"ಕೊಪ್ಪ ತಾಲ್ಲೂಕು ಹರಿಹರಪುರ ನೂತನ ನಾಡ ಕಚೇರಿಗೆ ಭೂಮಿಪೂಜೆ..!"

"ಕೊಪ್ಪ ತಾಲ್ಲೂಕು ಹರಿಹರಪುರ ನೂತನ ನಾಡ ಕಚೇರಿಗೆ ಭೂಮಿಪೂಜೆ..!"
ಕೊಪ್ಪ: 'ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಒಂದೊಂದು ಸಾಧನೆ ಮಾಡಿದೆ. ಕೃಷ್ಣಬೈರೇಗೌಡ ಅವರು ಕಂದಾಯ ಸಚಿವರಾಗಿ, ಕಟಾರಿಯಾ ಅವರು ಇಲಾಖೆ ಕಾರ್ಯದರ್ಶಿಯಾದ ಮೇಲೆ ಬಹುದೊಡ್ಡ ಬದಲಾವಣೆ ತಂದಿದ್ದಾರೆ. ಭೂಗಳ್ಳರನ್ನು ಮಟ್ಟ ಹಾಕುವ ಮೂಲಕ ನ್ಯಾಯಯುತವಾಗಿ ಹಕ್ಕುಪತ್ರ ಕೊಡಲು ಚಾಲನೆ ಕೊಟ್ಟಿದ್ದಾರೆ' ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಹರಿಹರಪುರದಲ್ಲಿ ಭಾನುವಾರ ನಾಡ ಕಚೇರಿ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, 'ಬಯಲುಸೀಮೆ ಭಾಗದಲ್ಲಿ ಕಂದಾಯ ಗ್ರಾಮ, ಉಪ ಕಂದಾಯ ಗ್ರಾಮದ ಒಂದೊಂದು ವಿಧಾನಸಭೆ ಕ್ಷೇತ್ರದಲ್ಲಿ ನಾಲೈದು ಸಾವಿರ ಹಕ್ಕುಪತ್ರ ಕೊಟ್ಟಿದ್ದಾರೆ. ನಮ್ಮ ಭಾಗದಲ್ಲಿ ಅರಣ್ಯ ತೊಡಕು ಹೆಚ್ಚಿದೆ' ಎಂದರು.
ಟಾಸ್ಕ್ ಫೋರ್ಸ್ ಸಮಿತಿ ರಚನೆ..
'ಶೃಂಗೇರಿ ಕ್ಷೇತ್ರದಲ್ಲಿ ಸಂಪರ್ಕಿಸಿ ಟಾಸ್ಕ್ ಫೋರ್ಸ್ ಸಮಿತಿ ರಚಿಸುವಂತೆ ಮಾಡಿದ್ದೇನೆ. ಇದರಿಂದ ಡಿ.ಸಿ ಅರಣ್ಯ ಇಲಾಖೆಗೆ ಮೀಸಲು ಮಾಡಿದ ಜಾಗವನ್ನು ಕಂದಾಯ ಇಲಾಖೆಗೆ ಪಡೆದುಕೊಳ್ಳಲು ಸಮಿತಿ ಅವಶ್ಯಕತೆ ಇದೆ. ಅದೂ ಈಗ ಸರ್ವೆ ಕೆಲಸ ಶುರುವಾಗಿದೆ.

ಹರಿಹರಪುರ ಪಟ್ಟಣದಲ್ಲಿ ಮುಂದಿನ ತಿಂಗಳು ರಸ್ತೆ ವಿಸ್ತರಣೆ ಬಗ್ಗೆ ಸಾರ್ವಜನಿಕರ ಸಭೆ ನಡೆಸಲಾಗುವುದು. ರಸ್ತೆ ವಿಸ್ತರಣೆಯಾದರೆ ವ್ಯಾಪಾರ, ವ್ಯವಹಾರ ವೃದ್ಧಿಯಾಗುತ್ತದೆ.ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಟಿ.ಡಿ.ರಾಜೇಗೌಡ, ಶಾಸಕ ಸರ್ವೆ ಮಾಡುವ ಮೊದಲು ಆ ಭಾಗದ ಜನರಿಗೆ ಅಧಿಕಾರಿಗಳು ಮಾಹಿತಿ ನೀಡಬೇಕು' ಎಂದು ತಿಳಿಸಿದರು.

