" ಕೊಪ್ಪ. ಬಾಳೆಹೊನ್ನೂರು. ಜಯ ಪುರ. ಮೂಡಿಗೆರೆ ಠಾಣೆಯ P.S.I ಗಳ ವರ್ಗಾವಣೆ..!"

" ಕೊಪ್ಪ. ಬಾಳೆಹೊನ್ನೂರು. ಜಯ ಪುರ. ಮೂಡಿಗೆರೆ ಠಾಣೆಯ P.S.I ಗಳ ವರ್ಗಾವಣೆ..!"
ಚಿಕ್ಕಮಗಳೂರು: ಜಿಲ್ಲೆಯಲ್ಲಿರುವ ಕೆಲವು ಪೊಲೀಸ್ ಠಾಣೆಗಳ ಪಿ ಎಸ್ ಐ ಅಧಿಕಾರಿಗಳ ಬದಲಾವಣೆ ಮಾಡಲಾಗಿದೆ. ಅದರಲ್ಲಿ 
ಜಯಪುರ, ಬಾಳೆಹೊನ್ನೂರು, ಮೂಡಿಗೆರೆ, ಸೇರಿದಂತೆ P.S.I ಗಳ ವರ್ಗಾವಣೆಗೊಳಿಸಲಾಗಿತ್ತು. ಪಶ್ಚಿಮ ವಲಯದ ಪಿ.ಎಸ್‌.ಐ ರವರನ್ನು ವರ್ಗಾವಣೆಗೊಳಿಸಿದ ಸ್ಥಳಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ಸಾರ್ವಜನಿಕ ಹಿತದೃಷ್ಟಿ ಮತ್ತು ಆಡಳಿತಾತ್ಮಕ ಕಾರಣಗಳಿಗಾಗಿ ಮುಂದಿನ ಆದೇಶವರೆಗೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. ಇದೀಗ ಕೊಪ್ಪದ ಪಿ.ಎಸ್‌.ಐ ಅವರು ವರ್ಗಾವಣೆಗೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಠಾಣೆಯ ಬಸವರಾಜ ಜಿ.ಕೆ ಅವರನ್ನು ಡಿ.ಸಿ.ಆರ್‌.ಬಿ ಘಟಕ ದಕ್ಷಿಣ ಕನ್ನಡ ಜಿಲ್ಲೆ ಠಾಣೆಗೆ ದಕ್ಷಿಣ ಕನ್ನಡ ಜಿಲ್ಲೆ ಠಾಣೆಯ ಮಧು ಬಿ.ಇ., ಅವರನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಜಯಪುರ ಠಾಣೆಯ ಪಿ.ಎಸ್‌.ಐ ಅಂಬರೀಷ ಅವರನ್ನು ಬಾಳೆಹೊನ್ನೂರು ಠಾಣೆಗೆ ಹಾಗೂ ಬಾಳೆಹೊನ್ನೂರು ಠಾಣೆಯ ಪಿ.ಎಸ್‌.ಐ ರವೀಶ ಅವರನ್ನು ಜಯಪುರ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಮೂಡಿಗೆರೆ ಠಾಣೆಯ ಪಿ.ಎಸ್‌.ಐ ಶ್ರೀನಾಥ್ ರೆಡ್ಡಿ ಅವರನ್ನು ಗೋಣಿಬೀಡು ಠಾಣೆಗೆ ಮತ್ತು ಗೋಣಿಬೀಡು ಠಾಣೆಯ ಪಿ.ಎಸ್‌.ಐ ಹರ್ಷವರ್ಧನ ಹೆಚ್.ಕೆ ಅವರನ್ನು ಮೂಡಿಗೆರೆ ಠಾಣೆಗೆ ನಿಯುಕ್ತಿಗೊಳಿಸಿ ಆದೇಶ ಹೊರಡಿಸಲಾಗಿದೆ.

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "

" ಶೃಂಗೇರಿಯಲ್ಲಿ ಭೀಕರ ಅಪಘಾತ "