" ಕೊಪ್ಪ ಮುರಾರ್ಜಿದೇಸಾಯಿ ವಸತಿ ಶಾಲೆಯಲ್ಲಿ ಮತ್ತೊಂದು ವಿದ್ಯಾರ್ಥಿನಿ ಆತ್ಮಹತ್ಯೆ "
" ಕೊಪ್ಪ ಮುರಾರ್ಜಿದೇಸಾಯಿ ವಸತಿ ಶಾಲೆಯಲ್ಲಿ ಮತ್ತೊಂದು ವಿದ್ಯಾರ್ಥಿನಿ ಆತ್ಮಹತ್ಯೆ "
ಕೊಪ್ಪ: ಕೊಪ್ಪತಾಲ್ಲೂಕಿನ ಪಟ್ಟಣದ ಒಳಭಾಗದಲ್ಲಿರುವ ಮುರಾರ್ಜಿದೇಸಾಯಿ ಹಾಸ್ಟೆಲ್ನಲ್ಲಿ ಪದೇ ಪದೇ ಆತ್ಮಹತ್ಯೆ ಇದೀಗ ಹಲವು ಅನುಮಾನಕ್ಕೆ ಕಾರಣವಾಗಿದ್ದು, ಮಕ್ಕಳಿಗೆ ಯಾವುದೇ ರೀತಿಯ ರಕ್ಷಣೆ ಇಲ್ಲ ಎಂಬಸುದ್ಧಿ ಸಾರ್ವಜನಿಕವಾಗಿ ಕೇಳಿಬರುತ್ತಿದ್ದೂ ಅಕ್ಷರ ಶಹಅದು ನೂರಕ್ಕೂ ನೂರು ಸತ್ಯವಾಗಿದೆ.
ಅಲ್ಲದೇ ಪಟ್ಟಣದ ಯಾವುದೋ ಒಂದು ಮೂಲೆಯಲ್ಲಿ ಕೊಂಪೆಯಂತಿರುವ ಹಾಸ್ಟೆಲ್ ಅಲ್ಲಿ ಸಿಸಿಟಿವಿ ಸೇರಿ ಯಾವುದೇ ಸೌಲಭ್ಯ ಇಲ್ಲ ಎಂಬ ಆರೋಪ ಕೇಳಿ ಬಂದಿದೆ.
ಶನಿವಾರ ರಾತ್ರಿ ನೇಣು ಬಿಗಿದುಕೊಂಡು 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇದೀಗ ಭಾರೀ ಅನುಮಾನಕ್ಕೆ ಕಾರಣ ಆಗಿದೆ. ಕೊಪ್ಪ ತಾಲೂಕಿನ ಬೊಮ್ಮಲಾಪುರದ ಹೊಕ್ಕಳಿಕೆ ಮೂಲದ ವಿದ್ಯಾರ್ಥಿನಿ ಶಮಿತ( 14) ಮೃತ ವಿದ್ಯಾರ್ಥಿನಿ ಎಂದು ತಿಳಿದು ಬಂದಿದ್ದು ಶಿವಮೊಗ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸ ಲಾಗಿದೆ.
ಕೊಪ್ಪದ ಮೊರಾರ್ಜಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಚೂಡಿದಾರ್ನ ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೊಪ್ಪ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಅದರೆ ಕಾರಣ ಇನ್ನು ರಹಸ್ಯವಾಗಿದೆ.
ಕೊಪ್ಪದ ಈ ಮಕ್ಕಳ ಹಾಸ್ಟೆಲ್ ಅಲ್ಲೇ ಕಳೆದ ವರ್ಷ ಒಂದು ನಾರ್ವೆಯ ವಿದ್ಯಾರ್ಥಿನಿ ಆತ್ಮಹತ್ಯೆ ಇದೇ ಜಾಗದಲ್ಲಿ ನಡೆದಿತ್ತು. ಇದೀಗ ಮತ್ತೊಂದು ಘಟನೆ ನಡೆದಿದೆ. ಮಕ್ಕಳಿಗೆ ರಕ್ಷಣೆ ಇಲ್ವಾ ಎಂಬ ಅನುಮಾನ ಮೂಡಿದ್ದು ಸಾರ್ವಜನಿಕರಲ್ಲಿ ಹಲವು ಅನುಮಾನಗಳು ಭುಗಿಲೆದ್ದಿವೆ.
