ಅಲ್ಲಿ ತಂಗಿ ಮದ್ವೆ ಶಾಸ್ತ್ರ, ಇಲ್ಲಿ ಬಿತ್ತು ಅಣ್ಣನ ಹೆಣ! ಇಳಿ ಸಂಜೆ ಹೊತ್ತು, ಮನೆ ಬಿಟ್ಟವರಿಗೆ ಆಪತ್ತು..

ಅಲ್ಲಿ ತಂಗಿ ಮದ್ವೆ ಶಾಸ್ತ್ರ, ಇಲ್ಲಿ ಬಿತ್ತು ಅಣ್ಣನ ಹೆಣ! ಇಳಿ ಸಂಜೆ ಹೊತ್ತು, ಮನೆ ಬಿಟ್ಟವರಿಗೆ ಆಪತ್ತು..
ಹಾಸನ:
ಆ ಮನೆಯಲ್ಲಿ ನೆನ್ನೆಯಷ್ಟೇ ಮದುವೆಯ ಸಂಭ್ರಮ. ತಂಗಿ ಮದುವೆಯಲ್ಲಿ ಖುಷಿ ಖುಷಿಯಾಗಿ ಓಡಾಡಿದ್ದ ಅಣ್ಣ ಮತ್ತು ಭಾವ. ಇಂದು ಆರತಕ್ಷತೆ ಹಿನ್ನಲೆ ತಯಾರಿ ನಡೆಸಿಕೊಂಡಿದ್ದ ಕುಟುಂಬಸ್ಥರಿಗೆ ಆಘಾತ. ಮನೆಗೆ ಬೇಕಾದ ವಸ್ತುಗಳನ್ನು ತರಲು ಹೋದ ಇಬ್ಬರು ಯುವಕರು ಅಪಘಾತದಲ್ಲಿ ದಾರುಣ ಸಾವು.

ಹಾಸನ: ಇವ್ರಿಬ್ಬರದ್ದು ಬರೀ ಸಾವಲ್ಲ, ವಿಧಿಯ ಮೋಸದ ಸಂಚು (Death). ಹೊಂಚು ಹಾಕಿ ಸಂಚು ರೂಪಿಸಿದ ಜವರಾಯನ ಮಾಯಾಜಾಲ. ಯಾಕಂದ್ರೆ, ಒಂದೇ ಒಂದು ದಿನ ಕಳೆದಿದ್ರೆ ತಂಗಿಯ (Sister Marriage) ಸಂತಸದ ಕ್ಷಣಗಳನ್ನ ಕಣ್ತುಂಬಿಕೊಳ್ತಿದ್ರು. ಅಣ್ಣನಾಗಿ (Brother) ನಿಂತು ಎಲ್ಲಾ ಜವಾಬ್ದಾರಿಯನ್ನ ಮಾಡಿ ಮುಗಿಸ್ತಿದ್ರು. ಆದ್ರೆ, ಅದ್ಯಾವುದಕ್ಕೂ ಈ ಘೋರ ವಿಧಿ ಅವಕಾಶ ಕೊಟ್ಟಿಲ್ಲ. ಒಂದೇ ಒಂದು ದಿನವೂ ಸಮಯಕೊಡದಂತೆ ಇಬ್ಬರ ಜೀವವನ್ನ (Life) ಕಿತ್ಕೊಂಡು ಹೋಗಿದ್ದಾನೆ. ಮದ್ವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸಾವಿನ ಸೂತಕ ಮೂಡುವಂತೆ ಮಾಡಿದ್ದಾನೆ.

ತಂಗಿಯ ಮದ್ವೆ ಶಾಸ್ತ್ರದ ದಿನವೇ ಅಣ್ಣನ ಸಾವಿನ ಸಿಡಿಲು!
ಸಾವು ಅನ್ನೋದೇ ಘೋರ. ಯಾಕಂದ್ರೆ, ಹುಟ್ಟಿದ ಪ್ರತಿಯೊಬ್ಬರಿಗೂ ಸಾವು ಅನ್ನೋದು ಕಟ್ಟಿಟ್ಟ ಬುತ್ತಿ. ಆದ್ರೆ, ಕೆಲವೊಬ್ರ ಸಾವು ತುಂಬಾನೇ ಕಾಡುತ್ತೆ. ಹೆತ್ತವರ ಪಾಲಿಗೆ ಸಾಯೋ ಕ್ಷಣದವರೆಗೂ ನೆನಪಿನ ಉರುಳಾಗಿ ಜೀವ ಹಿಂಡುತ್ತೆ. ಇವ್ರಿಬ್ಬರ ಸಾವಿನ ವಿಷ್ಯದಲ್ಲಿ ಆಗಿದ್ದೂ ಇದೆ. ಈತನ ಹೆಸರು ಲೋಕೇಶ್‌‌, ಈತ ಕಿರಣ್. ಬೇಲೂರು ತಾಲೂಕಿನ ಹೊಸಮನೆಹಳ್ಳಿ ನಿವಾಸಿ. ಚಿಕ್ಕಪ್ಪನ ಮಗಳ ಮದ್ವೆ ಇದ್ದಿದ್ದರಿಂದ ಲೋಕೇಶ್‌‌ ತುಂಬಾನೇ ಬ್ಯುಸಿಯಾಗಿದ್ದ. ನಿನ್ನೆ ಅದ್ಧೂರಿಯಾಗಿ ಮದ್ವೆ ಮಾಡಿ ಮುಗಿಸಿದವ್ರು, ಸಂಜೆ ಮನೆಗೆ ಬಂದಿದ್ದಾರೆ. ಇವತ್ತು ಬೆಳಗ್ಗೆ ತಂಗಿ ಹಾಗೂ ಬಾವನನ್ನ ಮನೆಗೆ ಕರೆಸೋ ಶಾಸ್ತ್ರವಿತ್ತು. ಹೀಗಾಗಿ ಬೆಳಗ್ಗಿನ ತಿಂಡಿಗೆ ಐಟಂಸ್‌ ತರೋಣ ಅಂತಾ ಇಬ್ಬರೂ ರಾತ್ರಿಯೇ ಬೈಕ್‌ ಹತ್ತಿ ಹೊರಟಿದ್ದಾರೆ. ಅದೇ ಇವ್ರ ಪಾಲಿಗೆ ಕೊನೇ ಕ್ಷಣಗಳಾಗಿವೆ. ಸಂಜೆ ಹೊತ್ತಲ್ಲಿ ಮನೆ ಬಿಟ್ಟವ್ರು ಮತ್ತೆ ವಾಪಸ್‌ ಬಂದಿದ್ದು ಹೆಣವಾಗಿ.

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "

" ಶೃಂಗೇರಿಯಲ್ಲಿ ಭೀಕರ ಅಪಘಾತ "