ತೆಲಂಗಾಣದ ಬಳಿಕ ರಮಝಾನ್ ತಿಂಗಳಲ್ಲಿ ಮುಸ್ಲಿಂ ಉದ್ಯೋಗಿಗಳು ಕಚೇರಿಗಳಿಂದ ಬೇಗನೇ ತೆರಳಲು ಅನುಮತಿ ನೀಡಿದ ಆಂಧ್ರಪ್ರದೇಶ ಸರಕಾರ
ತೆಲಂಗಾಣದ ಬಳಿಕ ರಮಝಾನ್ ತಿಂಗಳಲ್ಲಿ ಮುಸ್ಲಿಂ ಉದ್ಯೋಗಿಗಳು ಕಚೇರಿಗಳಿಂದ ಬೇಗನೇ ತೆರಳಲು ಅನುಮತಿ ನೀಡಿದ ಆಂಧ್ರಪ್ರದೇಶ ಸರಕಾರ
ಹೊಸದಿಲ್ಲಿ : ತೆಲಂಗಾಣದ ಬಳಿಕ ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರಪ್ರದೇಶ ಸರಕಾರ ರಮಝಾನ್ ಉಪವಾಸದ ಸಮಯದಲ್ಲಿ ಮುಸ್ಲಿಂ ಉದ್ಯೋಗಿಗಳು ಕಚೇರಿಗಳಿಂದ ಬೇಗನೆ ತೆರಳಲು ಅನುಮತಿ ನೀಡಿದೆ.
ಎಲ್ಲಾ ಮುಸ್ಲಿಂ ಸರಕಾರಿ ನೌಕರರು ಅಥವಾ ಶಿಕ್ಷಕರು ಅಥವಾ ಗುತ್ತಿಗೆ – ಹೊರಗುತ್ತಿಗೆ ನೌಕರರು, ನಿಗಮ-ಮಂಡಳಿಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುತ್ತಿರ ಮುಸ್ಲಿಂ ನೌಕರರು ಪವಿತ್ರ ರಮಝಾನ್ ತಿಂಗಳಲ್ಲಿ ಅಂದರೆ ಮಾರ್ಚ್ 2 ರಿಂದ 30ರವರೆಗೆ ಸಂಜೆ 4 ಗಂಟೆಗೆ ತಮ್ಮ ಕಚೇರಿಗಳು ಅಥವಾ ಶಾಲೆಗಳಿಂದ ಹೊರಹೋಗಲು ಸರಕಾರ ಅನುಮತಿ ನೀಡಿದೆ ಎಂದು ಆಂಧ್ರ ಸರ್ಕಾರದ ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.
ಉತ್ತಮ ಸಮಾಜಕ್ಕೆ ಅತ್ಯುತ್ತಮ ಮಾಧ್ಯಮವಾಗಿ ಬಿಂಬಿಸಲು ತಾವೆಲ್ಲರೂ ನಿಮ್ಮ ಮಲೆನಾಡ "ಕರ್ನಾಟಕ ಸಿಟಿಝನ್ ನ್ಯೂಸ್" ಯೂಟ್ಯೂಬ್ ಚಾನಲನ್ನು ಸಬ್ಸ್ಕ್ರೈಬ್ ಮಾಡುವುದರ ಮೂಲಕ ಬೆಂಬಲಿಸಿ.
Comments
Post a Comment