ಕೊಪ್ಪದ ಮೊರಾರ್ಜಿದೇಸಾಯಿ ವಸತಿ ಶಾಲೆಯಲ್ಲಿ 14 ವರ್ಷದ ಶಮಿತಾ ನೇಣಿಗೆ ಶರಣಾಗಿದ್ದಾಳೆ. ಆದರೆ ಕಾರಣ ಮಾತ್ರ ನಿಗೂಢವಾಗಿಯೇ ಉಳಿದಿದೆ. ಹಿಂದಿನ ವರ್ಷ ಇದೇ ಹಾಸ್ಟೆಲ್ ನಲ್ಲಿ ಇದೇ ರೀತಿ ಮತ್ತೊಬ್ಬ ವಿದ್ಯಾರ್ಥಿನಿಯೂ ನೇಣಿಗೆ ಶರಣಾಗಿದ್ದಳು. ಇಲ್ಲಿ ಪದೇ ಪದೇ ಇಂಥ ಘಟನೆ ನಡೆಯುತ್ತಿದೆ. ಆದ್ರೂ ಅಧಿಕಾರಿಗಳು ಕಿಂಚಿತ್ತೂ ಗಮನ ವಹಿಸುತ್ತಿಲ್ಲ ಎಂಬ ಆರೋಪ ಇದೀಗ ಕೇಳಿ ಬರುತ್ತಿದೆ.
ವಿದ್ಯಾರ್ಥಿನಿಯರ ವಸತಿ ಶಾಲೆ ಕೊಪ್ಪ ಪಟ್ಟಣದಿಂದ ಗುಣವಂತೆ ಹೋಗುವ ಮಾರ್ಗದಲ್ಲಿ ಸುಮಾರು 2 ಕಿಮೀ ದೂರ ಇದೆ. ಅಲ್ಲಿಯೇ ಶಾಲೆ ಹಾಗೂ ಹಾಸ್ಟೆಲ್ ಇದೆ. ಪಕ್ಕದಲ್ಲೇ ಒಂದು ಸ್ಮಶಾನ ಕೂಡ ಇದೆ.
ಇಲ್ಲಿ ವಿಶೇಷ ಎಂದರೆ ಮಕ್ಕಳು ವೇಲ್ ಅಲ್ಲಿ ಶೌಚಾಲಯದ ಗೋಡೆಗೆ ನೇಣು ಹಾಕಿಕೊಳುವಂತೆ ಕಾಮಗಾರಿ ಮಾಡಲಾಗಿದೆ. ಪ್ಲಾಸ್ಟರ್ ಕೂಡ ಮಾಡಿಲ್ಲ ಇದಕ್ಕೆ ಏನುಕಾರಣ ಎಂಬುದೇ ತಿಳಿದು ಬಂದಿಲ್ಲಾ..! ಹಿಂದೆ ನಡೆದ ಆತ್ಮಹತ್ಯೆನಂತರ ಸರಿಯಾಗಿ ಮುಂಜಾಗ್ರತೆವಹಿಸದೆ ನಿರ್ಲಕ್ಷ್ಯತೋರಲಾಗಿದೆ ಎಂದು ಆರೋಪಗಳು ಕೇಳಬಂದಿದೆ.
ಈ ಬಗ್ಗೆ ಸೂಕ್ತ ತನಿಖೆ ಕೂಡ ಮಾಡಬೇಕಿದೆ.
ಬಾಳಿ ಬದುಕಬೇಕಾಗಿದ್ದ ಮಗಳನ್ನು ಕಳೆದುಕೊಂಡ ಪೋಷಕರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಇಡೀ ಗ್ರಾಮದಲ್ಲಿ ಮೌನ ಬೇಸರ ಆವರಿಸಿದೆ. ಬೊಮ್ಮಲಾಪುರ ಸಮೀಪ ಅಸೂಡಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
2 ವರ್ಷದಲ್ಲಿ ಕೊಪ್ಪದಲ್ಲಿ 3 ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿ ಸಾವಿಗೀಡಗಿದ್ದಾರೆ.
ಹಾಸ್ಟೆಲ್‌ಗಳಲ್ಲಿ ಮೂಲಭೂತ ಸೌಕರ್ಯಗಳು ಅತೀವ ಕಡಿಮೆಯಿದೆ. ಸ್ವಚ್ಛತೆ, ಬಣ್ಣ ಎಲ್ಲವೂ ಮಾಯವಾಗಿದೆ.
