ಭದ್ರಾ ನದಿಯಲ್ಲಿ ಮೀನು ಹಿಡಿಯಲು ಹೋಗಿ ಯುವಕ ಸಾವು..!

ಭದ್ರಾ ನದಿಯಲ್ಲಿ ಮೀನು ಹಿಡಿಯಲು ಹೋಗಿ ಯುವಕ ಸಾವು..!
ಎನ್ ಆರ್ ಪುರ: ತಾಲ್ಲೂಕಿನ ಗಡಿಗೇಶ್ವರ ಬಳಿ ಭದ್ರಾ ನದಿಯಲ್ಲಿ ಜಲಾಲ್(19)ಎಂಬ ಯುವಕ ಮೀನು ಹಿಡಿಯಲು ಹೋಗಿ ಭಾನುವಾರ ಸಂಜೆ ಮೃತಪಟ್ಟಿದ್ದಾನೆ. 

ಬಾಳೆಹೊನ್ನೂರಿನ ಭದ್ರಾ ನದಿಗೆ ನಿನ್ನೆ ಸಂಜೆ ಮೂವರು ಸ್ನೇಹಿತರು ಈಜಲು ತೆರಳಿದ್ದರು. ಈ ವೇಳೆ ಜಲಾಲ್ ನದಿಯ ಸುಳಿಗೆ ಸಿಲುಕಿದ್ದು ಸ್ನೇಹಿತರು ಆತನನ್ನು ರಕ್ಷಿಸಲು ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ.
ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಶವಕ್ಕಾಗಿ ತೀವ್ರ ಶೋಧ ನಡೆಸಿದ್ದರೂ ಸಂಜೆವರೆಗೂ ಶವ ಪತ್ತೆಯಾಗದೆ ಹುಡುಕಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು. ಇಂದು ಮುಳುಗು ತಜ್ಞರು ಮತ್ತು ಅಗ್ನಿಶಾಮಕ ದಳದಿಂದ ಶೋಧ ಕಾರ್ಯಾಚರಣೆ ಪುನರಾರಂಭಗೊಂಡಿದೆ.

ಈ ಘಟನೆಯು ಭದ್ರಾ ನದಿಗೆ ಮೀನು ಹಿಡಿಯಲು ಹೋಗಿದಾಗ ಈ ಘಟನೆ ಸಂಭವಿಸಿದೆ. ಇನ್ನೂ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ ಈ ಘಟನೆ ಸಂಬಂಧ ಎನ್ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉತ್ತಮ ಸಮಾಜಕ್ಕೆ ಅತ್ಯುತ್ತಮ ಮಾಧ್ಯಮವಾಗಿ ಬಿಂಬಿಸಲು ತಾವೆಲ್ಲರೂ ನಿಮ್ಮ ಮಲೆನಾಡ "ಕರ್ನಾಟಕ ಸಿಟಿಝನ್ ನ್ಯೂಸ್" ಯೂಟ್ಯೂಬ್ ಚಾನಲನ್ನು ಸಬ್ಸ್ಕ್ರೈಬ್ ಮಾಡುವುದರ ಮೂಲಕ ಬೆಂಬಲಿಸಿ.

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "

" ಶೃಂಗೇರಿಯಲ್ಲಿ ಭೀಕರ ಅಪಘಾತ "