" ಎನ್ ಆರ್ ಪುರ ತಾಲೂಕಿನಲ್ಲಿ ನಡೆದ ಕಳ್ಳತನದ ಕಳ್ಳರ ಬಂಧನ "

" ಎನ್ ಆರ್ ಪುರ ತಾಲೂಕಿನಲ್ಲಿ ನಡೆದ ಕಳ್ಳತನದ ಕಳ್ಳರ ಬಂಧನ "
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ಪಟ್ಟಣದ ಶಿವಮೊಗ್ಗ ಹೋಗುವ ರಸ್ತೆಯಲ್ಲಿರುವ ಹಳೇಪೇಟೆ ಟಿನು ಥಾಮಸ್ ಎಂಬುವವರ  ರಬ್ಬರ್ ವ್ಯಾಪಾರಿಯೊಬ್ಬರ ಅಂಗಡಿಯಲ್ಲಿ ಕೆಲವು ದಿನಗಳ ಹಿಂದೆ ಮಧ್ಯಾಹ್ನ ಸಮಯದಲ್ಲಿ ಮಾಲೀಕ ಊಟ ಮಾಡಲು ಹೊರಹೋದ ಸಮಯದಲ್ಲಿ ,ಕ್ಯಾಶ್ ಡ್ರಾ ಹೊಡೆದು 2.50.000 ನಗದು ಹಣವನ್ನು ಕಳ್ಳತನ ಮಾಡಿರುವುದಾಗಿ ಮಾಲಿಕ ಪೊಲೀಸ್ ಠಾಣೆಗೆ 19 11 2025 ರಂದು ದೂರು ನೀಡಿದ್ದರು. 
    ಇದರ ಪ್ರಕಾರ 94/2025 ಕಲಂ 305(3) ಬಿ ಎನ್ ಎಸ್ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ ಅಪರಾಧಿಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ: ವಿಕ್ರಂ ಅಮಟೆ ಐಪಿಎಸ್ ,
 ಚಿಕ್ಕಮಗಳೂರು ಜಿಲ್ಲಾ ಸಿಟಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಯಕುಮಾರ್ , ಕೊಪ್ಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಬಾಲಾಜಿ ಸಿಂಗ್ ನಿರ್ದೇಶನದಂತೆ ಎನ್ ಆರ್ ಪುರ ವೃತ್ತ ನಿರೀಕ್ಷಕರಾದ ಗುರುದತ್ ಕಾಮತ್ ನೇತೃತ್ವದಲ್ಲಿ ಠಾಣೆಯ ಪಿಎಸ್ಐ ಬಿ .ಸ್ ನಿರಂಜನ್ ಗೌಡ ಅವರನ್ನೋಳಗೊಂಡ ತನಿಖಾ ತಂಡ ರಚಿಸಲಾಯಿತು.
ಈ ತಂಡದಲ್ಲಿ ಅಪರಾದ ವಿಭಾಗದ ಶ್ರೀಮತಿ ಎನ್. ಎ ಜ್ಯೋತಿ, ಸಿಬ್ಬಂದಿಗಳಾದ ಮಧು, ಎಸ್ ಜಿ. ಯುಗಾಂದರ, ಪರಮೇಶ್, ಬಿನು ಪಿ. ಎ, ಅಮಿತ್ ಚೌಕುಲೆ, ದೇವರಾಜ , ರೇವೇಗೌಡ ನಿರಾಧರ , ಕೌಶಿಕ್, ಸ್ವರೂಪ್ ಇವರುಗಳ ಒಂದು ತಂಡ ರಚಿಸಿ , ಜಿಲ್ಲಾ ತಾಂತ್ರಿಕ ವಿಭಾಗದ ನಯಾಜ್ ಅಂಜುಂ, ಹಾಗೂ ರಬ್ಬಾನಿ ಸಹಯೋಗದೊಂದಿಗೆ ವಿವಿಧ ಆಯಾಮಗಳಲ್ಲಿ , ವೈಜ್ಞಾನಿಕವಾಗಿ ಮಾಹಿತಿಗಳನ್ನು ಸಂಗ್ರಹಿಸಿ ಜಿಲ್ಲೆಯ ಹಲವು ಭಾಗದಲ್ಲಿ ಆರೋಪಿಗಳಿಗಾಗಿ ಶೋಧಿಸಿ ಪತ್ತೆ ಹಚ್ಚುವಲ್ಲಿ ಸಫಲತೆ ಕಂಡರು.
 
"ಇಬ್ಬರು ಕಳ್ಳರ ಬಂಧನ"
ಮೂಡಿಗೆರೆ ಛತ್ರ ಮೈದಾನದ 6 ನೇ ತಿರುವಿನಲ್ಲಿ ವಾಸವಾಗಿರುವ ,ಬೇಲೂರಿನಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿರುವ 26 ವರ್ಷದ ಮೊಹಮ್ಮದ್ ಶಹಾಬಾದ್ ಬಿನ್ ಅಬ್ದುಲ್ ರಝಾಕ್ , ಮೂಡಿಗೆರೆ ವಾಸಿ ಬೇಲೂರಿನಲ್ಲಿ ಪೇಂಟಿಂಗ್ ಕೆಲಸಮಾಡುತ್ತಿರುವ 25 ವರ್ಷದ ಜೆಮ್ ಶಿದ್ ಬಿನ್ ಅಬ್ದುಲ್ ರಝಾಕ್ , ಇವರನ್ನು ಪೊಲೀಸ್ ಇಲಾಖೆ ಬಾರಿ ಚಾಣಾಕ್ಯದಿಂದ ಸೆರೆ ಹಿಡಿದಿದ್ದಾರೆ. 
ಇವರುಗಳು ರಾಜ್ಯದ ಹಲವುಕಡೆ ಹಿಂದೆ ಕಳ್ಳತನ ನಡೆಸಿದ ಬಗ್ಗೆ ಸುಳಿವು ಸಿಕ್ಕಿವೆ. ಇದರ ಬಗ್ಗೆಯೂ ತನಿಖೆ ನಡೆಯುತ್ತಿವೆ.
ಇವರ ವಶದಲ್ಲಿದ್ದ 1.20.000 ಸಾವಿರ ರೂ ನಗದು ಹಣ ಮತ್ತು ಕೃತ್ಯಕ್ಕೆ ಉಪಯೋಗಿಸಿದ್ದ KA 46 Q 6030 ನಂಬರಿನ ಬೈಕ್ ವಶಪಡಿಸಿಕೊಂಡು ಮುಂದಿನ ತನಿಕೆ ನಡೆಸುತ್ತಿದ್ದಾರೆ.
          ಈ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿ ಆರೋಪಿಗಳನ್ನು ಪತ್ತೆಹಚ್ಚಿ ಸೆರೆಹಿಡಿದು ಹಣವನ್ನು ವಶಪಡಿಸಿಕೊಂಡ ಅಪರಾದ ತನಿಖಾ ತಂಡವನ್ನು ಚಿಕ್ಕಮಗಳೂರು ಜಿಲ್ಲಾ ಅಧೀಕ್ಷಕರು ಮತ್ತು ಊರಿನ ನಾಗರೀಕರು ಅಭಿನಂದಿಸಿದ್ದಾರೆ.

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "

" ಶೃಂಗೇರಿಯಲ್ಲಿ ಭೀಕರ ಅಪಘಾತ "