ಕಾಡಾನೆ ಅಟ್ಟಹಾಸ: 4ದಿನದಲ್ಲಿ ಮತ್ತೊಂದು ಬಲಿ.!

ಕಾಡಾನೆ ಅಟ್ಟಹಾಸ: 4ದಿನದಲ್ಲಿ ಮತ್ತೊಂದು ಬಲಿ.!
ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಾಡಾನೆಗಳ
ರೌದ್ರಾವತಾರ ಮುಂದುವರಿದಿದ್ದು, ಕೇವಲ ನಾಲ್ಕು ದಿನಗಳ ಅಂತರದಲ್ಲಿ ಆನೆ ದಾಳಿಗೆ ಮತ್ತೊಬ್ಬ ಮಹಿಳಾ ಕೂಲಿ ಕಾರ್ಮಿಕರು ಬಲಿಯಾಗಿದ್ದಾರೆ. ಭಾನುವಾರ ನಡೆದ ಈ ಘಟನೆಯಿಂದ ಸ್ಥಳೀಯರು ಆತಂಕಗೊಂಡಿದ್ದು, ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯ ವಿವರ:

ಕೊಪ್ಪ ಅರಣ್ಯ ವಿಭಾಗದ ಹುಣಸೆಹಳ್ಳಿ ಸಮೀಪದ ನಾಗೇಶಗೌಡರ ತೋಟದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ವಿಜಯನಗರ ಜಿಲ್ಲೆಯ ಕೂಡ್ಲಿಗಿ ಮೂಲದ ಬೋರಮ್ಮ ಎಂದು ಗುರುತಿಸಲಾಗಿದೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ದಾಳಿ ಮಾಡಿದ ಕಾಡಾನೆ, ಮಹಿಳೆಯನ್ನು ತುಳಿದು ಸಾಯಿಸಿದೆ.

ನಾಲ್ಕು ದಿನಗಳಲ್ಲಿ ಇದು ಎರಡನೇ ಸಾವು

ಇದೇ ತೋಟದಲ್ಲಿ ಕೇವಲ ನಾಲ್ಕು ದಿನಗಳ ಹಿಂದೆಯಷ್ಟೇ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಯಲ್ಲಪ್ಪ ಎಂಬುವವರು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದರು. ಒಂದೇ ವಾರದಲ್ಲಿ ಇಬ್ಬರು ಕಾರ್ಮಿಕರು ಪ್ರಾಣ ಕಳೆದುಕೊಂಡಿರುವುದು ತೋಟದ ಕಾರ್ಮಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.

ಸ್ಥಗಿತಗೊಂಡಿರುವ ಕಾರ್ಯಾಚರಣೆ

ಸರಣಿ ಸಾವುಗಳಿಂದ ಎಚ್ಚೆತ್ತಿದ್ದ ಅರಣ್ಯ ಇಲಾಖೆ, ಕಾಡಾನೆ ಸೆರೆಗೆ 7 ಕುಮ್ಮಿ ಆನೆಗಳನ್ನು ಸ್ಥಳಕ್ಕೆ ಕರೆತಂದಿತ್ತು. ಆದರೆ, ದಾಳಿ ಮಾಡುತ್ತಿರುವ ಕಾಡಾನೆಯು 'ಮದ' ಏರಿರುವುದರಿಂದ ಅತೀವ ಆಕ್ರಮಣಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸದ್ಯಕ್ಕೆ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "

" ಶೃಂಗೇರಿಯಲ್ಲಿ ಭೀಕರ ಅಪಘಾತ "