ಒಂದು ಸಿಗರೇಟ್‌ ಪುರುಷರಲ್ಲಿ 17 ನಿಮಿಷ, ಮಹಿಳೆಯರಲ್ಲಿ 22 ನಿಮಿಷ ಆಯಸ್ಸು ಕಡಿಮೆ ಮಾಡುತ್ತೆ!

ಒಂದು ಸಿಗರೇಟ್‌ ಪುರುಷರಲ್ಲಿ 17 ನಿಮಿಷ, ಮಹಿಳೆಯರಲ್ಲಿ 22 ನಿಮಿಷ ಆಯಸ್ಸು ಕಡಿಮೆ ಮಾಡುತ್ತೆ,,,,,,,!!!!!!!!!"
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಅಂತ ಗೊತ್ತಿದ್ರೂ, ಸಿಗರೇಟ್ ಪ್ಯಾಕ್ ಮೇಲೆ 'ಸ್ಮೋಕಿಂಗ್ ಕಿಲ್ಸ್' ಅಂತ ಬರೆದಿದ್ರೂ ಜನ ಸಿಗರೇಟ್ ಸೇದ್ತಾರೆ. ಸ್ಟೈಲ್ ಗೋಸ್ಕರ ಶುರು ಮಾಡಿ, ವ್ಯಸನಿಗಳಾಗ್ತಾರೆ. ಹೊಸ ಅಧ್ಯಯನದ ಪ್ರಕಾರ, ಧೂಮಪಾನದಿಂದ ಆಯಸ್ಸು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗುತ್ತದೆಯಂತೆ.
ಪುರುಷರು ಒಂದು ಸಿಗರೇಟ್ ಸೇದ್ರೆ 17 ನಿಮಿಷ, ಮಹಿಳೆಯರು 22 ನಿಮಿಷ ಆಯಸ್ಸು ಕಡಿಮೆಯಾಗುತ್ತೆ ಅಂತ ಹೊಸ ಅಧ್ಯಯನ ಹೇಳುತ್ತೆ. ಯೂನಿವರ್ಸಿಟಿ ಕಾಲೇಜ್ ಲಂಡನ್ ನ ಹೆಲ್ತ್ ಅಂಡ್ ಸೋಶಿಯಲ್ ಕೇರ್ ವಿಭಾಗ ಈ ಮಾಹಿತಿ ನೀಡಿದೆ.
 ಧೂಮಪಾನಿಗಳು ತಮ್ಮ ಜೀವಿತಾವಧಿಯಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಕಳೆದುಕೊಳ್ಳುತ್ತಾರೆ. ಒಂದು ಸಿಗರೇಟ್ 20 ನಿಮಿಷ ಆಯಸ್ಸು ಕಡಿಮೆ ಮಾಡುತ್ತೆ. 20 ಸಿಗರೇಟ್ ಇರುವ ಪ್ಯಾಕೆಟ್ 7 ಗಂಟೆ ಆಯಸ್ಸು ಕಡಿಮೆ ಮಾಡುತ್ತದೆ ಎಂದು ಹೇಳಬಹುದು 
ಡಾ. ಸಾರಾ ಜಾಕ್ಸನ್ ಹೇಳುವ ಪ್ರಕಾರ, ಧೂಮಪಾನಿಗಳು ಸುಮಾರು ಒಂದು ದಶಕದಷ್ಟು ಜೀವಿತಾವಧಿ ಕಳೆದುಕೊಳ್ಳುತ್ತಾರೆ. ಬೇಗ ಧೂಮಪಾನ ಬಿಟ್ಟಷ್ಟು ಆರೋಗ್ಯವಾಗಿ, ಹೆಚ್ಚು ಕಾಲ ಬದುಕಬಹುದು.
ಹೊಸ ವರ್ಷದ ದಿನ ಧೂಮಪಾನ ಬಿಟ್ಟರೆ ಫೆಬ್ರವರಿ 20 ರ ವೇಳೆಗೆ ಒಂದು ವಾರದಷ್ಟು ಆಯಸ್ಸು ಹೆಚ್ಚಿಸಿಕೊಳ್ಳಬಹುದು. ವರ್ಷದ ಅಂತ್ಯದ ವೇಳೆಗೆ 50 ದಿನಗಳ ಆಯಸ್ಸು ಉಳಿಸಿಕೊಳ್ಳಬಹುದು. ಧೂಮಪಾನಿಗಳಲ್ಲಿ ಹೃದ್ರೋಗ, ಪಾರ್ಶ್ವವಾಯು ಅಪಾಯ ಹೆಚ್ಚು.

         ಧೂಮಪಾನ ಹಾಗೂ ಮದ್ಯಪಾನದಿಂದ ದೂರವಿರಿ. ಇದನ್ನು ಹಣ ಕೊಟ್ಟು ಕೊಂಡುಕೊಳ್ಳುವಷ್ಟು ಸುಲಭದಲ್ಲಿ ಅದೇ ಹಣದಿಂದ ಆರೋಗ್ಯ ಹಾಗೂ ನೆಮ್ಮದಿಯನ್ನ ಹಿಂಪಡೆಯಲಾರೆವು.
    ..... ನಾಡಿನ ಸಮಸ್ತ ಜನತೆಗೆ ಮುಂಬರುವ ಹೊಸ ವರ್ಷ ನಿಮ್ಮೆಲ್ಲರಿಗೂ ದೇವರು ಆಯಸ್ಸು,ಆರೋಗ್ಯ, ಐಶ್ವರ್ಯ,ಹಾಗೂ ಮುಂಬರುವ ದಿನಗಳಲ್ಲಿ ಸುಖ ಶಾಂತಿ ನೆಮ್ಮದಿ ನೀಡಲಿ ಎಂದು ಹಾರೈಸುವ. ನಿಮ್ಮ ಅಚ್ಚುಮೆಚ್ಚಿನ ,,,,,,,,,,,,,,,,,,,,,,,,,,,,,,,,,,,,,. ಕ್ಷಣ ಕ್ಷಣದ ಸುದ್ದಿಗಳಿಗಾಗಿ ನೋಡ್ತಾಯಿರಿ ಕರ್ನಾಟಕ ಸಿಟಿಝನ್ ನ್ಯೂಸ್ ಸದಾ ನಿಮ್ಮ ಜೊತೆ.

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "

" ಶೃಂಗೇರಿಯಲ್ಲಿ ಭೀಕರ ಅಪಘಾತ "