ಹೈದರಾಬಾದ್‌ನಿಂದ ಹೊಸನಗರಕ್ಕೆ ವಾಪಸ್‌ ಬಂದ ಮನೆಯ ಮಾಲೀಕರಿಗೆ ಎದುರಾಗಿತ್ತು ಶಾಕ್

ಹೈದರಾಬಾದ್‌ನಿಂದ ಹೊಸನಗರಕ್ಕೆ ವಾಪಸ್‌ ಬಂದ ಮನೆಯ ಮಾಲೀಕರಿಗೆ ಎದುರಾಗಿತ್ತು ಶಾಕ್
      ಹೊಸನಗರ    ಶುಭಕಾರ್ಯದಲ್ಲಿ ಪಾಲ್ಗೊಳ್ಳುವ ಸಲುವಾಗಿ ಹೈದರಾಬಾದ್‌ಗೆ ಹೋಗಿ ವಾಪಸ್‌ ಬಂದ ಹೊಸನಗರದ ಗೋರಗೋಡು ಗ್ರಾಮದ ನಿವಾಸಿಯೊಬ್ಬರಿಗೆ ಆಘಾತವೊಂದು ಎದುರಾಗಿತ್ತು. ಏಕೆಂದರೆ ಅವರ ಮನೆಯ ಹೆಂಚು ತೆಗೆದು ಬರೋಬ್ಬರಿ 9 ಲಕ್ಷ ರೂಪಾಯಿ ಮೌಲ್ಯದ ಒಡವೆ ಕಳ್ಳತನ ಮಾಡಲಾಗಿದೆ. 

          ಸ್ಥಳೀಯ ವರದಿ ಪ್ರಕಾರ, ಮನೆಯಲ್ಲಿ ಯಾರೂ ಇಲ್ಲದ್ದನ್ನು ಹೊಂಚು ಹಾಕಿರುವ ಕಳ್ಳರು ಪ್ರತಿಭಾ ಕೃಷ್ಟೋಜಿರಾವ್ ಎಂಬುವರ ಮನೆಯಲ್ಲಿ ಡಿಸೆಂಬರ್‌ 25 ರಂದು ಕಳ್ಳತನ ಮಾಡಿದ್ದಾರೆ. ಈ ವೇಳೆ ಮನೆಯವರು ಹೈದರಾಬಾದ್‌ಗೆ ತೆರಳಿದ್ದರು. ಮನೆಯ ಹೆಂಚುಗಳನ್ನು ತೆಗೆದು ಒಳನುಗ್ಗಿರುವ ಕಳ್ಳರು ಗೋದ್ರೇಜ್ ಬೀರುವಿನಲ್ಲಿಟ್ಟಿದ್ದ ಬಳೆ, ಸರ, ಓಲೆ ಸೇರಿದಂತೆ ಚಿನ್ನದ ಆಭರಣಗಳನ್ನು ಕಳವು ಮಾಡಿದ್ದಾರೆ.

ಹೈದರಬಾದ್‌ನಿಂದ ವಾಪಸ್‌ ಬಂದ ಬಳಿಕ ನಡೆದ ಘಟನೆ ಬೆಳಕಿಗೆ ಬಂದಿದ್ದು ಈ ಸಂಬಂಧ ಹೊಸನಗರ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.
.
.
.
.         ಕ್ಷಣದ ಸುದ್ದಿಗಳಿಗಾಗಿ ನೋಡ್ತಾಯಿರಿ ಕರ್ನಾಟಕ ಸಿಟಿಝನ್ ನ್ಯೂಸ್ ಸದಾ ನಿಮ್ಮ ಜೊತೆ 

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "

" ಶೃಂಗೇರಿಯಲ್ಲಿ ಭೀಕರ ಅಪಘಾತ "