"ರಿಪ್ಪನ್ ಪೇಟೆ ಸಮೀಪ ಎರಡು ಬೈಕ್ ನಡುವೆ ಭೀಕರ ಅಪಘಾತ...!"
"ರಿಪ್ಪನ್ ಪೇಟೆ ಸಮೀಪ ಎರಡು ಬೈಕ್ ನಡುವೆ ಭೀಕರ ಅಪಘಾತ...!"
ಹೊಸನಗರ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ದೂನ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಎರಡು ಬೈಕ್‌ಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ದೂನ ಸಮೀಪದ ನರ್ಸರಿ ಮುಂಭಾಗದಲ್ಲಿ ಟಿ.ವಿ.ಎಸ್ ಎಕ್ಸೆಲ್ ಮತ್ತು ಬಜಾಜ್ ಪಲ್ಸರ್ ಬೈಕ್‌ಗಳ ನಡುವೆ ಈ ದುರ್ಘಟನೆ ನಡೆದಿದೆ.
ಅಪಘಾತದ ತೀವ್ರತೆಗೆ, ಟಿವಿಎಸ್ ಎಕ್ಸೆಲ್ ಬೈಕ್ ಸವಾರರಾದ ಗುಬ್ಬಿಗ ಗ್ರಾಮದ ಸತ್ಯನಾರಾಯಣ್ ಭಟ್ ಅವರ ತಲೆಗೆ ಗಂಭೀರ ಗಾಯಗಳಾಗಿವೆ. ಮತ್ತೊಂದೆಡೆ, ಪಲ್ಸರ್ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಹೊಸನಗರ ಸಮೀಪದ ಜಯನಗರ ನಿವಾಸಿ ರಾಕೇಶ್ (27)ಎಂಬುವರ ಕಾಲು ಮುರಿತವಾಗಿದೆ. ಗಾಯಗೊಂಡ ಇಬ್ಬರು ಸವಾರರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Comments
Post a Comment