ವಾರ್ಡನ್ ಕೂಡ ನೇಮಕವಾಗಿಲ್ಲ, ಶಿಕ್ಷಕರೇ ರೋಟೇಷನ್ ಪದ್ಧತಿಯಲ್ಲಿ ವಾರ್ಡನ್ ಗಳಾಗಿ ಅನೇಕ ತಿಂಗಳುಗಳಿಂದ ಕಾರ್ಯ ಮಾಡುತ್ತಿದ್ದಾರೆ ಎಂದರೆ ಯಾವ ದುಸ್ಥಿತಗೆ ಶಿಕ್ಷಣ ಇಲಾಖೆ ಕ್ಷೇತ್ರದಲ್ಲಿ ತಲುಪಿದೆ?
ಶಿಕ್ಷಣ ಇಲಾಖೆ ಮತ್ತು ಹಾಸ್ಟೆಲ್ ಆಡಳಿತವು ಕೂಡಲೇ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಎಲ್ಲಾ ಹಾಸ್ಟೆಲ್‌ಗಳಲ್ಲಿ ಸಂಪೂರ್ಣ ಶುದ್ಧತೆ, ಸುರಕ್ಷತೆ, ಆರೋಗ್ಯಕರ ಆಹಾರ ಮತ್ತು ಆಧುನಿಕ ಸೌಲಭ್ಯಗಳನ್ನು ಕಲ್ಪಿಸಬೇಕು. ಮತ್ತು ಕೂಡಲೇ ವಾರ್ಡನ್ ಅವರನ್ನು ನೇಮಕ ಮಾಡಬೇಕು.
ಮಕ್ಕಳಿಗೆ ಸಮರ್ಪಕವಾಗಿ ಮನೋವೈದ್ಯಕೀಯ ಸಮಾಲೋಚನೆ ಕೂಡ ಒದಗಿಸಬೇಕು.
ತಮ್ಮ ಮಕ್ಕಳನ್ನು ಹಾಸ್ಟೆಲ್ಗೆ ಕಳುಹಿಸಿದ ಪಾಲಕರಿಗೆ ಭರವಸೆ ನೀಡುವತ್ತ ಶಿಕ್ಷಣ ಇಲಾಖೆ ಕೆಲಸ ಮಾಡಬೇಕು ಎಂದು ಸಮಾಜ ಒತ್ತಾಯಿಸುತ್ತಿದೆ.
"ಹಾಸ್ಟೆಲ್ ಗಳಲ್ಲಿ ವಯಸ್ಸಿಗೆ ಬಂದಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಗಳ ಸಂಖ್ಯೆ ದಿನೇ ದಿನೇ ಹೆಚ್ಚು ತ್ತಿರುವ ಹಿನ್ನಲೆಯಲ್ಲಿ ಆತಂಕ ಹಾಗೂ ಕಂಗಾಲಾಗಿರುವ ಸಾರ್ವಜನಿಕರು ಹಾಗೂ ಪೋಷಕರಿಗೆ ಸೂಕ್ತ ಉತ್ತರ ನೀಡಲು ಹಾಗೂ ಸಮಾಜದ ಹಿತದೃಷ್ಟಿಯನ್ನು ಕಾಪಾಡಲು ಸಂಬಂಧಪಟ್ಟ ರಕ್ಷಣಾ ಇಲಾಖೆಯ ಅಧಿಕಾರಿಗಳು,ಶಾಸಕರು,ಹಾಗೂ ಜನಪ್ರತಿನಿಧಿಗಳು ಸರಿಯಾದ ಹಾಗೂ ಸೂಕ್ತ ಕ್ರಮಕ್ಕೆಒತ್ತಾಯಿಸಿ ಉನ್ನತ ಮಟ್ಟದ ತನಿಗೆ ಒಳಪಡಿಸಬೇಕೆಂದು ಸಾರ್ವಜನಿಕರೆಲ್ಲರ ಆಗ್ರಹ"
"ಮರುಕಳಿಸಿದ ಘಟನೆಗೆ ಎಚ್ಚರಿಕೆ ತಪ್ಪಿದ ವ್ಯವಸ್ಥೆ"
Comments
Post a Comment