ಸುಲಿಗೆ ಪ್ರಕರಣ: ಇಬ್ಬರು ಆಪರಾಧಿಗಳಿಗೆ 5 ವರ್ಷ ಕಠಿಣ ಸಜೆ
ಸುಲಿಗೆ ಪ್ರಕರಣ: ಇಬ್ಬರು ಆಪರಾಧಿಗಳಿಗೆ 5 ವರ್ಷ ಕಠಿಣ ಸಜೆ
ಚಿಕ್ಕಮಗಳೂರು: ಮೋಟಾರ್ ಬೈಕ್‌ನಲ್ಲಿ
ತೆರಳುತ್ತಿದ್ದವರನ್ನು ದೂಡಿ ಬೀಳಿಸಿ ಚಿನ್ನಾಭರಣ ಕಸಿದು ಸುಲಿಗೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಇಬ್ಬರು ಆರೋಪಿಗಳಿಗೆ ಐದು ವರ್ಷಗಳ ಕಠಿಣ ಸಜೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಇಬ್ಬರು ಆರೋಪಿಗಳಿಗೆ ಐದು ವರ್ಷಗಳ ಕಠಿಣ ಸಜೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಕಡೂರು ತಾಲೂಕು ಬುಕ್ಕಸಾಗರ ಕೊರಚರಹಟ್ಟಿಯ ಸಂತೋಷ್ ಹಾಗೂ ಹಾಲೇಶ ಎಂಬುವವರೇ ಶಿಕ್ಷೆಗೆ ಒಳಗಾದವರು. ಈ ಘಟನೆ ನಡೆದಿರುವುದು 2012ರ ಜೂನ್.4 ರಂದು ಕಡೂರು ತಾಲೂಕು ಸಖರಾಯಪಟ್ಟಣ ಸಮೀಪದ ಸ್ವಾಮಿಕಟ್ಟೆ ನಿವಾಸಿ ಸುಧಾ ಎಂಬುವವರು ತಮ್ಮ ಪತಿ ಶೇಖರ್ ಅವರೊಂದಿಗೆ ಕರಡಿಗವಿ ಮಠಕ್ಕೆ ತೆರಳಿ ತಮ್ಮ ಮಗುವಿನ ಮುಡಿ (ತಲೆಕೂಡಲು) ತೆಗೆಸಿಕೊಂಡು ತೆಗೆಸಿಕೊಂಡು ಅಂದು ಮಧ್ಯಾಹ್ನ 2.30ರ ಸುಮಾರಿಗೆ ಮಗುವಿನೊಂದಿಗೆ ಬೈಕ್‌ನಲ್ಲಿ ಮರಳುತ್ತಿದ್ದಾಗ ಶೇಖರ್ ಅವರನ್ನು ತಳ್ಳಿ ಬೈಕ್ ಅನ್ನು ದೂಡಿ ರಸ್ತೆಯ ಮೇಲೆ ಬೀಳಿಸಿದ್ದು, ಆರೋಪಿ ಸಂತೋಷ್ ಮಗುವನ್ನೆತ್ತಿಕೊಂಡು ಚಾಕು ತೋರಿಸಿ ಹೆದರಿಸಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಹಾಲೇಶನು ಸುಧಾ ಅವರ ಕೊರಳಿನಲ್ಲಿದ್ದ ಬಂಗಾರದ ಮಾಂಗಲ್ಯ ಸರ, ಒಂದು ಬಂಗಾರದ ನೆಕ್ಲೀಸ್, ಮೊಬೈಲ್ ಹಾಗೂ ಬೈಕ್‌ನ ಕೀಯನ್ನು ಕಸಿದಿದ್ದರೆನ್ನಲಾಗಿದೆ. ಇನ್ನೋರ್ವ ಪ್ರಸನ್ನ ಬೈಕ್‌ನಲ್ಲಿದ್ದ ಶೇಖರ್ ಅವರನ್ನು ತಳ್ಳಿದ್ದ ಎನ್ನಲಾಗಿದೆ.
ಈ ಬಗ್ಗೆ ಸುಧಾ ಅವರು ನೀಡಿದ ದೂರಿನ ಮೇರೆಗೆ ಸಖರಾಯಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಕಡೂರು ಸರ್ಕಲ್ ವೃತ್ತ ನಿರೀಕ್ಷಕರಾದ ಬಾಲಚಂದ್ರಗೌಡವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಭಾನುಮತಿ ಬಿ.ಸಿ. ಅವರು ಅಭಿಯೋಜನೆ ಸಾಕ್ಷಿದಾರರ ವಿಚಾರಣೆಯಿಂದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನವೆಂಬರ್.19 ರಂದು ಆಪಾದಿತರಾದ ಸಂತೋಷ್ ಮತ್ತು ಹಾಲೇಶ ಅವರಿಗೆ ೫ ವರ್ಷಗಳ ಕಠಿಣ ಸಜೆ ಹಾಗೂ ತಲಾ 25 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದಲ್ಲಿ ಮತ್ತೆ ಆರು ತಿಂಗಳು ಸಾದಾ ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದ್ದಾರೆ. ಇನ್ನೋರ್ವ ಆರೋಪಿ ಪ್ರಸನ್ನ ಸಾವಿಗೀಡಾಗಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಖರಾಯಪಟ್ಟಣ ಠಾಣೆಯ ಎ.ಎಸ್.ಐ. ದೇವೇಂದ್ರಕುಮಾರ್ ಅವರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರುಪಡಿಸಿದ್ದರು. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಹೆಚ್.ಎಸ್.ಲೋಹಿತಾಶ್ವಚಾರ್ ಅವರು ವಾದ ಮಂಡಿಸಿದ್ದರು.
ಈ ಬಗ್ಗೆ ಸುಧಾ ಅವರು ನೀಡಿದ ದೂರಿನ ಮೇರೆಗೆ ಸಖರಾಯಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಕಡೂರು ಸರ್ಕಲ್ ವೃತ್ತ ನಿರೀಕ್ಷಕರಾದ ಬಾಲಚಂದ್ರಗೌಡವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಭಾನುಮತಿ ಬಿ.ಸಿ. ಅವರು ಅಭಿಯೋಜನೆ ಸಾಕ್ಷಿದಾರರ ವಿಚಾರಣೆಯಿಂದ ಆರೋಪo ಸಾಬೀತಾದ ಹಿನ್ನೆಲೆಯಲ್ಲಿ ನವೆಂಬರ್ .19 ರಂದು ಆಪಾದಿತರಾದ ಸಂತೋಷ್ ಮತ್ತು ಹಾಲೇಶ ಅವರಿಗೆ ೫ ವರ್ಷಗಳ ಕಠಿಣ ಸಜೆ ಹಾಗೂ ತಲಾ 25 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದಲ್ಲಿ ಮತ್ತೆ ಆರು ತಿಂಗಳು ಸಾದಾ ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದ್ದಾರೆ. ಇನ್ನೋರ್ವ ಆರೋಪಿ ಪ್ರಸನ್ನ ಸಾವಿಗೀಡಾಗಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಖರಾಯಪಟ್ಟಣ ಠಾಣೆಯ ಎ.ಎಸ್.ಐ. ದೇವೇಂದ್ರಕುಮಾರ್ ಅವರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರುಪಡಿಸಿದ್ದರು. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಹೆಚ್.ಎಸ್.ಲೋಹಿತಾಶ್ವಚಾರ್ ಅವರು ವಾದ ಮಂಡಿಸಿದ್ದರು.
Comments
Post a Comment