪುರ ಠಾಣಾ ವ್ಯಾಪ್ತಿಯ ನಿಲುವಾಗಿಲುವಿನಲ್ಲಿ ಸತೀಶ್ ಕಲ್ಮಕ್ಕಿ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ಸಂಧರ್ಭ ದಲ್ಲಿ ಮತ್ತೊಂದು ಕಳ್ಳತನ ವಾಗಿದ್ದು ಪೊಲೀಸ್ ಇಲಾಖೆ ಕಣ್ಣು ಮುಚ್ಚಿ ಕುಳಿತಿದ್ದು ಸಾರ್ವಜನಿಕರಿಗೆ ರಕ್ಷಣಾ ಇಲಾಖೆ ಇದ್ದೂ ಇಲ್ಲದ ಪರಿಸ್ಥಿತಿ ಉಂಟಾಗಿದೆ.ಮನೆಯಲ್ಲಿ ಇಟ್ಟಿದ್ದ ಸುಮಾರು 50ಸಾವಿರ ನಗದು ಹಾಗೂ 1 ಚಿನ್ನದ ಬ್ರಾಸ್ ಲೆಟ್ ಕಳ್ಳತನ ವಾಗಿದೆ.ಕಳೆದ 3ತಿಂಗಳಿನಿಂದ ಸುತ್ತ ಮುತ್ತಲಿನ ಗ್ರಾಮಗಳಾದ ಖಳನಾಯಕಿನಕಟ್ಟೆ,ಹರಿಹರಪುರ,ಮತ್ವಾನಿ,ದೇವರಮನೆ,ಅಂಬಲಿಕೆ,ಹರಿಹರಪುರ,ನಿಲುವಾಗಿಲು,ಕೊಪ್ಪ ತಾಲ್ಲೂಕಿನ ಹಾಗೂ ಶೃಂಗೇರಿ ತಾಲ್ಲೂಕಿನ ಹಲವು ಭಾಗಗಳಲ್ಲಿ ನಿರಂತರ ಕಳ್ಳತನ ಹೆಚ್ಚಾಗಿದ್ದು ಕಳ್ಳಾ ಪೊಲೀಸ್ ಆಟ ವಾಗಿಬಿಟ್ಟಿದೆ ಇನ್ನೂ ಎಚ್ಚತ್ತು ಕೊಳ್ಳದ ಪೊಲೀಸ್ ಇಲಾಖೆ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು,ಇದರಿಂದ ಬೆಚ್ಚು ಬಿದ್ದ ಗ್ರಾಮಸ್ಥರು ದಿಕ್ಕು ತೋಚದೆ ಬೆಪ್ಪಾಗಿದ್ದಾರೆ ಈಗಲಾದರೂ ರಕ್ಷಣಾ ಇಲಾಖೆ ಕಳ್ಳರನ್ನು ಭಂದಿಸುವಲ್ಲಿ ಯಶಸ್ವಿ ಯಾಗುತ್ತರಾ ಎಂದು ಕಾದು ನೋಡಬೇಕಾಗಿದೆ.
Comments
Post a Comment