ಮೂರ್ಕಣ್ಣು ಗುಡ್ಡ ವ್ಯಾಪ್ತಿಯಲ್ಲಿ ನೈಜ ಪರಿಸ್ಥಿತಿಯನ್ನು ಪರಿಶೀಲಿಸಿ ನ್ಯಾಯಾಲಯಕ್ಕೆ ವರದಿ ನೀಡಲಾಗುವುದು: ಜಿಲ್ಲಾಧಿಕಾರಿ ಲತಾ ಕುಮಾರಿ..!
ಮೂರ್ಕಣ್ಣು ಗುಡ್ಡ ವ್ಯಾಪ್ತಿಯಲ್ಲಿ ನೈಜ ಪರಿಸ್ಥಿತಿಯನ್ನು ಪರಿಶೀಲಿಸಿ ನ್ಯಾಯಾಲಯಕ್ಕೆ ವರದಿ ನೀಡಲಾಗುವುದು: ಜಿಲ್ಲಾಧಿಕಾರಿ ಲತಾ ಕುಮಾರಿ..!
ಸಕಲೇಶಪುರ :
ತಾಲೂಕಿನ ಮೂರ್ಕಣ್ಣು ಗುಡ್ಡ ಸೆಕ್ಷನ್ 4 ವ್ಯಾಪ್ತಿಯ ಕಾಡುಮನೆ,ಅಚ್ಚನಹಳ್ಳಿ, ಅಗ್ನಿ ಗ್ರಾಮ ಮುಂತಾದ ಕಡೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಗ್ರಾಮಸ್ತರು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಹಲವಾರು ದಶಕಗಳಿಂದ ನಾವು ಎಲ್ಲಿ ಬದುಕನ್ನು ಕಂಡುಕೊಂಡಿದ್ದೇವೆ. ಆದರೆ ಇದೀಗ ಅರಣ್ಯ ಇಲಾಖೆಯವರು ಈ ಜಾಗ ಅರಣ್ಯ ಪ್ರದೇಶವಾಗಿದೆ ಎಂದು ಹೇಳಿ ನಮ್ಮನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ. ಸುಮಾರು ನೂರು ವರ್ಷಗಳ ಹಿಂದೆ ಮೈಸೂರು ಮಹಾರಾಜರು ಇದನ್ನು ಅರಣ್ಯ ಪ್ರದೇಶ ಎಂಬ ಅಧಿಸೂಚನೆ ಹೊರಡಿಸಿದ್ದಾರೆ ಎಂಬ ನೆಪವನ್ನು ಇಡ್ಕೊಂಡು ನಮಗೆ ತೊಂದರೆ ಕೊಡಲಾಗುತ್ತಿದೆ. ಸರ್ಕಾರ ಇಲ್ಲಿ ರಸ್ತೆಗಳನ್ನು ಮಾಡಿದೆ, ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದೆ. ಬೀದಿ ದೀಪಗಳ ವ್ಯವಸ್ಥೆ ಮಾಡಿದೆ. ಶಾಲೆಗಳನ್ನು ತೆರೆಯಲಾಗಿದೆ. ಮನೆಗಳನ್ನು ಕಟ್ಟಲು ಅನುಮತಿ ನೀಡಲಾಗಿದೆ. ಸರ್ಕಾರವೇ ಹಲವಾರು ಬಡ ಕೃಷಿಕರಿಗೆ ಜಮೀನು ಮಂಜೂರು ಮಾಡಿದೆ.
ನಮ್ಮನ್ನು ಎಲ್ಲಿಂದ ತರವು ಮಾಡಿದರೆ ನಾವು ಮುಂದೆ ಬದುಕನ್ನು ಯಾವ ರೀತಿ ಸಾಗಿಸುವುದು ಎಂದು ಜಿಲ್ಲಾಧಿಕಾರಿಗಳ ಮುಂದೆ ತಮ್ಮನೋವುಗಳನ್ನು ಹಂಚಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಕಳೆದ ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಇಲ್ಲಿನ ಗ್ರಾಮಸ್ಥರು ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ನಾನು ಖುದ್ದಾಗಿ ಇಲ್ಲಿನ ನೈಜ ಪರಿಸ್ಥಿತಿಯನ್ನು ತಿಳಿಯಲು ಬಂದಿದ್ದೇನೆ.ಕಂದಾಯ ದಾಖಲಾತಿಗಳು ಇದ್ದರೆ ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ ಹಾಗೂ ಮನೆ ಕಟ್ಟಿಕೊಂಡಿರುವರು ಏನು ಭಯಪಡುವ ಅವಶ್ಯಕತೆ ಇಲ್ಲ.ಇವಾಗ ನೀವೆಲ್ಲರೂ ನ್ಯಾಯಾಲಯಕ್ಕೆ ಹೋಗಿರುವುದರಿಂದ ನಮ್ಮ ಇಲಾಖೆಯಿಂದ ವಾಸ್ತುವವಾಗಿ ವಿವರಗಳನ್ನು ನ್ಯಾಯಾಲಯಕ್ಕೆ ಕೊಡುತ್ತೇವೆ. ಕಂದಾಯ ಭೂಮಿ ಇರುವವರು ಸಾಗುವಳಿ ಮಾಡಬೇಕು ಇಲ್ಲವಾದರೆ ಅದು ಸರ್ಕಾರಿ ಜಮೀನು ಆಗುತ್ತದೆ. ಒಟ್ಟಾರೆಯಾಗಿ ಯಾರು ಆತಂಕ ಪಡುವುದು ಬೇಡ ಎಂದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಮೂರ್ಕಣ್ಣು ಗುಡ್ಡ ವ್ಯಾಪ್ತಿಯ ಸುಮಾರು 7867 ಎಕರೆ ಜಾಗ 1920 ರ ಅಧಿಸೂಚನೇಯಂತೆ ಅರಣ್ಯ ಇಲಾಖೆಗೆ ಸೇರುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಮಂಜುನಾಥ್, ತಹಸೀಲ್ದಾರ್ ಸುಪ್ರೀತಾ, ವಲಯ ಅರಣ್ಯಧಿಕಾರಿ ಹೇಮಂತ್ ಕುಮಾರ್, ಅರಣ್ಯ ಇಲಾಖೆಯ ಇತರ ಸಿಬ್ಬಂದಿಗಳು ಹಾಜರಿದ್ದರು.
Comments
Post a Comment