ಬೆಂಗಳೂರು ದೇವಿಶ್ರೀ ಕೊಲೆ ಪ್ರಕರಣ-ಆರೋಪಿ ತಿರುಪತಿಯಲ್ಲಿ ಅರೆಸ್ಟ್
ಬೆಂಗಳೂರು ದೇವಿಶ್ರೀ ಕೊಲೆ ಪ್ರಕರಣ-ಆರೋಪಿ ತಿರುಪತಿಯಲ್ಲಿ ಅರೆಸ್ಟ್
ಬೆಂಗಳೂರು :ಬೆಂಗಳೂರಿನ ಮಾದನಾಯಕನಹಳ್ಳಿ ವ್ಯಾಪ್ತಿಯ ತಮ್ಮೇನಹಳ್ಳಿಯಲ್ಲಿ ಆಂಧ್ರ ಮೂಲದ ಬಿಬಿಎಂ ವಿದ್ಯಾರ್ಥಿನಿ ದೇವಿಶ್ರೀ (21) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಸ್ನೇಹಿತ ಪ್ರೇಮ್ ವರ್ಧನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ದೇವಿಶ್ರೀ ಬೇರೆ ಹುಡುಗನೊಂದಿಗೆ ಮಾತನಾಡುತ್ತಿದ್ದಾಳೆ ಎಂಬ ಕೋಪದಿಂದ ಪ್ರೇಮ್ ವರ್ಧನ್ ಗೆಳತಿಯ ರೂಮಿಗೆ ಕರೆದೊಯ್ದು ಈ ಕೃತ್ಯ ಎಸಗಿದ್ದಾನೆ. ಕೊಲೆ ಮಾಡಿದ ನಂತರ ಆರೋಪಿಯು ಮೆಟ್ರೋ ಮೂಲಕ ಮೆಜೆಸ್ಟಿಕ್‌ಗೆ ಹೋಗಿ, ಅಲ್ಲಿಂದ ತಿರುಪತಿಗೆ ಪರಾರಿಯಾಗಿದ್ದನು. ತನಿಖೆ ಕೈಗೊಂಡ ಪೊಲೀಸರು, ತಿರುಪತಿಯಲ್ಲಿ ಆತನ ಜಾಡು ಹಿಡಿದು ಯಶಸ್ವಿಯಾಗಿ ಬಂಧಿಸಿದ್ದಾರೆ.
Comments
Post a Comment