" ಶೃಂಗೇರಿಯ ಹಾಗಲಗಂಚಿಯಲ್ಲಿ ದೇವನಹಳ್ಳಿ ಪ್ರತಿಭಟನಾ ರೈತರ ಬಂಧನ ಖಂಡಿಸಿ ಪ್ರತಿಭಟನೆ "

" ಶೃಂಗೇರಿಯ ಹಾಗಲಗಂಚಿಯಲ್ಲಿ ದೇವನಹಳ್ಳಿ ಪ್ರತಿಭಟನಾ ರೈತರ ಬಂಧನ ಖಂಡಿಸಿ ಪ್ರತಿಭಟನೆ "
 ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ  ಮೆಣಸೆ ಗ್ರಾಮದ ಹಾಗಲಗಂಚಿಯಲ್ಲಿ  ಮೊನ್ನೆ ನಡೆದ  ಬೆಂಗಳೂರಿನ ದೇವನಹಳ್ಳಿಯಲ್ಲಿ ರೈತರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಪ್ರತಿಭಟಿಸುತ್ತಿದ್ದ ವೇಳೆ ಸರ್ಕಾರ ಬಂದಿಸಿರುವುದನ್ನು ಖಂಡಿಸಿ, ರೈತಹೋರಾಟವನ್ನು ಬೆಂಬಲಿಸಿ ಶೃಂಗೇರಿ ತಾಲೂಕಿನ ಹಾಗಲಗಂಚಿಯಲ್ಲಿ "ಪ್ರಗತಿ ರೈತ ಬಳಗ"ದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಪ್ರತಿಭಟನೆಯಲ್ಲಿ   ವೆಂಕಟೇಶ ಹಾಗಲಗಂಚಿ ಯವರು ದೇವನಹಳ್ಳಿ ರೈತರ ಹೋರಟದ ಹಿನ್ನೆಲೆಯನ್ನು ವಿವರಿಸಿ ಮಾತನಾಡಿದರು, 
ಗುರುಮೂರ್ತಿ ಜೋಗಿಬೈಲ್ ಅವರು 
'ಇಂತಹ ಹೋರಾಟಗಳನ್ನು ನಾಡಿನ ಎಲ್ಲ ರೈತರೂ ಬೆಂಬಲಿಸಿ ಜೊತೆಗೆ ನಿಲ್ಲಬೇಕಾದ ಅಗತ್ಯದ ಕುರಿತು ವಿವರಿಸಿದರು, ಸಣ್ಣ ಹಳ್ಳಿಯಾದರೂ ಐವತ್ತಕ್ಕೂ ಹೆಚ್ಚು ರೈತರು,ಹಾಗೂ ಕೃಷಿ ಕಾರ್ಮಿಕರು ಭಾಗವಹಿಸಿದ್ದರು.

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "

" ಶೃಂಗೇರಿಯಲ್ಲಿ ಭೀಕರ ಅಪಘಾತ "