"ಉರುಳಿಗೆ ಸಿಲುಕಿದ್ದ ಚಿರತೆ ನರಳಿ ನರಳಿ ಸಾವು"
"ಉರುಳಿಗೆ ಸಿಲುಕಿದ್ದ ಚಿರತೆ ನರಳಿ ನರಳಿ ಸಾವು"
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಾಳೂರು ಸಮೀಪದ ಕಾಫಿ ತೋಟದಲ್ಲಿ ಚಿರತೆಯೊಂದು ಬೇಟೆಗಾರರು ಹಾಕಿದ ಉರುಳಿಗೆ ಸಿಲುಕಿ ನರಳಾಡಿ ನರಳಾಡಿ ಮೃತಪಟ್ಟಿದೆ. ಕಾಡುಹಂದಿ ಬೇಟೆಗೆ ಬೇಟೆಗಾರರು ಹಾಕಿದ್ದ ಉರುಳಿಗೆ ನಿನ್ನೆ ರಾತ್ರಿಯೇ ಚಿರತೆ ಸಿಲುಕಿದೆ. ಇಂದು ಬೆಳಿಗ್ಗೆ ಗಮನಿಸಿದ ಸ್ಥಳೀಯರು, ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಚಿರತೆ ರಕ್ಷಣೆಗೆ ಪ್ರಯತ್ನಿಸಿದರು. ಶಿವಮೊಗ್ಗದಿಂದ ಅರಿವಳಿಕೆ ತಜ್ಞರನ್ನು ಕರೆಸಿ ರಕ್ಷಣೆ ಮಾಡಲು ಮುಂದಾದರು. ಅಷ್ಟರಲ್ಲಿ ಚಿರತೆ ಉಸಿರಾಟ ನಿಲ್ಲಿಸಿದೆ ಉರುಳು ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ಸೊಂಟಕ್ಕೆ ಇಳಿದಿದ್ದ ಉರುಳು ಮತ್ತಷ್ಟು ಬಿಗಿಯಾಗಿ ಚಿರತೆ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಫಿ ತೋಟದ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿ ಮರಣೋತ್ತರ ಪರೀಕ್ಷೆ ಬಳಿಕ ತನಿಖೆ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ...
ಉತ್ತಮ ಸಮಾಜಕ್ಕೆ ಅತ್ಯುತ್ತಮ ಮಾಧ್ಯಮವಾಗಿ ಬಿಂಬಿಸಲು ತಾವೆಲ್ಲರೂ ನಿಮ್ಮ ಮಲೆನಾಡ "ಕರ್ನಾಟಕ ಸಿಟಿಝನ್ ನ್ಯೂಸ್" ಯೂಟ್ಯೂಬ್ ಚಾನಲನ್ನು ಸಬ್ಸ್ಕ್ರೈಬ್ ಮಾಡುವುದರ ಮೂಲಕ ಬೆಂಬಲಿಸಿ.
Comments
Post a Comment