ಶೃಂಗೇರಿ ತಾಲೂಕಿನಾದ್ಯಂತ ಗುರುವಾರ ದಿನವಿಡೀ ವಿದ್ಯುತ್ ವ್ಯತ್ಯಯ!
ಶೃಂಗೇರಿ ತಾಲೂಕಿನಾದ್ಯಂತ ಗುರುವಾರ ದಿನವಿಡೀ ವಿದ್ಯುತ್ ವ್ಯತ್ಯಯ!
ಶೃಂಗೇರಿ: ಬಾಳೆಹೊನ್ನೂರು-ಶೃಂಗೇರಿ ಮಾರ್ಗದ ನಿರ್ವಹಣೆ ಹಾಗೂ ಜಯಪುರ ಮಾರ್ಗದಲ್ಲಿ ಪ್ರತ್ಯೇಕ ಬ್ರೇಕರ್ ಅಳವಡಿಕೆ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ (ಗುರುವಾರ, ನವೆಂಬರ್ 20 ರಂದು ) ಶೃಂಗೇರಿ ತಾಲೂಕಿನ ಬಹುಪಾಲು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸುವಂತೆ ವಿದ್ಯುತ್ ಮೆಸ್ಕಾಂ ಮನವಿ ಮಾಡಿದೆ.
ಬಾಳೆಹೊನ್ನೂರು - ಶೃಂಗೇರಿ 33/11ಕೆವಿ ಮಾರ್ಗದ ಪ್ರಮುಖ ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ, ಶೃಂಗೇರಿ 33/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಎಲ್ಲಾ ಪಟ್ಟಣ ಹಾಗೂ ಗ್ರಾಮೀಣ ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆ ಇರಲಿದೆ. ಜಯಪುರ 33ಕೆ.ವಿ ಮಾರ್ಗದಲ್ಲಿ ಆಗುವ ಅಡಚಣೆಯನ್ನು ತಪ್ಪಿಸುವುದಕ್ಕಾಗಿ ಶೃಂಗೇರಿ ಮಾರ್ಗಕ್ಕೆ ಪ್ರತ್ಯೇಕ ಬ್ರೇಕರ್ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿರುವುದರಿಂದ, ಬೆಳಿಗ್ಗೆ 11ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮೇಗುಂದ ಹೋಬಳಿ, ಜಯಪುರ ಗ್ರಾಮ ಪಂಚಾಯಿತಿ ವ್ಯಾಪ್ತಿ, ಅತ್ತಿಕುಡುಗೆ ಗ್ರಾಮ ಪಂಚಾಯಿತಿ ವ್ಯಾಪ್ತಿ, ಗುಡ್ಡೆ ತೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಹಕರು ಮತ್ತು ಸಾರ್ವಜನಿಕರು ಈ ವ್ಯತ್ಯಯಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಮೆಸ್ಕಾಂ ಮನವಿ ಮಾಡಿದೆ.
Comments
Post a Comment