"40ವರ್ಷ ಸತತ ಪಕ್ಷದ ಕಾರ್ಯಕರ್ತ ಸಂಕಷ್ಟಕ್ಕೆ ತಾಲೂಕು ಯೂತ್ ಕಾಂಗ್ರೆಸ್ ಉಪಾಧ್ಯಕ್ಷರಿಂದ ಆರ್ಥಿಕ ನೆರವು...!"

"40ವರ್ಷ ಸತತ ಪಕ್ಷದ ಕಾರ್ಯಕರ್ತ ಸಂಕಷ್ಟಕ್ಕೆ ತಾಲೂಕು ಯೂತ್ ಕಾಂಗ್ರೆಸ್ ಉಪಾಧ್ಯಕ್ಷರಿಂದ ಆರ್ಥಿಕ ನೆರವು...!"
ಕೊಪ್ಪ: ಸೆಪ್ಟೆಂಬರ್/22 / ಸೋಮವಾರ
ಚಿಕ್ಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಭಂಡಿಗಡಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸತತ 40 ವರ್ಷಗಳ ಕಾಲ ದುಡಿದ ಕಾರ್ಯಕರ್ತರಾದ ಬಿಎಸ್ ರವಿರಾಜ್ ಪೂಜಾರಿ, ರುದ್ರಾಕ್ಷಿ ಬೈಲು, ಭಂಡಿಗಡಿ ಇವರು ವೃತ್ತಿಯಲ್ಲಿ ಟೈಲರಿಂಗ್ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು ಇವರು ಪರಿಸ್ಥಿತಿ ಆರ್ಥಿಕವಾಗಿ ತೀವ್ರ ಹದಗೆಟ್ಟಿರುತ್ತದೆ.

   ದುರದೃಷ್ಟವಶಾತ್ ಬಿ ಎಸ್ ರವಿರಾಜ್ ಪೂಜಾರಿ ಅವರ ಆರೋಗ್ಯ ಪರಿಸ್ಥಿತಿಯು ತೀವ್ರವಾಗಿ ಹದಗೆಟ್ಟಿದ್ದು ಅವರಿಗೆ (Chronic kidney disease)ಆಗಿದ್ದು ಡಯಾಲಿಸಿಸ್ ಹಂತಕ್ಕೆ ಒಳಗಾಗಿರುತ್ತಾರೆ.
         ಬಿ ಎಸ್ ರವಿರಾಜ್ ಪೂಜಾರಿಯವರು ಕಾಂಗ್ರೆಸ್ ಪಕ್ಷದಲ್ಲಿ ನಿರಂತರವಾಗಿ 40 ವರ್ಷಗಳ ಕಾಲ ಹಿರಿಯ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದ ಇವರನ್ನು ಗುರುತಿಸಿ ಸಂದರ್ಭವನ್ನು ಅರಿತ ತಾಲೂಕು ಯುತ್ ಕಾಂಗ್ರೆಸ್ ಉಪಾಧ್ಯಕ್ಷರಾದ "ನಿಜಾಮ್ ಭಂಡಿಗಡಿ" ಅವರು, ತನ್ನ ಸ್ನೇಹಿತರೊಂದಿಗೆ ಬಿಎಸ್ ರವಿರಾಜ್ ಪೂಜಾರಿ ಅವರ ಮನೆಗೆ ಭೇಟಿ ನೀಡಿ, ಸಂಕಷ್ಟದಲ್ಲಿರುವ ಅವರಿಗೆ, ಆರೋಗ್ಯ ಸಮಾಚಾರವನ್ನು ವಿಚಾರಿಸಿ ಆತ್ಮಸ್ಥೈರ್ಯವನ್ನು ತುಂಬಿ ಆದಷ್ಟು ಬೇಗ ಅವರು ಗುಣಮುಖವಾಗಲಿ ಎಂದು ಶುಭ ಹಾರೈಸಿ  ಸ್ವತಃ ತನ್ನ ಕೈ ಯಿಂದ 5,000 ರೂಗಳ ಚೆಕ್ಕನ್ನು ಆರ್ಥಿಕ ಸಹಾಯಾರ್ಥವಾಗಿ ನೀಡಿ ವಂದಿಸಿರುತ್ತಾರೆ.

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "

" ಶೃಂಗೇರಿಯಲ್ಲಿ ಭೀಕರ ಅಪಘಾತ "