"ತೀರ್ಥಹಳ್ಳಿ ಬಾಳೆಬೈಲಿನಲ್ಲಿ ಭೀಕರ ಅಪಘಾತ ಇಬ್ಬರು ಬೈಕ್ ಸವಾರರ ದುರ್ಮರಣ..!"
"ತೀರ್ಥಹಳ್ಳಿ ಬಾಳೆಬೈಲಿನಲ್ಲಿ ಭೀಕರ ಅಪಘಾತ ಇಬ್ಬರು ಬೈಕ್ ಸವಾರರ ದುರ್ಮರಣ..!"
ತೀರ್ಥಹಳ್ಳಿ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಪಟ್ಟಣದ ಬಾಳೆಬೈಲು ಸಮೀಪ ಗ್ಯಾಸ್ ಲಾರಿ ಹಾಗೂ ಬೈಕ್ ನಡುವೆ ಮಧ್ಯ ರಾತ್ರಿ ಭೀಕರ ಅಪಘಾತ ಸಂಭವಿಸಿದ್ದು ಬೈಕ್ ನಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ತೀರ್ಥಹಳ್ಳಿ ಪಟ್ಟಣದ ಬಾಳೆಬೈಲಿನ "ಆರ್ ಎಂ ಸಿ ಯಾರ್ಡ್" ಬಳಿ ಮಧ್ಯರಾತ್ರಿ 1:30 ರ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ ಬೈಕ್ ನಲ್ಲಿದ್ದ ಇಬ್ಬರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಸುದೀಪ್ (25) ಮತ್ತು ಸುಧೀಶ್ (30) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಹೆಲ್ಮಟ್ ಇಲ್ಲದೆ ಬೈಕ್ ಚಲಾಯಿಸಿದ್ದೆ ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ.
ಇಬ್ಬರು ಇಂದಿರಾನಗರ ಹಾಗೂ ಯಡೆಹಳ್ಳಿಕೆರೆಯವರು ಎಂದು ತಿಳಿದುಬಂದಿದೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Comments
Post a Comment