ಭೀಕರ ರಸ್ತೆ ಅಪಘಾತ : ಮಗು ಸೇರಿ 5ಜನರ ದುರ್ಮರಣ..!
ಭೀಕರ ರಸ್ತೆ ಅಪಘಾತ : ಮಗು ಸೇರಿ 5ಜನರ ದುರ್ಮರಣ..!
ಚಿತ್ರದುರ್ಗದ: ಜಿಲ್ಲೆ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್‌ನಲ್ಲಿ ಗುರುವಾರ ಮಧ್ಯರಾತ್ರಿ ಸುಮಾರು 2:15am ಗೆ ಭೀಕರ ರಸ್ತೆ ಅಪಘಾತ ನಡೆದಿದೆ. ಘಟನೆಯಲ್ಲಿ ಮಗು ಸೇರಿ 5 ಜನ ಸಾವನ್ನಪ್ಪಿದ್ದಾರೆ.
ಲಾರಿಯೊಂದು ಡಿಕ್ಕಿ ಹೊಡೆದು ಪರಿಣಾಮ ಖಾಸಗಿ ಬಸ್ಸೆಂದು ಹೊತ್ತಿ ಉರಿದಿದೆ. ಖಾಸಗಿ ಸ್ವೀಪರ್ ಕೋಚ್ "ಸೀ ಬರ್ಡ್" ಬಸ್‌ನಲ್ಲಿದ್ದ "ಮಗು ಹಾಗೂ ಲಾರಿ ಚಾಲಕ ಸೇರಿ 5 ಸಜೀವ ದಹನ "ವಾಗಿದ್ದಾರೆ. ಉಳಿದ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಚಿತ್ರದುರ್ಗ ಬಸ್ ದುರಂತ: ಅಪಘಾತಗೊಂಡ ಬಸ್‌ನಲ್ಲಿದ್ದ ಪ್ರಯಾಣಿಕರ ಲಿಸ್ಟ್
ಚಿತ್ರದುರ್ಗದ ಗೊರ್ಲತ್ತು ಬಳಿ ಸೀಬರ್ಡ್ ಬಸ್ ಮತ್ತು ಲಾರಿ ಡಿಕ್ಕಿಯಾಗಿ ಮಗು ಹಾಗೂ ಲಾರಿ ಚಾಲಕ ಸೇರಿ 5ಮಂದಿ ಸಜೀವ ದಹನವಾಗಿದ್ದಾರೆ. ಬಸ್‌ನಲ್ಲಿ 15 ಮಹಿಳೆಯರು ಹಾಗೂ 14 ಪುರುಷರು ಇದ್ದರು ಎನ್ನಲಾಗಿದೆ. ಮಂಜುನಾಥ್, ಸಂಧ್ಯಾ, ಶಶಾಂಕ್, ದಿಲೀಪ್, ಪ್ರೀತಿಶ್ವರನ್, ವಿ.ಬಿಂದು, ಕೆ.ಕವಿತಾ, ಅನಿರುದ್ ಬೆನರ್ಜಿ, ಅಮೃತಾ, ಇಶಾ, ಸೂರಜ್, ಮಾನಸ, ಮಿಲನಾ, ಹೇಮರಾಜ್ ಕುಮಾರ್, ಕಲ್ಪನಾ ಪ್ರಜಾಪತಿ, ಎಂ.ಶಶಿಕಾಂತ್, ವಿಜಯ್ ಭಂಡಾರಿ, ನವ್ಯಾ, ಅಭಿಷೇಕ್, ಹೆಚ್.ಕಿರಣ್ ಪಾಲ್, ಎಂ.ಕೀರ್ತನ್ ಎಂಬ ಹೆಸರುಗಳು ಲಭ್ಯವಾಗಿವೆ.
ಸದ್ಯ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
Comments
Post a Comment