ಸಾಗರದ ಕೊರನ ಕೊಪ್ಪ ಸಮೀಪ ಭೀಕರ ಅಪಘಾತ: ಟಿಟಿ ಪಲ್ಟಿಯಾಗಿ ಹಲವರಿಗೆ ಗಾಯ – ತಕ್ಷಣ ಆಸ್ಪತ್ರೆಗೆ ಶಾಸಕ ಬೇಳೂರು ದೌಡು

ಕೂರನಕೊಪ್ಪ ಸಮೀಪ ಟಿಟಿ ವಾಹನ ಪಲ್ಟಿ – ತಕ್ಷಣ ಆಸ್ಪತ್ರೆಗೆ ದೌಡಾಯಿಸಿದ ಶಾಸಕ ಬೇಳೂರು
ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಸಮೀಪ ಕೂರನಕೊಪ್ಪ ವ್ಯಾಪ್ತಿಯಲ್ಲಿ ಭಾನುವಾರ ಟಿಟಿ ವಾಹನ ಪಲ್ಟಿಯಾಗಿ 12 ಮಹಿಳೆಯರು ಹಾಗೂ ಓರ್ವ ಚಾಲಕ ಗಾಯಗೊಂಡಿರುವ ಘಟನೆ ನಡೆದಿದೆ.

ಬೆಂಗಳೂರಿನಿಂದ ಟ್ರೈನ್ ಮೂಲಕ ಸಾಗರಕ್ಕೆ ಆಗಮಿಸಿದ 12 ಮಹಿಳೆಯರ ತಂಡ ಸಾಗರ ದಿಂದ ಟಿಟಿ ವಾಹನ ಮಾಡಿಕೊಂಡು ಸಿಗಂದೂರು ಚೌಡೇಶ್ವರಿ ದರ್ಶನಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಸಿಗಂದೂರು ರಸ್ತೆಯ ಕೂರನಕೊಪ್ಪ ಸಮೀಪದಲ್ಲಿ ಚೀಟಿ ವಾಹನಪಲ್ಟಿಯಾಗಿದ್ದು 12 ಮಹಿಳೆಯರಲ್ಲಿ ಮೂರು ಮಹಿಳೆಯರಿಗೆ ಗಂಭೀರ ಗಾಯವಾಗಿದ್ದು ಸಾಗರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
ಘಟನೆಯ ಮಾಹಿತಿ ಸಿಕ್ಕಿದ ತಕ್ಷಣ ತಮ್ಮ ಕಾರ್ಯಕ್ರಮವನ್ನು ಮುಟ್ಟುಕುಗೊಳಿಸಿ ಆಸ್ಪತ್ರೆಗೆ ದಡಾಯಿಸಿದ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಲೂರು ಗಾಯಲುಗಳನ್ನು ಧೈರ್ಯ ತುಂಬುವ ಜೊತೆಗೆ ವೈದ್ಯರನ್ನು ಚಿಕಿತ್ಸೆ ನೀಡಲು ಸೂಚಿಸಿದರು.
ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತವಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "

" ಶೃಂಗೇರಿಯಲ್ಲಿ ಭೀಕರ ಅಪಘಾತ "