ಬೆಂಗಳೂರಿನ ಯುವಕ-ಯುವತಿ ಚಿಕ್ಕಮಗಳೂರಿನಲ್ಲಿ ದುರ್ಮರಣ: ಸಾವಿನ ಸುತ್ತ ಅನುಮಾನದ ಹುತ್ತ!ಪ್ರೇಯಸಿಯನ್ನು ಕೊಂದು ಯುವಕ ಆತ್ಮಹತ್ಯೆ !

ಬೆಂಗಳೂರಿನ ಯುವಕ-ಯುವತಿ ಚಿಕ್ಕಮಗಳೂರಿನಲ್ಲಿ ದುರ್ಮರಣ: ಸಾವಿನ ಸುತ್ತ ಅನುಮಾನದ ಹುತ್ತ!ಪ್ರೇಯಸಿಯನ್ನು ಕೊಂದು ಯುವಕ ಆತ್ಮಹತ್ಯೆ !
ಚಿಕ್ಕಮಗಳೂರು ; ಕಾಫಿನಾಡಿನಲ್ಲಿ ಪ್ರೇಮಿಗಳ ದುರಂತ ಅಂತ್ಯವಾಗಿದ್ದು, ಪ್ರೇಯಸಿಯನ್ನು ಕೊಂದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
 ತಾಲೂಕಿನ ದಾಸರಹಳ್ಳಿ ಗ್ರಾಮದಲ್ಲಿ ಬೆಂಗಳೂರು ಮೂಲದ ಯುವಕ ಹಾಗೂ ಯುವತಿಯ ಶವಗಳು ಪತ್ತೆಯಾಗಿರುವ ಘಟನೆ ಜರುಗಿದೆ.

ಯುವಕನ ಮೃತದೇಹ ಕಾರು ನಿಂತ ಜಾಗದ ಪಕ್ಕದ ಮರದಲ್ಲಿ ಪತ್ತೆಯಾಗಿವೆ.ಇಬ್ಬರ ವಯಸ್ಸು ಅಂದಾಜು 25-30ರ ಒಳಗಿದ್ದು, ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಯುವತಿಯ ಕುತ್ತಿಗೆಯಲ್ಲಿ ಕತ್ತು ಹಿಸುಕಿರುವ ಗುರುತು ಇದೆ. ಯುವಕ ಕಾರು ನಿಂತ ಜಾಗದ ಪಕ್ಕದ ಮರಕ್ಕೆ ವೇಲ್‌ನಿಂದ ನೇಣು ಹಾಕಿಕೊಂಡಿದ್ದಾನೆ. ಯುವಕ ನೇಣು ಹಾಕಿಕೊಂಡಿರುವ ಜಾಗ ಕೂಡ ಒಂದು ರೀತಿ ಅನುಮಾನಾಸ್ಪದವಾಗಿದೆ. ವೇಲ್ ಕುಣಿಕೆಗೆ ಕೊರಳೊಡ್ಡಿ ಜಿಗಿದರೆ ವೇಲ್ ತುಂಡಾಗುವ ಸಾಧ್ಯತೆಯೂ ಇದೆ. ಆದರೆ ಯುವಕನ ಶವ ನೇತಾಡುತ್ತಿತ್ತು. ಕಾರು ಕೂಡ ರಸ್ತೆಯಲ್ಲಿ ನಿಂತಿಲ್ಲ. ರಸ್ತೆ ಬದಿಯ ಪಕ್ಕದ ಚರಂಡಿಗೆ ಎರಡು ಚಕ್ರಗಳು ಇಳಿದಿದ್ದು ಕಾರು ಚರಂಡಿಗೆ ಏಕೆ? ಹೇಗೆ ಇಳಿಯಿತು ಎಂಬ ಪ್ರಶ್ನೆ ಮೂಡಿದೆ.

ಕಾರು ಮೂಲತಃ ಬೆಂಗಳೂರು ನೋಂದಣಿಯದ್ದಾಗಿದ್ದು, ಎಲ್ಲೋ ಬೋರ್ಡ್ ಗಾಡಿಯಾಗಿದೆ. ಮೇಲ್ನೋಟಕ್ಕೆ ಮೃತ ಯುವಕ ಡ್ರೈವರ್ ಇರಬಹುದು ಎಂದು ಅಂದಾಜಿಸಲಾಗಿದ್ದು, ಮೂಲತಃ ಬೆಂಗಳೂರಿನ ಮಾಗಡಿಯವನು ಎಂದು ತಿಳಿದು ಬಂದಿದೆ.

ಉತ್ತಮ ಸಮಾಜಕ್ಕೆ ಅತ್ಯುತ್ತಮ ಮಾಧ್ಯಮವಾಗಿ ಬಿಂಬಿಸಲು ತಾವೆಲ್ಲರೂ ನಿಮ್ಮ ಮಲೆನಾಡ "ಕರ್ನಾಟಕ ಸಿಟಿಝನ್ ನ್ಯೂಸ್" ಯೂಟ್ಯೂಬ್ ಚಾನಲನ್ನು ಸಬ್ಸ್ಕ್ರೈಬ್ ಮಾಡುವುದರ ಮೂಲಕ ಬೆಂಬಲಿಸಿ.
ಚಿಕ್ಕಮಗಳೂರು ತಾಲೂಕಿನ ದಾಸರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಯುವತಿಯನ್ನು KA03AD4628 ನೋಂದಣಿಯ ಕಾರಿನಲ್ಲಿ ಕರೆದುಕೊಂಡು ಬಂದಿದ್ದ ಯುವಕ, ಯುವತಿಯನ್ನು ಕಾರಿನಲ್ಲೇ ಸಾಯಿಸಿ ನಂತರ ಕಾಫಿ ತೋಟವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಚಿಕ್ಕಮಗಳೂರಿನ ಪೂರ್ಣಿಮ, ಭದ್ರಾವತಿಯ ಮಧು ಇಬ್ಬರು ಪ್ರೇಮಿಗಳಾಗಿದ್ದು, ಚಿಕ್ಕಮಗಳೂರಿನಲ್ಲಿ ದಾರುಣ ಅಂತ್ಯ ಕಂಡಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಾರಿನಲ್ಲಿ ಯುವತಿ ಪೂರ್ಣಿಮ ಶವ ಪತ್ತೆಯಾದರೆ, ಹತ್ತಿರದ ಕಾಫಿ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ.

ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉತ್ತಮ ಸಮಾಜಕ್ಕೆ ಅತ್ಯುತ್ತಮ ಮಾಧ್ಯಮವಾಗಿ ಬಿಂಬಿಸಲು ತಾವೆಲ್ಲರೂ ನಿಮ್ಮ ಮಲೆನಾಡ  "ಕರ್ನಾಟಕ ಸಿಟಿಝನ್ ನ್ಯೂಸ್" ಯೂಟ್ಯೂಬ್ ಚಾನಲನ್ನು  ಸಬ್ಸ್ಕ್ರೈಬ್ ಮಾಡುವುದರ ಮೂಲಕ ಬೆಂಬಲಿಸಿ.

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "

" ಶೃಂಗೇರಿಯಲ್ಲಿ ಭೀಕರ ಅಪಘಾತ "