ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಪಿಕ್ ಅಪ್ ವಾಹನ ಪೊಲೀಸ್ ವಶಕ್ಕೆ..!

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಪಿಕ್ ಅಪ್ ವಾಹನ ಪೊಲೀಸ್ ವಶಕ್ಕೆ..!
 ಶೃಂಗೇರಿ : (ಕರ್ನಾಟಕ ಸಿಟಿಝನ್ ನ್ಯೂಸ್ ವರದಿ) ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಪಿಕ್ ಅಪ್ ವಾಹನವನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದಿದೆ.

ನಿನ್ನೆ ರಾತ್ರಿ ಕಿರಕೋಡು ಸಮೀಪ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ವೇಳೆ ಶೃಂಗೇರಿ PSI ನೇತೃತ್ವದಲ್ಲಿ ದಾಳಿ ನಡೆಸಿ ಪಿಕ್‌ ಅಪ್‌ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಈ ಅಕ್ರಮ ಮರಳು ಸಾಗಾಟ ಮಾಡುವ ವಾಹನಗಳ ಮುಂಭಾಗ ಮಾತ್ರ ನಂಬರ್ ಪ್ಲೇಟ್ ಹೊಂದಿದ್ದು, ಹಿಂಭಾಗ ನಂಬರ್‌ ಪ್ಲೇಟ್‌ ಇಲ್ಲದೆ ಮರಳು ಸಾಗಾಟದ ಧಂದೆಗೆ ಇಳಿಯುತ್ತಿದ್ದಾರೆ. ಮೆಣಸೆ ಮೂಲದ ವ್ಯಕ್ತಿ ಒಬ್ಬನ KA-18 D 1900 ನೊಂದಣಿ ಸಂಖ್ಯೆಯ  ವಾಹನವಾಗಿರುತ್ತದೆ.ಅತ್ಯಂತ ವೇಗವಾಗಿ ವಾಹನವನ್ನು ಚಲಾಯಿಸುವುದರಿಂದ ಕೆಲವು ರಸ್ತೆಗಳಲ್ಲಿ ರಾತ್ರಿ ಸಮಯದ ವೇಳೆ ವಾಹನದಲ್ಲಿ ಚಲಿಸಲು ಭಯದ ವಾತಾವರಣ ಇದೆ.

ಸದ್ಯ ಪ್ರಕರಣವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಅವರ ಮುಂದಿನ ಕ್ರಮ ಏನೆಂಬುದು ತಿಳಿಯಬೇಕಿದೆ.

ಉತ್ತಮ ಸಮಾಜಕ್ಕೆ ಅತ್ಯುತ್ತಮ ಮಾಧ್ಯಮವಾಗಿ ಬಿಂಬಿಸಲು ತಾವೆಲ್ಲರೂ ನಿಮ್ಮ ಮಲೆನಾಡ  "ಕರ್ನಾಟಕ ಸಿಟಿಝನ್ ನ್ಯೂಸ್" ಯೂಟ್ಯೂಬ್ ಚಾನಲನ್ನು  ಸಬ್ಸ್ಕ್ರೈಬ್ ಮಾಡುವುದರ ಮೂಲಕ ಬೆಂಬಲಿಸಿ.

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "

" ಶೃಂಗೇರಿಯಲ್ಲಿ ಭೀಕರ ಅಪಘಾತ "