"ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ : ಶೃಂಗೇರಿ"
"ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ : ಶೃಂಗೇರಿ"
ಶೃಂಗೇರಿ : ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಪಟ್ಟಣದ ಸಂಕ್ಲಾಪುರ ನಿವಾಸಿ ಫಲಹ್(26) ಎಂಬ ಹದಿಹರೆಯ ಯುವಕ ನೆನ್ನೆ ರಾತ್ರಿ ಸಮಯದಲ್ಲಿ ನೇಣಿಗೆ ಶರಣಾದ ಘಟನೆ ನಡೆದಿದೆ.
ಈತ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ಬಡತನದಲ್ಲಿ ಜೀವನವನ್ನು ಸಾಗಿಸುತ್ತಿದ್ದ ಈತ ಶಾಮಿಯಾನ ಸೌಂಡ್ ಸಿಸ್ಟಮ್ ನ ಕೆಲಸ ಮಾಡಿಕೊಂಡು ತಾಯಿ ಹಾಗೂ ಅಜ್ಜಿಗೆ ಆಸರೆಯಾಗಿದ್ದ.
ಸೌಂಡ್ಸ್ ಕೆಲಸ ಮಾಡಿಕೊಂಡಿದ್ದ ಫಲಹ ಸಾಲ ಮಾಡಿಕೊಂಡಿದ್ದು ಇದರಿಂದ ಚಿಂತೆಗೀಡಾಗಿದ್ದ ಎನ್ನಲಾಗಿದೆ. ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ ಪೊಲೀಸ್ ತನಿಕೆಯಿಂದ ತಿಳಿಯಬೇಕಿದೆ.
ಈ ವಿಚಾರ ಕುರಿತು ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.
Comments
Post a Comment