ಬೆಂಗಳೂರಲ್ಲಿ ಮಹಿಳೆ ಜೊತೆ ಅಕ್ರಮ ಸಂಬಂಧ ಆರೋಪ : ಯುವಕನನ್ನು ಥಳಿಸಿ ಹತ್ಯೆಗೈದ ಕುಟುಂಬಸ್ಥರು.!

ಬೆಂಗಳೂರಲ್ಲಿ ಮಹಿಳೆ ಜೊತೆ ಅಕ್ರಮ ಸಂಬಂಧ ಆರೋಪ : ಯುವಕನನ್ನು ಥಳಿಸಿ ಹತ್ಯೆಗೈದ ಕುಟುಂಬಸ್ಥರು.!
ಬೆಂಗಳೂರು : ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಯುವಕನನ್ನು ಮಹಿಳೆಯ ಕುಟುಂಬಸ್ಥರು ಥಳಿಸಿ ಹತ್ಯೆಗೈದ ಘಟನೆ ಬೆಂಗಳೂರಿನ ಯಶವಂತಪುರದ ಮುತ್ಯಾಲಮ್ಮ ನಗರದಲ್ಲಿ ನಡೆದಿದೆ.

ಕೊಲೆಯಾದ ಯುವಕನನ್ನ ನರಸಿಂಹರಾಜು (32) ಎಂದು ಗುರುತಿಸಲಾಗಿದೆ. ಈತ ಮದುವೆಯಾಗಿದ್ದ ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎಂದು ಶಂಕಿಸಲಾಗಿದೆ.

ಆಗಾಗ ಯುವಕನ ಮನೆಗೆ ಮಹಿಳೆ ಕೂಡ ಬರುತ್ತಿದ್ದಳು. ಒಂದು ದಿನ ನರಸಿಂಹರಾಜು ಜೊತೆ ಮನೆಯಲ್ಲಿ ಮಹಿಳೆ ಇರುವುದನ್ನು ನೋಡಿದ ಮಹಿಳೆ ಕುಟುಂಬಸ್ಥರು ಆತನನ್ನು ಮನೆಯಿಂದ ಹೊರಗಡೆ ಎಳೆದುಕೊಂಡು ಬಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಯುವಕನನ್ನ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಯುವಕ ಮೃತಪಟ್ಟಿದ್ದಾನೆ. ಈ ಕುರಿತು ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "

" ಶೃಂಗೇರಿಯಲ್ಲಿ ಭೀಕರ ಅಪಘಾತ "