" ಶೃಂಗೇರಿಯಲ್ಲಿ ಭೀಕರ ಅಪಘಾತ "

            " ಶೃಂಗೇರಿ ಯಲ್ಲಿ ಭೀಕರ ಅಪಘಾತ"
 ಶೃಂಗೇರಿ: ನವಂಬರ್ 20
          ಶೃಂಗೇರಿಯ ಉಳುವೆಯಲ್ಲಿ ಮಂಗಳವಾರ ರಾತ್ರಿ 12:00 ಘಂಟೆ ಸುಮಾರಿಗೆ ಶಿವಮೊಗ್ಗಕ್ಕೆ ತೆರಳಿದ್ದ ಸೂಪರ್ ಕ್ಯಾರಿ ಗೂಡ್ಸ್ ವಾಹನವು ಹಿಂತಿರುಗಿ ಬರುವಾಗ ಉಳುವೆ ಸಮೀಪ ಚಾಲಕನ ಆಯತಪ್ಪಿ ರಾತ್ರಿ ಸಮಯದಲ್ಲಿ ರಸ್ತೆ ಬದಿಯಲ್ಲಿ ನಿರ್ಮಿಸಿರುವ ತಡೆ ಗೋಡೆಗೆ ರಭಸವಾಗಿ ಗುದ್ದಿರುವ ಪರಿಣಾಮವಾಗಿ ವಾಹನವು ನಜ್ಜುಗುಜ್ಜಾಗಿದೆ ವಾಹನದಲ್ಲಿ ವಾಹನ ಚಾಲಕರಾದ ವಾಹನದ ಮಾಲೀಕರು ರಾಘವೇಂದ್ರ ಆಚಾರಿ ಹಾಗೂ ಅವರ ಸ್ನೇಹಿತ ರಾಘವೇಂದ್ರ ಆಚಾರಿ ಇಬ್ಬರೂ ಕೂಡ ಶೃಂಗೇರಿಗೆ ಬರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

 ವಾಹನಕ್ಕೆ ತೀವ್ರ ಪ್ರಮಾಣದಲ್ಲಿ ಹಾನಿಯಾಗಿದ್ದು ವಾಹನದಲ್ಲಿದ್ದ ಇಬ್ಬರು ಸವಾರರಿಗೆ ಯಾವುದೇ ತರದಲ್ಲಿ ಪ್ರಾಣಹಾನಿಯಾಗಿಲ್ಲ ಅಂದರೆ ಪ್ರಾಣಪಾಯದಿಂದ ಪಾರಾಗಿದ್ದಾರೆ ವಾಹನ ಚಾಲಕ ರಾಘವೇಂದ್ರ(ಮಾಲೀಕ ) ಇವರ ಸ್ನೇಹಿತ ರಾಘವೇಂದ್ರರನ್ನು ಉಡುಪಿ ಆದರ್ಶ ಆಸ್ಪತ್ರೆ ಗೆ ರವಾನಿಸಲಾಗಿದೆ, ಎಂದು ವಾಹನ ಚಾಲಕ ರಾಘವೇಂದ್ರ(ಮಾಲೀಕ)ರವರು ಕರ್ನಾಟಕ ಸಿಟಿಝನ್ ನ್ಯೂಸ್ ಮಾಧ್ಯಮಕ್ಕೆ ಮಾಹಿತಿಯನ್ನು ನೀಡಿದ್ದಾರೆ.
    ಈ ವಾಹನವು ಶೃಂಗೇರಿ ಯ ಕೆರೆದಂಡೆಯಲ್ಲಿರುವ ಸೂರ್ಯ ಹಾರ್ಡ್ವೇರ್ ಅವರದ್ದಾಗಿರುತ್ತದೆ.

      

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "