" ಭೀಕರ ರಸ್ತೆ ಅಪಘಾತ : ಮಹಿಳೆ ಸ್ಥಳದಲ್ಲೇ ಸಾವು ..!"
" ಭೀಕರ ರಸ್ತೆ ಅಪಘಾತ : ಮಹಿಳೆ ಸ್ಥಳದಲ್ಲೇ ಸಾವು ..!"
ತೀರ್ಥಹಳ್ಳಿ: ( ಕರ್ನಾಟಕ ಸಿಟಿಝನ್ ನ್ಯೂಸ್ ವರದಿ ) ಕಾರಿನ ಓವರ್ ಟೇಕ್ ರಭಸಕ್ಕೆ ಮಹಿಳೆಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಂಕದ ಹೊಳೆಯಲ್ಲಿ ಫೆ. 19ರಂದು (ಇಂದು) ಸಂಭವಿಸಿದೆ, ಮೃತಪಟ್ಟ ಮಹಿಳೆ ಮಮತಾ (40) ದುರ್ದೈವಿ.
ತೀರ್ಥಹಳ್ಳಿಯ "ಸ್ಟಾರ್ ಟೈಲರ್" ಮಾಲೀಕರಾದ ಗಂಗಾಧರ್ ಆಚಾರ್ ಇವರ ಧರ್ಮಪತ್ನಿ ಮಮತಾ ಆವರು ಮಧ್ಯಾಹ್ನ ಸ್ಕೂಟಿಯಲ್ಲಿ ಬರುತ್ತಿದ್ದ ವೇಳೆ ಕಾರೊಂದು ಓವರ್ ಟೇಕ್ ಮಾಡಿದ, ಸಂದರ್ಭ ಎದುರಿನಿಂದ ಬರುತ್ತಿದ್ದ ಮಹಿಳೆಗೆ ಸ್ಕೂಟರ್ ಢಿಕ್ಕಿ ಹೊಡೆದಿರುವ ದುರ್ಘಟನೆ ನಡೆದಿದೆ.
ಕಾರಿನ ನಡುವೆ ಅಪಘಾತ ನಡೆದು ಯುವತಿಯ ಮೈ ಮೇಲೆ ಕಾರಿನ ಟೈಯರ್ ಹರಿದ ಪರಿಣಾಮವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತ ಯವತಿ ಹಾಗೂ ಘಟನೆಯ ಬಗ್ಗೆ ಪೋಲಿಸ್ ಮೂಲಗಳಿಂದ ಇನ್ನಷ್ಟು ತಿಳಿಯಬೇಕಾಗಿದೆ,
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಉತ್ತಮ ಸಮಾಜಕ್ಕೆ ಅತ್ಯುತ್ತಮ ಮಾಧ್ಯಮವಾಗಿ ಬಿಂಬಿಸಲು ತಾವೆಲ್ಲರೂ ನಿಮ್ಮ ಮಲೆನಾಡ "ಕರ್ನಾಟಕ ಸಿಟಿಝನ್ ನ್ಯೂಸ್" ಯೂಟ್ಯೂಬ್ ಚಾನಲನ್ನು ಸಬ್ಸ್ಕ್ರೈಬ್ ಮಾಡುವುದರ ಮೂಲಕ ಬೆಂಬಲಿಸಿ.
Comments
Post a Comment