"ಹೆತ್ತ ತಾಯಿಯು 3ನೇ ಮಗುವನ್ನು ಕಾಲುವೆಗೆ ಎಸೆದು ಕೊಲೆ:ತಾಯಿ ಜೈಲು ಪಾಲು"
"ಹೆತ್ತ ತಾಯಿಯು 3ನೇ ಮಗುವನ್ನು ಕಾಲುವೆಗೆ ಎಸೆದು ಕೊಲೆ:ತಾಯಿ ಜೈಲು ಪಾಲು"
ಬಳ್ಳಾರಿ : ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ ನಲ್ಲಿ ತಾಯಿಯೊಬ್ಬಳು ಮೂರನೇ ಮಗು ಹೆಣ್ಣು ಹುಟ್ಟಿದ್ದಾಳೆ ಎಂಬ ಕಾರಣಕ್ಕೆ ಬೇಸತ್ತ ತಾಯಿ ತನ್ನ ಎರಡು ತಿಂಗಳ ಹಸುಗೂಸನ್ನು ಕಾಲುವೆಗೆ ಎಸೆದು ಕೊಲೆ ಮಾಡಿರುವ ಘಟನೆ ನಡೆದಿದೆ.
ಬಿಹಾರ ಮೂಲದ ಪ್ರಿಯಾಂಕಾ ದೇವಿ ಮತ್ತು ಸರೋಜ್ ಕುಮಾರ್ ದಂಪತಿಗಳಿಗೆ ಜನಿಸಿದ ಮಗು 3ನೇ ಹೆಣ್ಣು ಮಗು ಆಗಿತ್ತು. ಈ ಮೊದಲೇ ಜನಿಸಿದ ಮಕ್ಕಳಿಬ್ಬರು ಹೆಣ್ಣು ಮಕ್ಕಳಾಗಿದ್ದ ಕಾರಣ ಮೂರನೇ ಹೆಣ್ಣು ಮಗುವನ್ನು ಕಾಲುವೆಗೆ ಎಸೆದು ಕೊಲೆ ಮಾಡಿ ಮಗು ಕಾಣೆಯಾಗಿದೆ ಎಂದು ನಾಟಕವಾಡಿದ್ದಳು ಪೊಲೀಸರು ಸಿ ಸಿ ಟಿವಿ ಕ್ಯಾಮೆರಾವನ್ನು ಪರೀಕ್ಷಿಸಿ ಪರಿಶೀಲಿಸಿ ತನಿಖೆನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಬಳ್ಳಾರಿ ಯ ತೋರಣಗಲ್ ಪೊಲೀಸರು ಪ್ರಿಯಾಂಕ ದೇವಿಯನ್ನು ರವಿವಾರ ಜೈಲಿಗಟ್ಟಿದ್ದಾರೆ.
Comments
Post a Comment