ತರೀಕೆರೆ: ಹಿಟ್ ಅಂಡ್ ರನ್ - ಇಬ್ಬರು ಸ್ಥಳದಲ್ಲೇ ದುರ್ಮರಣ!
ತರೀಕೆರೆ: ಹಿಟ್ ಅಂಡ್ ರನ್ - ಇಬ್ಬರು ಸ್ಥಳದಲ್ಲೇ ದುರ್ಮರಣ!
ತರೀಕೆರೆ: ಅಪರಿಚಿತ ವಾಹನ ಹಿಟ್ ಅಂಡ್ ರನ್ ಮಾಡಿ ಎಸ್ಕೆಪ್ ಆಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಬೆಟ್ಟದಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಿವಮೊಗ್ಗ-ಬೆಂಗಳೂರು ರಾ.ಹೆ. 206ರಲ್ಲಿ ಅತಿವೇಗದಲ್ಲಿ ಬಂದ ಅಪರಿಚಿತ ವಾಹನವು ಕೆಎ 52 ವೈ 3860 ಸಂಖ್ಯೆಯ ಟಿವಿಎಸ್ ಜುಪಿಟರ್ ಬೈಕ್‌ಗೆ ಡಿಕ್ಕಿ ಹೊಡೆದು ನಿಲ್ಲಿಸದೇ ಪರಾರಿಯಾಗಿದೆ. ತೀವ್ರ ರಕ್ತಸ್ರಾವದಿಂದ ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಾಹಿತಿ ಪಡೆದ ತರೀಕೆರೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪರಾರಿಯಾದ ವಾಹನ ಪತ್ತೆಗೆ ಬಲೆ ಬೀಸಿದ್ದಾರೆ.
Comments
Post a Comment