ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!
ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : ನಾಲ್ವರ ಸಾವು..!
ತೀರ್ಥಹಳ್ಳಿ : ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆ ವಾಸಿಯ ( ತೆಕ್ಕೂರು ಸರ್ಕಲ್ ಸಮೀಪ ಕೆಳ ಮೆಣಸೆ ) ಮುಸ್ಲಿಂ ಕುಟುಂಬ ಶಿವಮೊಗ್ಗದಿಂದ ಶೃಂಗೇರಿ ಕಡೆಗೆ ಬರುತ್ತಿದ್ದ ಶಿಫ್ಟ್ ಡಿಸೈರ್( KA-14 B 7849 )ಎಲ್ಲೊ ಬೋರ್ಡ್ ಸಂಖ್ಯೆಯ ಕಾರಿನಲ್ಲಿ ಹಿಂದಿರುಗಿ ಬರುತ್ತಿದ್ದ ಕೆ.ಎಸ್.ಆರ್ಟಿಸಿ. ಬಸ್ ಗೆ ಡಿಕ್ಕಿ ಯಾದ ಪರಿಣಾಮ ಕಾರಿನಲ್ಲಿದ್ದ ಒಬ್ಬರು ವೃದ್ಧ ಮಹಿಳೆ ಹಾಗೂ ಓರ್ವ ಬಾಲಕ (10ನೇ ತರಗತಿ )ಸ್ಥಳದಲ್ಲಿಯೇ ಮೃತಪಟ್ಟಿದ್ದು ಉಳಿದವರನ್ನು ಶಿವಮೊಗ್ಗ N,A,H ಆಸ್ಪತ್ರೆಗೆ ರವಾನಿಸಲಾಗಿತ್ತು.
ಮಕ್ಕಳಲ್ಲಿ ಮೂವರು 3ನೇ ತರಗತಿ,8ನೇ ತರಗತಿ ಹಾಗೂ 9ನೇತರಗತಿ ಓದುತ್ತಿದ್ದ ಮಕ್ಕಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು ಒಟ್ಟು ಮಹಿಳೆ ಸೇರಿ 4 ಜನರ ದಾರುಣ ಸಾವು ಸಂಭವಿಸಿದೆ.
ಮೃತರಲ್ಲಿ
ಮೃತರಲ್ಲಿ
ಮೊಹಮ್ಮದ್ ರಿಹಾನ್(14)
ಮೊಹಮ್ಮದ್ ರಾಹಿಲ್(9)
ಮೊಹಮ್ಮದ್ ಝಯಾನ್ (15)
ಅಜ್ಜಿ ಫಾತಿಮಾ(76) ಎಂಬ ನಾಲ್ವರ ಹೆಸರು ಲಭ್ಯವಾಗಿದ್ದು ದಾವಣಗೆರೆ ಸಮೀಪ ಚನ್ನಗಿರಿ ಮದುವೆ ಕಾರ್ಯಕ್ರಮಕ್ಕೆಂದು ಹೋಗಿ ಶಿವಮೊಗ್ಗ ಮಾರ್ಗದಲ್ಲಿ ಹಿಂತಿರುಗುವಾಗ ತೀರ್ಥಹಳ್ಳಿಯ ಭಾರತೀಪುರ ಸಮೀಪದಲ್ಲಿ ದುರ್ಘಟನೆ ಸಂಭವಿಸಿದೆ ಎಂದು ಮೂಲಗಳಿಂದ ವರದಿಯಾಗಿದೆ .
ಈ ದುರ್ಘಟನೆಯು ನಿನ್ನೆ ರಾತ್ರಿ ಸುಮಾರು 10 ಗಂಟೆ ಗೆ ಅಪಘಾತ ಸಂಭವಿಸಿದ್ದು ಸ್ಥಳದಲ್ಲಿ ಇಬ್ಬರು ಮೃತಪಟ್ಟಿದ್ದು ಒಟ್ಟು ಮೃತರ ಸಂಖ್ಯೆ 4ಕ್ಕೆ ಏರಿದೆ.
ಪ್ರಯಾಣಿಸುತ್ತಿದ್ದ ಕಾರು ಕಿಗ್ಗಾದ ಕೆಲ್ಲಾರು ಮೂಲದ ರಿಯಾಜ್ ಎಂಬುವರಿಗೆ ಸೇರಿದ್ದು ಎನ್ನಲಾಗಿದೆ. ಮೆಣಸೆ ರಜಾಕ್ ಸಾಹೇಬ್ ಅವರ ಪತ್ನಿ ಫಾತಿಮಾ ಬಿ(70) ಇವರ ಇಬ್ಬರು ಗಂಡು ಮಕ್ಕಳಾದ ಜಾವೀದ್ ರವರ ಇಬ್ಬರು ಗಂಡು ಮಕ್ಕಳು ಹಾಗೂ ನಾಸಿರ್ ಅವರ ಓರ್ವ ಕಿರಿಯ ಮಗ ಸಾವಿಗೀಡಾಗಿರುತ್ತಾರೆ.
BREKING NEWS
" ಇದೀಗ ಬಂದಿರುವ ಸುದ್ದಿಯ ಪ್ರಕಾರ ಇನ್ನೂರ್ವ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ."
Comments
Post a Comment