ರಾಮನಗರ,ಕನಕಪುರ, ಪ್ರವಾಸಿ ವಾಹನ ಚಾಲಕ ಸ್ನಾನಕ್ಕೆ ಹೋದಾಗ ಸೋಮಾವತಿ ನದಿಯಲ್ಲಿ ಮುಳುಗಿ ಸಾವು..!
ರಾಮನಗರ,ಕನಕಪುರ, ಪ್ರವಾಸಿ ವಾಹನ ಚಾಲಕ ಸ್ನಾನಕ್ಕೆ ಹೋದಾಗ ಸೋಮಾವತಿ ನದಿಯಲ್ಲಿ ಮುಳುಗಿ ಸಾವು..!
ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಸಂಸೆ ಗ್ರಾಮ ವ್ಯಾಪ್ತಿಗೆ ಬರುವ "ಬಾಲ್ಗಲ್ ಕಟ್ನೀರು ಕಲ್" ಬಳಿ "ಸೋಮಾವತಿ ನದಿ"ಗೆ ಸ್ನಾನಕೆಂದು ಹೋದ ಸಂದರ್ಭದಲ್ಲಿ ಕಾಲು ಜಾರಿ ನೀರಿಗೆ ಬಿದ್ದ ಘಟನೆ ನಡೆದಿದೆ.
ಕೂಡಲೇ ಸ್ಥಳೀಯ ಮೆಸ್ಕಾಂ ಸಿಬ್ಬಂದಿ ಮತ್ತು ಸ್ಥಳೀಯರು ಸೇರಿ ನೀರಿನಿಂದ ಮೇಲೆ ತೆಗೆದುಹಾಕಿ ಕೂಡಲೇ ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ತರಲಾಯಿತು ದಾರಿ ಮಧ್ಯದಲ್ಲಿ ಚಾಲಕ ಪುಟ್ಟ ಮಾದಯ್ಯ(53) ವರ್ಷದ ಎಂಬುವವರು ಮೃತಪಟ್ಟಿದ್ದಾರೆ.
ಇವರು ಮೂಲತ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಜೋಗಮಾನಸ ಹಳ್ಳಿ ಇವರು ಕಳಸ - ಕುದುರೆಮುಖ ಪಿಕ್ ನೇತ್ರಾವತಿ ಪಿಕ್ ಪ್ರವಾಸಿಗರನ್ನು ಕರೆದುಕೊಂಡು ಬಂದಂತ ಸಂದರ್ಭದಲ್ಲಿ ಸ್ಥಾನಕ್ಕೆ ಎಂದು ಹೋಗಿದ ಚಾಲಕ ಎಂದು ತಿಳಿದುಬಂದಿದೆ.
Comments
Post a Comment