'ಕಂದಾಯ ಇಲಾಖೆ ಅಧಿಕಾರಿಗಳು ನಿಮ್ಮ ಜಾಗ ಮೊದಲು ಉಳಿಸಿಕೊಳ್ಳಿ. ಕಾಡು ಬೇಕು ನಿಜ. ಶೇ 33ರಷ್ಟು ಕಾಡು ಕಡಿಮೆಯಾಗಿದೆ. ಭವಿಷ್ಯದಲ್ಲಿ ಮಕ್ಕಳಿಗೆ ಕಾಡು ಇರುವುದಿಲ್ಲ. ಆದರೆ, ಜನಸಂಖ್ಯೆ ಬೆಳೆದಂತೆ ಅಷ್ಟೇ ಪ್ರಮಾಣದಲ್ಲಿ ಭೂಮಿ ಒತ್ತುವರಿಯಾಗಿ ಕೃಷಿ ಚಟುವಟಿಕೆ ನಡೆಯುತ್ತಿದೆ. ಭೂಮಿ ಮಂಜೂರು ಮಾಡುವಲ್ಲಿ ನಾಟಕ ಮಾಡುವ ಅಧಿಕಾರಿಗಳಿಗೆ ನನ್ನ ಕ್ಷೇತ್ರದಲ್ಲಿ ಇರಲು ಅವಕಾಶವಿಲ್ಲ' ಎಂದು ಅವರು ಎಚ್ಚರಿಸಿದರು.

ಇಂದು ₹65 ಲಕ್ಷ ವೆಚ್ಚದಲ್ಲಿ ನಾಡ ಕಚೇರಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ತಾಲ್ಲೂಕು ಕಚೇರಿಗೆ ₹2.50 ಕೋಟಿ ವೆಚ್ಚದಲ್ಲಿ ಚಾವಣಿ, ಶೃಂಗೇರಿಯಲ್ಲಿ
ಕಟ್ಟಡ ನವೀಕರಣ, ಆಸ್ಪತ್ರೆ, ಶಿಕ್ಷಣ ಇಲಾಖೆಗೆ ಒತ್ತು ಕೊಟ್ಟು ಕೆಲಸ ಮಾಡುತ್ತಿದ್ದೇನೆ. ರಸ್ತೆ ಕಾಮಗಾರಿ ನಡೆಯುತ್ತಿದೆ. ಕಳಪೆ ಕಾಮಗಾರಿ ಆಗಿದ್ದರೆ ನನ್ನ ಗಮನಕ್ಕೆ ತನ್ನಿ ಎಂದು ಶಾಸಕರು ಹೇಳಿದರು.

ಮುಖಂಡ ಕೆ.ಟಿ.ಮಿತ್ರ ಪ್ರಾಸ್ತಾವಿ ಕವಾಗಿ ಮಾತನಾಡಿ, ಈಗಿರುವ ನಾಡ ಕಚೇರಿ ಬ್ರಿಟಿಷರ ಕಾಲದ ಕಟ್ಟಡ. ಕೊಪ್ಪದ ಮೊದಲ ತಾಲ್ಲೂಕು ಕಚೇರಿಯಾಗಿತ್ತು. ಶಾಸಕರು ಮುತುವರ್ಜಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ-ದ್ದಾರೆ ಎಂದರು.

ಹರಿಹರಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ಸತ್ಯನಾರಾಯಣ ಮಾತನಾಡಿ, ಸಾಕಷ್ಟು ಸಮಯದಿಂದ ಹಳೆಯ ಕಟ್ಟಡ ಇದ್ದು, ಇದೀಗ ಹೊಸ ಕಟ್ಟಡ ನಿರ್ಮಾಣವಾಗುತ್ತಿರುವುದು ಕೊಪ್ಪ ತಾಲ್ಲೂಕು ಹರಿಹರಪುರ ನಾಡ ಕಚೇರಿ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಟಿ.ಡಿ.ರಾಜೇಗೌಡ ಭೂಮಿ ಪೂಜೆ ನೆರವೇರಿಸಿದರು.
'ಸರ್ವೆಗೆ ಬಂದಾಗ ತಪ್ಪಾಗಿ ಭಾವಿಸಬೇಡಿ'
ತಹಶೀಲ್ದಾ‌ರ್ ಲಿಖಿತಾ ಮೋಹನ್ ಮಾತನಾಡಿ, 'ಒಂದೊಂದು ಸರ್ವೆ ನಂಬರ್‌ಗೂ ಖುದ್ದಾಗಿ ಹೋಗಿ ಸರ್ವೆ ಮಾಡಿಸುತ್ತಿದ್ದೇನೆ.ಹೋಗಿದ್ದಾಗ ಜನರು ಹೆದರುತ್ತಿದ್ದಾರೆ.ನಾವು ಡಿ.ಸಿಮೀಸಲು ಅರಣ್ಯ ಸಮಸ್ಯೆ ನಿವಾರಿಸಲು ಮುಂದಾಗಿದ್ದೇವೆ. ಇದು ಬಗೆಹರಿದರೆ ಶೇ 80ರಷ್ಟು ಮಲೆನಾಡು ಭಾಗದ ಸಮಸ್ಯೆ ನಿವಾರಣೆಯಾದಂತೆ.ಸರ್ವೆಗೆ ಬಂದಾಗ ಯಾರೂ ತಪ್ಪಾಗಿ ಭಾವಿಸಬೇಡಿ, ಸಮಸ್ಯೆ ನಿವಾರಿಸಲು ಮುಂದಾಗಿದ್ದೇವೆ, ಎಲ್ಲರೂ ಸಹಕಾರ ನೀಡಿ' ಎಂದು ಹೇಳಿದರು.

ಶಾಸಕ ರಾಜೇಗೌಡ ಅವರು, 'ಕಂದಾಯ ಇಲಾಖೆ ಅಧಿಕಾರಿಗಳು ಗಟ್ಟಿಯಾಗಿ ನಿಂತು ಭೂಮಿ ಉಳಿಸಿಕೊಳ್ಳಬೇಕು. ರೈತರಿಗೆ ನ್ಯಾಯ ಕೊಡಬೇಕು. ರೈತರಿಗೆ ಭೂಮಿ ಉಳಿಸಿಕೊಟ್ಟರೆ ಅದೇ ನನಗೆ ನೆಮ್ಮದಿ ಹಾಗೂ ಖುಷಿಯ ವಿಚಾರ ಎಂದರು.
ಹರಿಹರಪುರ ಗ್ರಾಮ ಪಂಚಾಯಿತಿ ಸದಸ್ಯರಾದ ಮಹಮ್ಮದ್ ಷರೀಫ್, ಆಶಾ ಆದರ್ಶ, ವೀಣಾ, ಉಪ ತಹಶೀಲ್ದಾರ್ ನಾಗರಾಜ್, ಕಂದಾಯ ನಿರೀಕ್ಷಕ ವಿನಯ್, ಕೆಡಿಪಿ ಸದಸ್ಯರು,
ಭೂ ಮಂಜೂರಾತಿ ಸಮಿತಿ ಸದಸ್ಯರು, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರು, ಹರಿಹರಪುರ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "

" ಶೃಂಗೇರಿಯಲ್ಲಿ ಭೀಕರ ಅಪಘಾತ "