ಉಡುಪಿ: ಎರಡು ಬೈಕುಗಳ ಮಧ್ಯೆ ಭೀಕರ ಅಪಘಾತ: ಓರ್ವ ಸವಾರ ಸ್ಥಳದಲ್ಲಿಯೇ ಮೃತ್ಯು

ಉಡುಪಿ: ಎರಡು ಬೈಕುಗಳ ಮಧ್ಯೆ ಭೀಕರ ಅಪಘಾತ: ಓರ್ವ ಸವಾರ ಸ್ಥಳದಲ್ಲಿಯೇ ಮೃತ್ಯು
ಉಡುಪಿ: ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸರವಾರರೊಬ್ಬರು ಸ್ಥಳದಲ್ಲಿ ಮೃತಪಟ್ಟ ಘಟನೆ ಸೋಮವಾರ ತಡರಾತ್ರಿ ಅಜ್ಜರಕಾಡು ಅಗ್ನಿಶಾಮಕ ದಳ ಠಾಣೆಯ ಸಮೀಪ ನಡೆದಿದೆ.

ಮೃತರನ್ನು ಸ್ಯಾಮುಯೆಲ್‌ ಸದಾನಂದ ಕರ್ಕಡ(59) ಎಂದು ಗುರುತಿಸಲಾಗಿದೆ. ಅತಿ ವೇಗದಿಂದ ಬಂದ ಎರಡು ಬೈಕುಗಳು ಮುಖಾಮುಖಿ ಡಿಕ್ಕಿಯಾಗಿದ್ದು ಇದರ ಪರಿಣಾಮ ಸದಾನಂದ ರಸ್ತೆಗೆ ಬಿದ್ದರೆನ್ನಲಾಗಿದೆ.

ಇದರಿಂದ ಗಂಭೀರವಾಗಿ ಗಾಯಗೊಂಡು ಅವರು ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದು ಬಂದಿದೆ. ಅಪಘಾತದಿಂದ ಎರಡು ಬೈಕ್ ಗಳು ಕೂಡ ಸಂಪೂರ್ಣ ಜಖಂಗೊಂಡಿವೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉತ್ತಮ ಸಮಾಜಕ್ಕೆ ಅತ್ಯುತ್ತಮ ಮಾಧ್ಯಮವಾಗಿ ಬಿಂಬಿಸಲು ತಾವೆಲ್ಲರೂ ನಿಮ್ಮ ಮಲೆನಾಡ "ಕರ್ನಾಟಕ ಸಿಟಿಝನ್ ನ್ಯೂಸ್" ಯೂಟ್ಯೂಬ್ ಚಾನಲನ್ನು ಸಬ್ಸ್ಕ್ರೈಬ್ ಮಾಡುವುದರ ಮೂಲಕ ಬೆಂಬಲಿಸಿ.

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "

" ಶೃಂಗೇರಿಯಲ್ಲಿ ಭೀಕರ ಅಪಘಾತ "