"ಎನ್.ಆ‌ರ್.ಪುರಕ್ಕೆ ಆನೆ ದಂಡು: 26 ಕಾಡಾನೆಗಳಿಂದ ಹೈ ಅಲರ್ಟ್, ಜನರಲ್ಲಿ ತೀವ್ರ ಆತಂಕ!"

"ಎನ್.ಆ‌ರ್.ಪುರಕ್ಕೆ ಆನೆ ದಂಡು: 26 ಕಾಡಾನೆಗಳಿಂದ ಹೈ ಅಲರ್ಟ್, ಜನರಲ್ಲಿ ತೀವ್ರ ಆತಂಕ!"
ಎನ್.ಆರ್.ಪುರ: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ನಿರಂತರವಾಗಿದ್ದು, ನರಸಿಂಹರಾಜಪುರ ತಾಲೂಕಿನಲ್ಲಿ ಇದು ತೀವ್ರ ಸ್ವರೂಪ ಪಡೆದುಕೊಂಡಿದೆ. ಕಾಡಾನೆಗಳ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹಾಗೂ ಜಿಲ್ಲಾ ಆನೆ ಕಾರ್ಯಪಡೆ ಸಾರ್ವಜನಿಕರಿಗೆ ಹೈ ಅಲರ್ಟ್‌ ಘೋಷಿಸಿದೆ. ತಾಲೂಕಿನ ಹೊರವಲಯದ ಕಡಹಿನಬೈಲು ವ್ಯಾಪ್ತಿಯಲ್ಲಿ ಸುಮಾರು 17 ಕಾಡಾನೆಗಳ ಬೃಹತ್ ಹಿಂಡು ಬೀಡುಬಿಟ್ಟಿದ್ದರೆ, ಮುತ್ತಿನಕೊಪ್ಪ ಬಳಿ 9 ಕಾಡಾನೆಗಳು ಕಾಣಿಸಿಕೊಂಡು ಜನರಲ್ಲಿ ತೀವ್ರ ಆತಂಕ ಮೂಡಿಸಿವೆ.

ಒಟ್ಟು 26ಕ್ಕೂ ಅಧಿಕ ಆನೆಗಳು ಈ ಭಾಗದಲ್ಲಿ ಸಂಚರಿಸುತ್ತಿರುವುದರಿಂದ, ಗ್ರಾಮಸ್ಥರು ಹಾಗೂ ವಾಹನ ಸವಾರರು ತೀವ್ರ ಜಾಗೃತಿ ವಹಿಸುವಂತೆ ಇಲಾಖೆ ಮನವಿ ಮಾಡಿದೆ. ಮುಂಜಾನೆ ಮತ್ತು ಸಂಜೆ ವೇಳೆ ತೋಟ ಹಾಗೂ ಕಾಡು ದಾರಿಗಳಲ್ಲಿ ಸಂಚರಿಸುವಾಗ ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಆನೆಗಳು ಕಂಡಲ್ಲಿ ತಕ್ಷಣ ಅರಣ್ಯ ಇಲಾಖೆಯ ಗಮನಕ್ಕೆ ತರುವಂತೆ ಸೂಚಿಸಲಾಗಿದೆ.

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "

" ಶೃಂಗೇರಿಯಲ್ಲಿ ಭೀಕರ ಅಪಘಾತ "