ಧಾರವಾಡ ಯುವತಿ ಕೊಲೆ ಪ್ರಕರಣ: ಆರೋಪಿಯ ಬಂಧನ; S.P.ಸ್ಪೋಟಕ ಮಾಹಿತಿ..!

ಧಾರವಾಡ ಯುವತಿ ಕೊಲೆ ಪ್ರಕರಣ: ಆರೋಪಿಯ ಬಂಧನ; S.P.ಸ್ಪೋಟಕ ಮಾಹಿತಿ..!
ಧಾರವಾಡ : ನಿನ್ನೆ ನಡೆದ ಯುವತಿಯ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಆರೋಪಿ ಹತ್ಯೆ ಮಾಡಿ ಸ್ಥಳದಲ್ಲಿದ್ದ ಎಂಬ ಸ್ಪೋಟಕ ಮಾಹಿತಿ ತನಿಖೆಯಿಂದ ಹೊರಬಂದಿದೆ. ಇದೀಗ ಆತನನ್ನೇ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಧಾರವಾಡದ ಹೊರವಲಯದಲ್ಲಿ ಯುವತಿಯ ಶವವೊಂದು ಹತ್ಯೆಯಾದ ರೀತಿಯಲ್ಲಿ ಪತ್ತೆಯಾಗಿತ್ತು. ಝಕಿಯಾ ಮುಲ್ಲಾ (21) ಹತ್ಯೆಯಾದ ಯುವತಿ. ಆಕೆಯ ಆತ್ಮೀಯ ಸ್ನೇಹಿತ ಸಾಬೀರ್ ಮುಲ್ಲಾ ಎಂಬಾತ ವೇಲ್​ನಿಂದ ಕತ್ತು ಹಿಸುಕಿ ಆಕೆಯನ್ನು ಕೊಲೆ ಮಾಡಿದ್ದಾನೆ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಮಾತನಾಡಿದ್ದು, ‘ಮೃತ ಯುವತಿಯ ಸ್ನೇಹಿತ ಸಾಬೀರ್ ಎಂಬಾತ ಕಳೆದ ಮೂರ್ನಾಲ್ಕು ವರ್ಷಗಳಿಂದ ಆ ಹುಡುಗಿಯೊಂದಿಗೆ ಸಂಪರ್ಕದಲ್ಲಿದ್ದ. ನಮಗೆ ಬಂದ ಮಾಹಿತಿ ಪ್ರಕಾರ ಅವರ ಕುಟುಂಬಸ್ಥರಿಗೆ ಇವರಿಬ್ಬರ ಮದುವೆ ಮಾಡುವುದಕ್ಕೆ ಇಷ್ಟ ಇತ್ತು. ಈ ವಿಚಾರವಾಗಿ ಸ್ವಲ್ಪ ಅಸಮಾಧಾನ ಬಂದಿದೆ. ಹೀಗಾಗಿ 20ನೇ ತಾರೀಖು ಸಾಬೀರ್ ಝಕಿಯಾ ಅವರನ್ನು ಹತ್ಯೆ ಮಾಡಿದ್ದಾನೆ. ನಿನ್ನೆ ರಾತ್ರಿ 12 ಗಂಟೆಗೆ ತಾಂತ್ರಿಕ ದಾಖಲೆ ಆಧಾರದ ಮೇಲೆ ಸಾಬೀರ್​ನನ್ನು ಬಂಧಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಕೊಲೆ ಪ್ರಕರಣದಲ್ಲಿ ಒಬ್ಬರ ಪಾತ್ರ ಕಂಡುಬರುತ್ತಿದೆ. ಆದರೆ, ನಮ್ಮ ತನಿಖೆ ಯಾವಾಗಲೂ ಕ್ಲೋಸ್ ಆಗಲ್ಲ. ಚಾರ್ಜ್​ಶೀಟ್ ನಂತರವೂ ನಡೆಯುತ್ತೆ. ಈ ಬಗ್ಗೆ ಏನಾದರೂ ಎವಿಡೆನ್ಸ್ ಸಿಕ್ಕರೆ ನಮ್ಮ ತನಿಖಾಧಿಕಾರಿಗಳ ಬಳಿಗೆ ಬನ್ನಿ, ನಂತರ ನಾವೇ ಪರಿಶೀಲಿಸುತ್ತೇವೆ. ಅನಂತರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

‘ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಇಬ್ಬರ ನಡುವೆ ಈ ಗಲಾಟೆ ನಡೆದಿದೆ. ಘಟನಾ ಸ್ಥಳದಲ್ಲಿ ಇನ್ನೊಬ್ಬರು ಇದ್ದರು. ನಮ್ಮ ತನಿಖೆ ಇನ್ನೂ ಮುಂದುವರೆದಿದೆ. ಇಬ್ಬರಿಗೂ ಮದುವೆ ಫಿಕ್ಸ್ ಆಗಿತ್ತು. ಎಂಗೇಜ್​​ಮೆಂಟ್​ ಬಗ್ಗೆ ನಮಗೆ ಮಾಹಿತಿ ಇಲ್ಲ’ ಎಂದು ಹೇಳಿದರು.

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "

" ಶೃಂಗೇರಿಯಲ್ಲಿ ಭೀಕರ ಅಪಘಾತ "