"ತಾಯಿಯನ್ನು ಕೊಲೆಗೈದ ಪ್ರಕರಣದಿಂದ ಮಗನ ಖುಲಾಸೆ...!"

"ತಾಯಿಯನ್ನು ಕೊಲೆಗೈದ ಪ್ರಕರಣದಿಂದ ಮಗನ ಖುಲಾಸೆ...!"

ಚಿಕ್ಕಮಗಳೂರು: ತನ್ನ ತಾಯಿಯನ್ನೇ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ ಬಾಲಕನನ್ನು ಪ್ರಕರಣದಿಂದ ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ.

ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎಚ್‌.ಪಿ. ಸಂದೇಶ್ ಮತ್ತು ಟಿ. ವೆಂಕಟೇಶ್ ನಾಯ್ಕ ಅವರಿದ್ದ ವಿಭಾಗೀಯ ಪೀಠವು ವಜಾಗೊಳಿಸಿದೆ. ಆರೋಪಿಯನ್ನು ಅಪರಾಧಕ್ಕೆ ಲಿಂಕ್ ಮಾಡುವ ಬಲವಾದ ಸಾಕ್ಷ್ಯಾಧಾರಗಳನ್ನು ಒದಗಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಘಟನೆಗೆ ಸಂಬಂಧಿಸಿದಂತೆ, ಕೊಲೆ ಮಾಡಲು 19 ಗಂಟೆಗಳ ಹಿಂದೆ
ಬಳಸಲಾದ ಆಯುಧವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಲ್ಲ ಹಾಗೂ ವಶಪಡಿಸಿಕೊಂಡಿದ್ದ ಚಾಕುವಿನಲ್ಲಿದ್ದ ರಕ್ತದ ಕಲೆಯ ಬಗ್ಗೆ ಯಾವುದೇ ವೈಜ್ಞಾನಿಕ ವರದಿಗಳನ್ನು ಸಲ್ಲಿಸಲಾಗಿಲ್ಲ ಎಂಬುದು ಗಮನಾರ್ಹವಾಗಿದೆ. 2015ರಲ್ಲಿ ಚಿಕ್ಕಮಗಳೂರು ಅಜ್ಜಂಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿತ್ತು. ಮೃತರಾದ ಆರತಿ ಬಾಯಿ ಅವರಿಗೆ ಕುಡಿತದ ಚಟವಿದ್ದು, ಮನೆಯಲ್ಲಿ ಪ್ರತಿನಿತ್ಯ ಜಗಳ ನಡೆಯುತ್ತಿತ್ತು ಎನ್ನಲಾಗಿದ್ದು, ಈ ವೇಳೆ ನಡೆದ ಗಲಾಟೆಯಲ್ಲಿ ಮಗ ತಾಯಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ

ಪ್ರಕರಣದ ವಿಚಾರಣೆ ನಡೆಸಿದ ಬಾಲನ್ಯಾಯ ಮಂಡಳಿಯು ಬಾಲಕನನ್ನು ಅಪರಾಧಿ ಎಂದು ತೀರ್ಪು ನೀಡಿತ್ತು. ಆದರೆ ಇದರ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಚಿಕ್ಕಮಗಳೂರಿನ 1ನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಬಾಲಕನನ್ನು ಬಿಡುಗಡೆ ಮಾಡಿತ್ತು. ಇದೀಗ ಹೈಕೋರ್ಟ್ ಕೂಡ ಎಫ್‌ಎಸ್‌ಎಲ್ ವರದಿಯ ಲಭ್ಯತೆ ಇಲ್ಲದಿರುವುದು ಮತ್ತು ಸಾಕ್ಷಿಗಳ ಹೇಳಿಕೆ ಬದಲಾಗಿರುವುದನ್ನು ಗಮನಿಸಿ, ಕೆಳಹಂತದ ನ್ಯಾಯಾಲಯದ ತೀರ್ಪಿನಲ್ಲಿ ಯಾವುದೇ ದೋಷವಿಲ್ಲವೆಂದು ಸ್ಪಷ್ಟಪಡಿಸಿ ಸರ್ಕಾರದ ಅರ್ಜಿಯನ್ನು ವಜಾಗೊಳಿಸಿದೆ.

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "

" ಶೃಂಗೇರಿಯಲ್ಲಿ ಭೀಕರ ಅಪಘಾತ "