"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "
ಹರಿಹರಪುರ :ಡಿ.23/2025 (ಕ.ಸಿ.ನ್ಯೂಸ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕು ಹರಿಹರಪುರ, ಅಸಗೋಡು(ದಾಸನಕೊಡಿಗೆ) ಎಂಬಲ್ಲಿ ನರಸಿಂಹಾಚಾರಿ ಎಂಬುವರ ಪುತ್ರಿ ದಿಶಾ ಯಾನಿ ನವ್ಯತಾ (17) ವರ್ಷ ವಯಸ್ಸಿನ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುಮಾರು 12:30pm ರ ಸುಮಾರಿಗೆ ನಡೆದಿದೆ.
                    ಅಸಗೋಡು ನರಸಿಂಹಾಚಾರಿ ಎಂಬುವವರು ಇಬ್ಬರು ಪುತ್ರಿಯರನ್ನು ಹೊಂದಿದ್ದು ದಿಶಾ ಯಾನಿ ನವ್ಯತಾ ಹಿರಿಯ ಮಗಳಾಗಿದ್ದು ಈಕೆ ಹರಿಹರಪುರದ ಎ.ಆರ್.ಎಸ್.ಪಿ.ಯು. ಕಾಲೇಜಿನ ವಿದ್ಯಾರ್ಥಿನಿಯಾಗಿ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ. ಹಾಗೂ ಉತ್ತಮ ಕ್ರೀಡಾಪಟು ಆಗಿದ್ದಳು ಎಂದು ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ.
 ನರಸಿಂಹಾಚಾರ್ಯರ ಎರಡನೇ ಪುತ್ರಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎನ್ನಲಾಗಿದೆ.

 ಘಟನೆ ವಿವರ :
 ದಿನಾಂಕ 23 ಮಂಗಳವಾರ ಕಾಲೇಜಿಗೆ ಜ್ವರ ಇರುವ ಕಾರಣ ದಿಶಾ/ ನವ್ಯತಾ ರಜೆಯನ್ನು ಹಾಕಿದ್ದು ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ತಾಯಿ ಮನೆಯ ಹೊರಭಾಗದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಧ್ಯಾಹ್ನ 12:30ರ ಸುಮಾರಿಗೆ ನೇಣಿಗೆ ಶರಣಾಗಿದ್ದಾಳೆ. ಡೆತ್ ನೋಟ್ ನಲ್ಲಿ "ಮಿಸ್ ಯು ಅಪ್ಪ ಅಮ್ಮ " ಎಂದು ಬರೆಯಲಾಗಿತ್ತು. ಎಂದು ಹೇಳಲಾಗಿದೆ.

 ಈ ವಿಚಾರವಾಗಿ ಮೃತಳ ತಂದೆ ಹರಿಹರಪುರ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದು. ಸಾವಿಗೆ ನಿಖರವಾದ ಕಾರಣ ಇನ್ನು ತಿಳಿದು ಬಂದಿಲ್ಲ. ಈ ಸಂಬಂಧ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸ್ ತನಿಕೆಯಿಂದ ತಿಳಿಯಬೇಕಾಗಿದೆ.

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

" ಶೃಂಗೇರಿಯಲ್ಲಿ ಭೀಕರ ಅಪಘಾತ "