ಸ್ವಚ್ಛತೆ ಕಾಪಾಡದ ಪಿಜಿಗಳಿಗೆ ಶಾಕ್ ನೀಡಿದ ಅಧಿಕಾರಿಗಳು..!"
"ಸ್ವಚ್ಛತೆ ಕಾಪಾಡದ ಪಿಜಿಗಳಿಗೆ ಶಾಕ್ ನೀಡಿದ ಅಧಿಕಾರಿಗಳು..!"
ಬೆಂಗಳೂರಿನಲ್ಲಿ ಸ್ವಚ್ಛತೆ ಕಾಪಾಡದ ಪೇಯಿಂಗ್ ಗೆಸ್ಟ್ (ಪಿಜಿ) ಮಾಲೀಕರಿಗೆ ಬಿಬಿಎಂಪಿ ಭಾರಿ ಬಿಸಿ ಮುಟ್ಟಿಸಿದೆ. ನಗರದ ವಿವಿಧೆಡೆ ದಾಳಿ ನಡೆಸಿದ ಅಧಿಕಾರಿಗಳು, ನಿಯಮ ಉಲ್ಲಂಘಿಸಿದ ಪಿಜಿಗಳಿಗೆ ಬರೋಬ್ಬರಿ 1.96 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಸರಿಯಾದ ತ್ಯಾಜ್ಯ ವಿಲೇವಾರಿ ಮಾಡದ ಮತ್ತು ಅಶುಚಿಯಾಗಿರಿಸಿದ್ದ ಪಿಜಿಗಳ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ತಪಾಸಣೆ ಇನ್ನಷ್ಟು ತೀವ್ರಗೊಳಿಸುವುದಾಗಿ ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
Comments
Post a Comment