"ಹಿಟ್ ಅಂಡ್ ರನ್‌ಗೆ ಗೃಹಿಣಿ ನವಮಿ ಬಲಿ : ಆಲ್ದೂರು ಹಿಂದೂ ಸಮಾಜೋತ್ಸವ ಮುಂದೂಡಿಕೆ..!"
"ಹಿಟ್ ಅಂಡ್ ರನ್‌ಗೆ ಗೃಹಿಣಿ ನವಮಿ ಬಲಿ : ಆಲ್ದೂರು ಹಿಂದೂ ಸಮಾಜೋತ್ಸವ ಮುಂದೂಡಿಕೆ..!"
ಚಿಕ್ಕಮಗಳೂರು : ಜಿಲ್ಲೆಯ ಆಲ್ದೂರುನಲ್ಲಿ ಮೊನ್ನೆ ಬೆಳಿಗ್ಗೆ ರಸ್ತೆ ಅಪಘಾತ ಸಂಭವಿಸಿದೆ. ಟೆಂಪೋ ಟ್ರಾವೆಲರ್ ಒಂದು ಗೃಹಿಣಿ ನವಮಿಗೆ ಡಿಕ್ಕಿ ಹೊಡೆದಿದೆ. ಇದರಿಂದ ನವಮಿ ಸಾವನ್ನಪ್ಪಿದ್ದಾರೆ. ಈ ಸಾವಿನ ಹಿನ್ನಲೆಯಲ್ಲಿ ಇಂದು ಆಲ್ದೂರುನಲ್ಲಿ ನಡೆಯಬೇಕಾಗಿದ್ದ ಹಿಂದೂ ಸಮಾಜೋತ್ಸವವನ್ನು ಮುಂದೂಡಲಾಗಿದೆ.
ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರು ಬಳಿ ರಸ್ತೆ ಅಪಘಾತ ಸಂಭವಿಸಿ ಗೃಹಿಣಿ ನವಮಿ(30) ಮೃತಪಟ್ಟಿದ್ದಾರೆ. ಪ್ರವಾಸಕ್ಕೆ ಬಂದಿದ್ದವರ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದು ಗೃಹಿಣಿ ನಮಮಿ ಮೃತಪಟ್ಟಿದ್ದಾರೆ. ಬಳಿಕ ಟೆಂಪೋ ಟ್ರಾವೆಲರ್ ನಿಲ್ಲಿಸದೇ, ಚಾಲಕ ಪರಾರಿಯಾಗಿದ್ದಾನೆ. ಮೃತಪಟ್ಟ ನವಮಿ ಆಲ್ದೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಉದ್ಯೋಗದಲ್ಲಿದ್ದರು. ಆಲ್ದೂರು ಪೊಲೀಸ್ ಠಾಣೆಯಲ್ಲಿ ಈ ಅಪಘಾತದ ಬಗ್ಗೆ ಕೇಸ್ ದಾಖಲಾಗಿದ್ದು ಪೊಲೀಸರು ಅಪಘಾತ ಮಾಡಿದ ವಾಹನಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಟೆಂಪೋ ಟ್ರಾವೆಲರ್ ನಂಬರ್ ಸಿಕ್ಕಿದ್ದು, ಅದಕ್ಕಾಗಿ ಹುಡುಕಾಟ ನಡೆಸಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರು ಆರ್‌ಟಿಓ ರಿಜಿಸ್ಟ್ರೇಷನ್ ಆಗಿರುವ ಟೆಂಪೋ ಟ್ರಾವೆಲರ್ ಅಪಘಾತವೆಸಗಿ ಸ್ಥಳದಿಂದ ಪರಾರಿಯಾಗಿದೆ.
ಆಲ್ದೂರು ಗ್ರಾಮದ ಬಳಿ ನಡೆದ ಹಿಟ್ ಅಂಡ್ ರನ್ ನಲ್ಲಿ ಗೃಹಿಣಿ ನವಮಿ ಮೃತಪಟ್ಟ ಹಿನ್ನಲೆಯಲ್ಲಿ ಮೊನ್ನೆ ಆಲ್ದೂರು ಹೋಬಳಿಯಲ್ಲಿ ನಡೆಯಬೇಕಾಗಿದ್ದ ಹಿಂದೂ ಸಮಾಜೋತ್ಸವವನ್ನು ಮುಂದೂಡಲಾಗಿದೆ.
Comments
Post a Comment