"ಬೆಳ್ಳಮ್ ಬೆಳಿಗ್ಗೆ ಕಾರ್ ಹಾಗೂ ಬೈಕ್ ನಡುವೆ ಮುಕಾಮುಖಿ ಡಿಕ್ಕಿ: ಬೈಕ್ ಚಾಲಕ ಆಸ್ಪತ್ರೆಗೆ ದಾಖಲು "
"ಬೆಳ್ಳಮ್ ಬೆಳಿಗ್ಗೆ ಕಾರ್ ಹಾಗೂ ಬೈಕ್ ನಡುವೆ ಮುಕಾಮುಖಿ ಡಿಕ್ಕಿ: ಬೈಕ್ ಚಾಲಕ ಆಸ್ಪತ್ರೆಗೆ ದಾಖಲು "
ಹರಿಹರಪುರ : ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರ ಪುರದಲ್ಲಿ ಬೆಳ್ಳಂ ಬೆಳಗ್ಗೆ ಸುಮಾರು 9:00 am ಗೆ ಕೊಪ್ಪದಿಂದ ಬರುತ್ತಿದ್ದ ಕಾರೊಂದಕ್ಕೆ ಬೈಕ್ ಚಾಲಕ ನ ಅಜಾಗರೂಕತೆ ಯಿಂದ ಬೈಕ್ ಅನ್ನು ತಿರುಗಿಸುವ ಭರದಲ್ಲಿ ಮುಂಭಾಗದಿಂದ ಬರುತ್ತಿದ್ದ ಕಾರೊಂದಕ್ಕೆ ಪರಸ್ಪರ ಡಿಕ್ಕಿ ಹೊಡೆದು ಬೈಕ್ ಸವಾರನಿಗೆ ಮುಖಕ್ಕೆ ಬಲವಾದ ಏಟು ಬಿದ್ದಿದ್ದರಿಂದ ಆಸ್ಪತ್ರೆಗೆ ಸೇರಿಸಲಾಗಿದೆ.
ಕಾರು ಸವಾರರು ಕೊಪ್ಪದ ನಿವಾಸಿ ಪೂರ್ಣೇಶ್ ಇವರು ಶೃಂಗೇರಿ ಕಡೆಗೆ ಹೋಗುತ್ತಿದ್ದಾಗ ಹರಿಹರಪುರದಲ್ಲಿ ಇವರ ಕಾರಿಗೆ ಬೈಕ್ ಸವಾರ ವಿಜಯೇಂದ್ರ ರಭಸವಾಗಿ ಗುದ್ದಿದ್ದಾರೆ.
ಪೂರ್ಣೇಶ್ ಕಳಸ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ ವೃತ್ತಿಯಲ್ಲಿದ್ದು ಅಪಘಾತವನ್ನು ತಪ್ಪಿಸಲು ಸಲುವಾಗಿ ರಸ್ತೆಯ ಎಡಭಾಗಕ್ಕೆ ಗುಂಡಿ ಇದ್ದ ಕಾರಣ ಇವರ ಕಾರು ರಸ್ತೆಯ ಗುಂಡಿಗೆ ಬಿದ್ದಿ ದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ. ಇವರಿಗೆ ಜೀವಕ್ಕೆ ಯಾವುದೇ ತರದಹಾನಿ ಉಂಟಾಗಿಲ್ಲ. ಅಘಾತಕ್ಕೆ ಒಳಗಾದ ಕಾರಿನ ಮುಂಭಾಗ ನಜ್ಜು ಗುಜ್ಜಾಗಿದೆ.
ಬೈಕ್ ಸವಾರ ವಿಜಯೇಂದ್ರ ಹರಿಹರಪುರ ಸಮೀಪ ಕಾರ್ಬೈಲ್ (ಮಾರ್ಡಿ ) ಯವರು ಎಂದು ತಿಳಿಯಲಾಗಿದೆ. ಇವರು ಕೂಡಾ ಹೆಲ್ಮೆಟ್ ಧರಿಸಿದಿದ್ದರಿಂದ ಯಾವುದೇ ರೀತಿಯ ಪ್ರಾಣ ಹಾನಿಯಿಂದ ಪಾರಾಗಿದ್ದಾರೆ.
Comments
Post a Comment